Saturday, November 23, 2024
ಸುದ್ದಿ

ಇಡೀ ನಗರದಲ್ಲಿನ ಬೀದಿದೀಪಕ್ಕಿನ್ನು ಒಂದೇ ಸ್ವಿಚ್! -ಕಹಳೆ ನ್ಯೂಸ್

ಬೆಂಗಳೂರು ಸೇರಿದಂತೆ ಇಡೀ ರಾಜ್ಯದ ನಗರಗಳಲ್ಲಿ ಬೀದಿ ದೀಪಗಳ ವ್ಯವಸ್ಥೆ ಹೇಗಿದೆ ಎಂಬುದು ಗೊತ್ತೇ ಇದೆ. ಸಿಬ್ಬಂದಿಗಳ ನಿರ್ಲಕ್ಷ್ಯ, ತಾಂತ್ರಿಕ ದೋಷ ಹೀಗೆ ಸಾಕಷ್ಟು ಕಾರಣಗಳಿಂದ ಹಗಲಿನಲ್ಲಿಯೂ ಬೀದಿ ದೀಪಗಳು ಉರಿಯೋದನ್ನು ನೋಡಿದ್ದೇವೆ. ಇದರಿಂದ ವಿದ್ಯುತ್ ನಷ್ಟದ ಜೊತೆಗೆ ಸರ್ಕಾರದ ಬೊಕ್ಕಸಕ್ಕೆ ಹೊಡೆತ ಬೀಳುತ್ತಲೇ ಇದೆ. ಇದನ್ನು ತಡೆಯೋದಿಕ್ಕೆ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನು ಇಡುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಾಫ್ಟ್‌ವೇರ್ ಆಧಾರಿತ ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣೆ ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಯೋಜನೆಯ ಪ್ರಕಾರ ಸಾಫ್ಟ್‌ವೇರ್ ಒಂದನ್ನು ಅಭಿವೃದ್ಧಿಪಡಿಸಲಾಗುತ್ತದೆ. ಒಂದೇ ಕಡೆ ಕುಳಿತು ಇಡೀ ನಗರದ ಬೀದಿ ದೀಪಗಳನ್ನು ಆಪರೇಟ್ ಮಾಡಬಹುದು. ಸಂಜೆ ಹೊತ್ತಿಗೆ ಬೀದಿ ದೀಪ ಆನ್ ಮಾಡಿದರೆ ಇಡೀ ನಗರದಲ್ಲಿನ ಬೀದಿ ದೀಪಗಳು ಉರಿಯುತ್ತವೆ. ನಂತರ ಬೆಳಗ್ಗೆ ಆಫ್ ಮಾಡಿದರೆ ನಗರದ ಎಲ್ಲಾ ಬೀದಿ ದೀಪಗಳು ಆಫ್ ಆಗುತ್ತವೆ. ಇಂತಹದೊಂದು ಯೋಜನೆಯಿಂದ ವಿದ್ಯುತ್ ಉಳಿತಾಯದ ಜೊತೆಗೆ ಸರ್ಕಾರದ ಬೊಕ್ಕಸಕ್ಕೆ ಹಣ ನಷ್ಟ ಆಗೋದನ್ನು ತಡೆಯಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು

ಸದ್ಯ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಹತ್ತು ಜಿಲ್ಲೆಗಳಲ್ಲಿ ಜಾರಿಗೆ ತರಲು ಚಿಂತನೆ ನಡೆದಿದೆ. ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ತುಮಕೂರು, ಮೈಸೂರು, ಕಲಬುರ್ಗಿ, ಬಳ್ಳಾರಿ ವಿಜಯಪುರ, ಮಂಗಳೂರು ನಗರಗಳನ್ನು ಆಯ್ಕೆ ಮಾಡಲಾಗಿದೆ. ಇಲ್ಲಿ ಯಶಸ್ವಿಯಾದರೆ ರಾಜ್ಯದ ಎಲ್ಲಾ ಕಡೆ ಈ ಯೋಜನೆ ಜಾರಿಗೆ ಬರುತ್ತದೆ.