ಈಗಾಗಲೇ ರಾಜಸ್ಥಾನ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಹರಿಯಾಣ ರಾಜ್ಯಗಳು ಕೊರೋನಾ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ದೀಪಾವಳಿಯಂದು ಪಟಾಕಿ ಮಾರಾಟ, ಹಚ್ಚೋದಕ್ಕೆ ನಿಷೇಧ ಹೇರಿದೆ. ಇದೇ ಹಾದಿಯನ್ನು ಹಿಡಿಯಲು ರಾಜ್ಯ ಸರ್ಕಾರ ಕೂಡ ಹೊರಟಿದೆ. ಕರ್ನಾಟಕದಲ್ಲಿ ಕೂಡ ಈ ದೀಪಾವಳಿಯಲ್ಲಿ ಪಟಾಕಿ ನಿಷೇಧಿಸಲು ಮುಂದಾಗಿದೆ. ಇದು ಈಗಾಗಲೇ ಸೋಂಕಿತ COVID-19 ರೋಗಿಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ. ಹೀಗಾಗಿ ಈ ಬಾರಿಯ ದೀಪಾವಳಿಯಂದು ಪಟಾಕಿ ಮಾರಾಟ, ಹಂಚ್ಚೋದಕ್ಕೆ ನಿಷೇಧ ಹೇರುವ ಚಿಂತನೆ ನಡೆಸಲಾಗಿದೆ.
ಈ ಕುರಿತಂತೆ ಮಾತನಾಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಕೋವಿಡ್-19 ನಿರ್ವಹಣೆಗೆ ನೇಮಿಸಲಾಗಿರುವ ತಾಂತ್ರಿಕ ಸಮಿತಿಯ ಸದಸ್ಯರು ಈಗಾಗಲೇ ದೀಪಾವಳಿಯಂದು ಪಟಾಕಿ ನಿಷೇಧದ ಕುರಿತಂತೆ ಸಭೆ ನಡೆಸಲಾಗಿದೆ. ಇಂತಹ ಸಮಿತಿಯು ವರದಿ ನೀಡಿದ್ದು, ಕೋವಿಡ್-19 ರೋಗಿಗಳ ಶ್ವಾಸಕೋಶದ ಮೇಲೆ ಪಟಾಕಿಯಿಂದ ಉಂಟಾಗುವ ಮಾಲಿನ್ಯವು ಪರಿಣಾಮ ಬೀರಲಿದೆ. ಚೇತರಿಸಿಕೊಳ್ಳುತ್ತಿರುವಂತ ಕೊರೋನಾ ರೋಗಿಗಳ ಆರೋಗ್ಯದ ಮೇಲೂ ತೊಂದರೆ ಉಂಟು ಮಾಡಲಿದೆ. ಹೀಗಾಗಿ ಪಟಾಕಿ ನಿಷೇಧಿಸುವಂತೆ ವರದಿಯಲ್ಲಿ ತಿಳಿಸಿದೆ.
ಈ ಎಲ್ಲಾ ಕಾರಣಗಳಿಂದಾಗಿ ಈಗಾಗಲೇ ರಾಜಸ್ಥಾನ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಹರಿಯಾಣ ರಾಜ್ಯಗಳು ಕೊರೋನಾ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ದೀಪಾವಳಿಯಂದು ಪಟಾಕಿ ಮಾರಾಟ, ಹಚ್ಚೋದಕ್ಕೆ ನಿಷೇಧ ಹೇರಿದೆ. ಇದೇ ಮಾದರಿಯಲ್ಲಿ ರಾಜ್ಯದಲ್ಲೂ ಕೊರೋನಾ ಸೋಂಕಿತರ ಆರೋಗ್ಯದ ಹಿತದೃಷ್ಠಿಯಿಂದ ಪಟಾಕಿ ಹಚ್ಚಿ, ದೀಪಾವಳಿ ಆಚರಣೆಗೆ ನಿಷೇಧ ಹೇರುವ ಚಿಂತನೆಯನ್ನು ನಡೆಸಲಾಗಿದೆ. ಅಂತಿಮವಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಈ ಬಗ್ಗೆ ತೀರ್ಮಾನ ಕೈಗೊಂಡು, ತಮ್ಮ ನಿಲುವನ್ನು ಸದ್ಯದಲ್ಲಿಯೇ ಪ್ರಕಟಿಸಲಿದ್ದಾರೆ ಎಂಬುದಾಗಿ ತಿಳಿಸಿದರು.