Sunday, January 19, 2025
ಶಿಕ್ಷಣ

2005-06ನೇ ಸಾಲಿನ ಹಳೆ ವಿದ್ಯಾರ್ಥಿಗಳಿಂದ ಸರಕಾರಿ ಪ್ರೌಢಶಾಲೆ ಪೆರ್ಲಬೈಪಾಡಿಗೆ ಲ್ಯಾಪ್‍ಟಾಪ್ ಮತ್ತು ಪ್ರಿಂಟರ್ ಕೊಡುಗೆ- ಕಹಳೆ ನ್ಯೂಸ್

ಬಂದಾರು : ಬೆಳ್ತಂಗಡಿ ತಾಲೂಕಿನ ಸರಕಾರಿ ಪ್ರೌಢಶಾಲಾ ವಿಭಾಗದಲ್ಲಿ 100% ಫಲಿತಾಂಶ ಪಡೆದ ಸರಕಾರಿ ಪ್ರೌಢಶಾಲೆ ಪೆರ್ಲಬೈಪಾಡಿ ಇಲ್ಲಿಗೆ 2005-06ನೇ ಸಾಲಿನ ಹಳೆ ವಿದ್ಯಾರ್ಥಿಗಳು ಒಟ್ಟು ಸೇರಿ ಲ್ಯಾಪ್‍ಟಾಪ್ ಮತ್ತು ಪ್ರಿಂಟರನ್ನು ಕೊಡುಗೆಯಾಗಿ ನೀಡಿದ್ದಾರೆ.


2005-06ರಲ್ಲಿ 100% ಪಡೆದ SSCL batch ನ 30 ಜನ ವಿದ್ಯಾರ್ಥಿಗಳು 15 ವರುಷದ ನಂತರ ಒಂದು whatsapp ಗ್ರೂಪ್ ಮಾಡಿ ಎಲ್ಲರನ್ನು ಸೇರಿಸಿ.. ಸುಮಾರು RS.65,000 ಸಂಗ್ರಹಿಸಿ ಶಾಲೆಗೆ ಅಗತ್ಯವಿರುವ ಒಂದು ಲ್ಯಾಪ್ ಟಾಪ್ ಮತ್ತು ಪ್ರಿಂಟರನ್ನು ತಾರೀಕು 3/11/20 ರಂದು ಮಾನ್ಯ ಶಾಸಕರಾದ ಹರೀಶ್ ಪೂಂಜಾ ಇವರ ಉಪಸ್ಥಿತಿಯಲ್ಲಿ ಮುಖ್ಯೋಪಾದ್ಯಾಯರಿಗೆ ಹಸ್ತಾಂತರಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ಕೃಷ್ಣಯ್ಯ ಆಚಾರ್ಯ, ಪ್ರಭಾರ ಮುಖ್ಯೋಪಾದ್ಯಾಯರಾದ ಕೊರಗಪ್ಪ.ಟಿ. ಊರಿನ ಹಿರಿಯರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು