Sunday, January 19, 2025
ಉಡುಪಿಕುಂದಾಪುರದಕ್ಷಿಣ ಕನ್ನಡಸಂತಾಪಸುದ್ದಿ

ಹಿರಿಯ ಯಕ್ಷಗಾನ ಕಲಾವಿದ, ಅಪ್ರತಿಮ ವಾಗ್ಮಿ ಮಲ್ಪೆ ವಾಸುದೇವ ಸಾಮಗ ಕೊರೊನಾಕ್ಕೆ ಬಲಿ ; ಶಾಶ್ವತವಾಗಿ ತಿರುಗಾಟ ನಿಲ್ಲಿಸಿದ ಸಂಯಮ’ದ ಸಾಹುಕಾರ – ಕಹಳೆ ನ್ಯೂಸ್

ಉಡುಪಿ: ಯಕ್ಷಗಾನ ರಂಗದ ಹಿರಿಯ ಕಲಾವಿದ, ಸಂಘಟಕರಾದ ಮಲ್ಪೆ ವಾಸುದೇವ ಸಾಮಗ ಅವರು ಅಲ್ಪ ಕಾಲದಿಂದ ಅನಾರೋಗ್ಯದಿಂದ ಶನಿವಾರ ಬೆಳಿಗ್ಗೆ ನಿಧನ ಹೊಂದಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ತನ್ನ ವಾಕ್ಪಟುತ್ವದಿಂದ ಹೆಸರು ಗಳಿಸಿದ್ದ ವಾಸುದೇವ ಸಾಮಗ (71) ಅವರು ಕುಂದಾಪುರದ ಕೋಟೇಶ್ವರದಲ್ಲಿ ನೆಲೆಸಿದ್ದರು.

 

ಜಾಹೀರಾತು
ಜಾಹೀರಾತು
ಜಾಹೀರಾತು

ತೆಂಕು ಬಡಗು ತಿಟ್ಟು ಅಪ್ರತಿಮ ಕಲಾವಿದ ಚತುರ ಮಾತುಗಾರ ಯಕ್ಷಗಾನ ತಾಳಮದ್ದಳೆ ತಂಡ ಕಟ್ಟಿ ಮೊಟ್ಟಮೊದಲು ಸಂಚಾರ ಆರಂಭಿಸಿದ ತಾಳಮದ್ದಳೆ ಅರ್ಥದಾರಿಯಾಗಿದ್ದಾರೆ. ಮಲ್ಪೆ ರಾಮದಾಸ ಸಾಮಗ ಪುತ್ರ ವಾಸುದೇವ ಸಾಮಗ ಕಳೆದ ಹದಿನೈದು ದಿನದ ಹಿಂದೆ ಕರೋನ ಪಾಸಿಟ್ ಹಿನ್ನೆಲೆಯಲ್ಲಿ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅನಾರೋಗ್ಯ ಬಿಗಡಾಯಿಸಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಅವರ ಮಣಿಪಾಲ ಆಸ್ಪತ್ರೆ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ವಾಸುದೇವ ಸಾಮಗ ೩೦ರ ಹರೆದಲ್ಲೇ ಯಕ್ಷಗಾನ ಪ್ರವೇಶಿಸಿದ್ದು, ಉತ್ತರನ ಪೌರಷದ ಉತ್ತರ ಮೂಲಕ ಎತ್ತರಕ್ಕೆ ಏರಿದರು. ನಾಗಶ್ರೀ ಪ್ರಸಗಂದ ಪ್ರದೀಪ ಪಾತ್ರ ಸಾಮಗರ ಎತ್ತರಕ್ಕೆ ಏರಿಸಿದ್ದು ತಮ್ಮ ಮಗನಿಗೆ ಪ್ರದೀಪ ಎಂದು ನಾಮಕರಣ ಮಾಡಿದ್ದರು. ಸಾಲಿಗ್ರಾಮ, ಶಿರಸಿ, ಸುರತ್ಕಲ್ ಮೇಳದಲ್ಲಿ ತಿರುಗಾಟ ಮಾಡಿದ್ದು ಮಾತಲ್ಲೇ ಪ್ರೇಕ್ಷಕರ ಸೆರೆಹಿಡಿಯುವ ಸೂಜಿಗಲ್ಲಿನ ಸೆಳೆತ ಸಾಮಗರದಾಗಿತ್ತು. ಮೊಟ್ಟಮೊದಲು ತಾಳಮದ್ದಲೆ ತಂಡ ಕಟ್ಟಿ ಸಂಚಾರ ಮಾಡಿದ ಹಿರಿಮೆ ಸಾಮಗರದಾಗಿತ್ತು.

ಮೃತರು ಪತ್ನಿ ಹಾಗೂ ಹವ್ಯಾಸಿ ಕಲಾವಿದ ಡಾ.ಪ್ರದೀಪ್ ಸಾಮಗ ಅವರ ಅಗಲಿದ್ದಾರೆ.