Wednesday, April 2, 2025
ಸುದ್ದಿ

ಕುಡುಪ್ಪಾರು ಬಳಿಯ ಹೊಳೆಯನ್ನು ದಾಟುತ್ತಿದ್ದ ಸಂದರ್ಭ ಕಾಲು ಜಾರಿ ನೀರಿಗೆ ಬಿದ್ದು ಮೊಗ್ರು ಗ್ರಾಮದ ಯುವಕ ಮೃತ್ಯು-ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ದುರ್ಗೆಶ್ ತಮ್ಮ ಸಹೋದರ ಹಾಗೂ ಸಹೋದರಿಯೊಂದಿಗೆ ಸಂಬಂಧಿಕರಾದ ಕಳೆಂಜ ಗ್ರಾಮದ ಕುಡುಪ್ಪಾರು ಮಾರ್ವೆಲ್ ನಾರಾಯಣ ಗೌಡ ರವರ ಮನೆಗೆ ಬಂದಿದ್ದರು. ಸಹೋದರ ಹಾಗೂ ಸಹೋದರಿಯೊಂದಿಗೆ ಸಮೀಪದ ಕುಡುಪ್ಪಾರು ಬಳಿ ಇರುವ ಪಂಜಾಲ ಎಂಬಲ್ಲಿ ಹೊಳೆಯನ್ನು ದಾಟುತ್ತಿರುವ ವೇಳೆ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಮೃತ ಶರೀರದ ಮರಣೋತ್ತರ ಪರೀಕ್ಷೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ತರಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ