ಪುತ್ತೂರು : ಮುಳಿಯ ಜ್ಯುವೆಲ್ಸ್ ಪುತ್ತೂರು ಮತ್ತು ಬೆಳ್ತಂಗಡಿ ಶೋರೂಂನಲ್ಲಿ ನವೆಂಬರ್ 5 ರಿಂದ 14ರವರೆಗೆ ಚಿನ್ನೋತ್ಸವದ ಸಂಭ್ರಮ ನಡೆಯಲಿದೆ.
ದೀಪಾವಳಿ ಸಂದರ್ಭದಲ್ಲಿ ಅಷ್ಟ ಲಕ್ಷ್ಮೀಯರ ಆಶೀರ್ವಾದ ಚಿನ್ನಕೊಳ್ಳುವವರ ಮೇಲೆ ಇರಲಿದೆ ಎಂಬ ನಂಬಿಕೆ ಜನರಲ್ಲಿದೆ. ಈ ಚಿನ್ನೋತ್ಸವದಲ್ಲಿ ವಿವಿಧ ಬಗೆಯ ಆಭರಣಗಳಾದ ಕರಿಮಣಿಗಳು, ನೆಕ್ಲೆಸ್ಗಳು, ಹಾರಗಳು, 5 ಇನ್ 1 ಆಭರಣಗಳು, ಮಲ್ಲಿಗೆ ಮೊಗ್ಗು ಹಾರ ಮುಂತಾದ ಹಲವಾರು ಆಭರಣಗಳು ವಿಶೇಷ ಡಿಸೈನ್ಗಳೊಂದಿಗೆ ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯವಿದೆ. 75 ವರ್ಷಗಳ ಸಂಭ್ರಮದಲ್ಲಿರುವ ಮುಳಿಯ ಜ್ಯುವೆಲ್ಸ್ ಗ್ರಾಹಕರಿಗಾಗಿ 375 ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ನೀಡಿದೆ. ಜೊತೆಗೆ ಕಾರು, ಸ್ಕೂಟರ್‍ಗಳು, ಹಾಗೂ ಟಿವಿ ಸೇರಿದಂತೆ ಇನ್ನಿತರ 375ಕ್ಕೂ ಹೆಚ್ಚು ಬಹುಮಾನಗಳನ್ನು ನಿಮ್ಮದಾಗಿಸಿ ಕೊಳ್ಳಬಹುದಾಗಿದೆ. ಅದೇ ರೀತಿ ಗ್ರಾಹಕರಿಗಾಗಿ ಆಯ್ದ ಆಭರಣಗಳ ವಿಎ ಮೇಲೆ 50% ಕಡಿತವಿರಲಿದೆ. ಚಿನ್ನೋತ್ಸವದ ವಿಶೇಷವಾಗಿ ನಿತ್ಯ ಸಿರೀಸ್ ಅನಾವರಣ ಮಾಡಲಾಗಿದೆ. ದೀರ್ಘ ಬಾಳಿಕೆಯ ನಿತ್ಯ ಉಪಯೋಗದ ಆಭರಣಗಳು ಮತ್ತು ಬಳೆಗಳು 22 ಕ್ಯಾರೆಟ್ ನ ಫಿನಿಶಿಂಗ್ ಇರುತ್ತವೆ. ಈ ಹಿನ್ನೆಲೆಯಲ್ಲಿ ಮುಳಿಯ 18 ಕ್ಯಾರೆಟ್‍ನ ನಿತ್ಯ ಸಿರೀಸ್ ಆಭರಣಗಳನ್ನು ಪ್ರಪ್ರಥಮವಾಗಿ ಪ್ರಸ್ತುತಪಡಿಸುತ್ತಿದೆ. ಗಟ್ಟಿಯಾಗಿರುವಂತಹ ಈ ನಿತ್ಯ ಸಿರೀಸ್ ಬಳೆಗಳು ಅಗ್ಗ ಹಾಗೂ ಕಡಿಮೆ ಮತ್ತು 8% ಕಡಿಮೆ ದರದಲ್ಲಿ ಕೈಗೆಟಕುವ ದರದಲ್ಲಿ ನಿಮ್ಮ ಕೈ ಸೇರಲಿದೆ. ಉತ್ತರ ಭಾರತ ಹಾಗು ಮುಂದುವರಿದ ರಾಷ್ಟ್ರಗಳಲ್ಲಿ ಇದು ಪ್ರಚಲಿತದಲಿದೆ. ಚಿನ್ನದೊಂದಿಗೆ ನಿತ್ಯವೂ ಸಂಭ್ರಮಿಸಿ ಚಿನ್ನವನ್ನು ಯಾವಾಗಲೂ ತೊಟ್ಟರೇ ಚೆಂದ-ಅಂದ ಇದು ನಿತ್ಯ ಸಿರೀಸ್‍ನ ವಿಶೇಷ ಎಂದು ಸಂಸ್ಥೆಯ ಸಿ.ಎಂ.ಡಿ ಕೇಶವ ಪ್ರಸಾದ್ ಹೇಳಿದ್ದಾರೆ.