Recent Posts

Monday, April 14, 2025
ಸುದ್ದಿ

`ಕರ್ನಾಟಕವೂ ಆಂಧ್ರ-ತೆಲಂಗಾಣದಂತೆ ಒಡೆದು ಹೋಳಾಗುತ್ತದೆ’ : ಬ್ರಹ್ಮಾಂಡ ಗುರೂಜಿ ಭವಿಷ್ಯ-ಕಹಳೆ ನ್ಯೂಸ್

ಹಾಸನ : ಕರ್ನಾಟಕವು ಆಂಧ್ರ ತೆಲಂಗಾಣದಂತೆ ಒಡೆದು ಹೋಳಾಗುತ್ತದೆ. ಬೆಳಗಾವಿ ಉತ್ತರ ಕರ್ನಾಟಕದ ಕೇಂದ್ರ ಬಿಂದುವಾದರೆ, ಬೆಂಗಳೂರು ದಕ್ಷಿಣದ ರಾಜಧಾನಿಯಾಗಿರುತ್ತದೆ ಎಂದು ಬ್ರಹ್ಮಾಂಡ ಗುರೂಜಿ ಶ್ರೀ ನರೇಂದ್ರಬಾಬು ಶರ್ಮಾ ಭವಿಷ್ಯ ನುಡಿದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗುರುವಾರ ಹಾಸನಾಂಬೆ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ವರ್ಷಾಂತ್ಯದಲ್ಲಿ ಸಿಎಂ ಕೂಡ ಬದಲಾಗುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ. ಆದರೆ ಬಿಜೆಪಿಯವರೇ ಅವರನ್ನು ಆ ಸ್ಥಾನದಲ್ಲಿ ಕೂರಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಪಂಚ ಇನ್ನೂ 3 ವರ್ಷ ಸಂಕಷ್ಟಗಳನ್ನು ಎದುರಿಸಬೇಕಾಗಿದ್ದು, ಮೂರನೇ ಮಹಾಯುದ್ಧ ಆಗುವುದು ಶತಸಿದ್ಧ, ಸ್ತ್ರೀಯರು ಜಗತ್ತನ್ನು ಆಳಲಿದ್ದಾರೆ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದಿದ್ದಾರೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ