ಪುತ್ತೂರಿನಲ್ಲಿ ಯಾವುದೇ ನೀಟ್ ರಿಪೀಟರ್ಸ್ ಕೋಚಿಂಗ್ ತರಗತಿಗಳು ಇಲ್ಲದಿರುವುದನ್ನು ಮನಗಂಡು, ಪುತ್ತೂರಿನಲ್ಲಿ ನೀಟ್ ರಿಪೀಟರ್ಸ್ ಕೋಚಿಂಗ್ ತರಗತಿಗಳನ್ನು ನಡೆಸಲು ಅಂಬಿಕಾ ವಿದ್ಯಾಲಯವು ತೀರ್ಮಾನಿಸಿತ್ತು.
ಅದರಂತೆಯೇ ದಿನಾಂಕ 05-11-2020, ಗುರುವಾರದಂದು ಪುತ್ತೂರಿನ ಖ್ಯಾತ ವೈದ್ಯರಾದಂತಹ ಜೆ.ಸಿ.ಅಡಿಗ ಅವರು ನೀಟ್ ರಿಪೀಟರ್ಸ್ ತರಗತಿಗಳನ್ನು ಉದ್ಘಾಟಿಸಿದರು. ಯಾವುದೇ ಒಬ್ಬ ವಿದ್ಯಾರ್ಥಿಯು ಪ್ರಥಮ ಪ್ರಯತ್ನದಲ್ಲಿ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣನಾಗದೇ ಹೋದರೆ ಧೃತಿಗೆಡಬೇಕೆಂದಿಲ್ಲ. ಛಲ, ಆತ್ಮವಿಶ್ವಾಸ ಹಾಗೂ ಸರಿಯಾದ ಕೋಚಿಂಗ್ ವ್ಯವಸ್ಥೆಗಳಿಂದಾಗಿ ವಿದ್ಯಾರ್ಥಿಗಳು ಯಶಸ್ಸನ್ನು ಗಳಿಸಬಹುದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. ಈ ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಸಂಸ್ಥೆಗಳ ಸಂಚಾಲಕರಾದ ಶ್ರೀ ಸುಬ್ರಹ್ಮಣ್ಯ ನಟ್ಟೋಜರವರು ಮಾತನಾಡಿ ವಿದ್ಯಾರ್ಥಿಗಳ ಆಶೋತ್ತರಗಳನ್ನು ಈಡೇರಿಸುವಲ್ಲಿ ಅಂಬಿಕಾ ಸದಾ ಪ್ರಯತ್ನಶೀಲವಾಗಿರುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಟ್ಟೋಜ ಫೌಂಡೇಶನ್ ಟ್ರಸ್ಟ್ನ ಖಜಾಂಜಿಗಳಾದ ಶ್ರೀಮತಿ ರಾಜಶ್ರೀ ನಟ್ಟೋಜ, ನಿರ್ದೇಶಕರಾದ ಸುರೇಶ್ ಶೆಟ್ಟಿ, ಪ್ರಾಂಶುಪಾಲರುಗಳಾದ ಶಂಕರನಾರಾಯಣ ಭಟ್ ಹಾಗೂ ಡಾ| ವಿನಾಯಕ ಭಟ್ಟ ಗಾಳಿಮನೆ, ಉಪನ್ಯಾಸಕರು ಹಾಗೂ ಪೋಷಕರು ಉಪಸ್ಥಿತರಿದ್ದರು. ಉಪಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ಕಾರ್ಯಕ್ರಮವನ್ನು ನಿರ್ವಹಿಸಿದರು.