Recent Posts

Monday, January 20, 2025
ಸುದ್ದಿ

ಕೋವಿಡ್ ಭೀತಿ ನಡುವೆಯೇ ಫೆಬ್ರವರಿಯಲ್ಲಿ ಏರ್ ಶೋ – ಕಹಳೆ ನ್ಯೂಸ್

ಬೆಂಗಳೂರು: ಕೋವಿಡ್ ಭೀತಿಯ ನಡುವೆಯೇ ಏರೋ ಇಂಡಿಯಾ 2021 ಆಯೋಜನೆ ಮಾಡಬೇಕಿದೆ. ಬೆಂಗಳೂರಿನಲ್ಲಿ ಫೆಬ್ರವರಿ 3 ರಿಂದ 7ರ ತನಕ ಏರೋ ಇಂಡಿಯಾ ಪ್ರದರ್ಶನ ನಡೆಯಲಿದೆ.

ಏರೋ ಇಂಡಿಯಾದಲ್ಲಿ ಪಾಲ್ಗೊಳ್ಳಲು ನವೆಂಬರ್ 1ರ ತನಕ 431 ಕಂಪನಿಗಳು ನೋಂದಣಿ ಮಾಡಿಕೊಂಡಿವೆ. ಇವುಗಳಲ್ಲಿ ಭಾರತದ 394, ವಿದೇಶದ 37 ಕಂಪನಿಗಳು ಸೇರಿವೆ.
2019ರ ಏರ್ ಶೋನಲ್ಲಿ 403 ಕಂಪನಿಗಳು ಪಾಲ್ಗೊಂಡಿದ್ದವು. ಭಾರತದ 238, ವಿದೇಶದ 165 ಕಂಪನಿಗಳು ಇದರಲ್ಲಿ ಸೇರಿದ್ದವು. ಈ ಬಾರಿ ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿಯೂ ಹೆಚ್ಚು ಕಂಪನಿಗಳು ನೋಂದಣಿ ಮಾಡಿಕೊಂಡಿವೆ.
ಮುಂಬರುವ ಏರೋ ಇಂಡಿಯಾ ಪ್ರದರ್ಶನದಲ್ಲಿ 500ಕ್ಕೂ ಅಧಿಕ ಕಂಪನಿಗಳು ಪಾಲ್ಗೊಳ್ಳಲಿವೆ ಎಂದು ರಕ್ಷಣಾ ಇಲಾಖೆ ಹೇಳಿದೆ. ಇವುಗಳಲ್ಲಿ ಭಾರತ ಮತ್ತು ವಿದೇಶದ ಕಂಪನಿಗಳು ಸೇರಿವೆ. 1996ರಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಏರೋ ಇಂಡಿಯಾ ಪ್ರದರ್ಶನ ಆಯೋಜನೆ ಮಾಡಲಾಗಿತ್ತು. ಬಳಿಕ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿಯೇ ಪ್ರದರ್ಶನ ನಡೆಯುತ್ತಿದೆ. ದೇಶಿಯಾ ಮತ್ತು ಜಾಗತಿಕ ವೈಮಾನಿಕ ಕಂಪನಿಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತವೆ. 2019ರಲ್ಲಿ 22 ದೇಶಗಳ ಕಂಪನಿಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. 2021ರ ಪ್ರದರ್ಶನಕ್ಕೆ ಇನ್ನೂ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು