
ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪಾನೀಯ ನಿಗಮದ(ಕೆಎಸ್‌ಬಿಸಿಎಲ್) ಡಿಪೋಗಳಲ್ಲಿ ಮಾರಾಟವಾಗದೆ ಉಳಿದಿರುವ ಅವಧಿ ಮೀರಿದ ಬಿಯರ್‌ಗಳನ್ನು ಮಾರಾಟ ಮಾಡಲು ಅಬಕಾರಿ ಇಲಾಖೆ ವಿವಾದಾತ್ಮಕ ಆದೇಶ ಹೊರಡಿಸಿದೆ.
ಸರ್ಕಾರದ ರಾಜಸ್ವದ ಹಿತದೃಷ್ಟಿಯಿಂದ ಇಲಾಖೆಯು 2019ರ ಡಿ.15ರ ನಂತರ ಮತ್ತು 2020ರ ಮಾ.31 ಅವಧಿಯಲ್ಲಿ ಬಿಯರ್‌ನ್ನು ಬಾಟಲ್ ಮಾಡಿರುವ ಹಾಗೂ ವಿವಿಧ ಕೆಎಸ್‌ಬಿಸಿಎಲ್ ಡಿಪೋಗಳಲ್ಲಿ ಉಳಿದಿರುವ ಬಿಯರ್ ದಾಸ್ತಾನುಗಳನ್ನು ಮಾರಾಟ ಮಾಡಲು ಈ ಹಿಂದೆ ಅನುಮತಿ ನೀಡಿತ್ತು.
ಆದರೆ, ಇದೀಗ ಕಾಲಾವಕಾಶವನ್ನು ವಿಸ್ತರಿಸುವಂತೆ ಕೋರಿ ಬ್ರಿವರಿಗಳಿಂದ ಬಂದಿರುವ ಮನವಿ ಮೇರೆಗೆ ಇಲಾಖೆ ಆಯುಕ್ತ ಲೋಕೇಶ್, ಅವಧಿ ಮೀರಿದ ಬಿಯರ್‌ನ್ನು ಡಿ.31ರವರೆಗೆ ಮಾರಾಟ ಮಾಡಲು ಅನುಮತಿ ನೀಡಿದ್ದಾರೆ.