Sunday, January 19, 2025
ಸುದ್ದಿ

ಮಂಗಳೂರಿನಲ್ಲಿ ಹದ್ದುಮೀರಿ ವರ್ತಿಸಿದ ಕಾಂಗ್ರೇಸ್ ಕಾರ್ಯಕರ್ತರು ; ಪೊಲೀಸ್ ಜೀಪ್ ಹತ್ತಿ ಕೈ ಕಾರ್ಯಕರ್ತರ ದರ್ಬಾರ್ – ಕಹಳೆ ನ್ಯೂಸ್

ಮಂಗಳೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಯಾತ್ರೆಯಲ್ಲಿ ಕಾರ್ಯಕರ್ತರು ಪುಂಡಾಟ ಮೆರೆದಿದ್ದಾರೆ. ಮಂಗಳವಾರ ಮಂಗಳೂರಿನ ಜ್ಯೋತಿ ವೃತ್ತದಿಂದ ಯಾತ್ರೆ ತೆರಳುತ್ತಿದ್ದಾಗ ರಾಹುಲ್ ಬೆಂಗಾವಲಿಗಿದ್ದ ಪೊಲೀಸ್ ಜೀಪ್ ಮೇಲೇರಿ ಯಾತ್ರೆ ನಡೆಸಿದ್ದಾರೆ.

ಪೊಲೀಸರು ಜೀಪಿನಿಂದ ಇಳಿಯಲು ಸೂಚಿಸಿದರೂ, ಕಾರ್ಯಕರ್ತರು ಯಾರ ಮಾತನ್ನೂ ಕೇಳುತ್ತಿರಲಿಲ್ಲ. ತಮ್ಮದೇ ಆಡಳಿತ, ತಮ್ಮದೇ ದಾರಿ ಎನ್ನುವಂತೆ ಪೊಲೀಸ್ ಜೀಪು ಎಂಬ ಭಾವನೆ ಬಿಟ್ಟು ಯಾರದೋ ವಾಹನ ಎಂಬಂತೆ ವರ್ತಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

https://youtu.be/vGuQe-BYSxg

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರಿನ ಹಂಪನಕಟ್ಟೆ ವೃತ್ತದಿಂದ ಕ್ಲಾಕ್ ಟವರ್ ವರೆಗೂ ಜನಜಂಗುಳಿ ಮಧ್ಯೆ ಈ ಪುಂಡಾಟ ನಡೆದಿದ್ದು, ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಅಲ್ಲದೆ, ಆ ಸನ್ನಿವೇಶದ ಫೋಟೊ, ವಿಡಿಯೋಗಳು ಜಾಲತಾಣದಲ್ಲಿ ಹರಿದಾಡುತ್ತಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಪುಂಡಾಟ ಮೆರೆದ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಆಗ್ರಹವೂ ವ್ಯಕ್ತವಾಗಿದೆ.

ಇದಲ್ಲದೆ ಯಾತ್ರೆ ಉದ್ದಕ್ಕೂ ಭದ್ರತೆಗೆ ನಿಯೋಜಿಸಿದ್ದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಲಾಠಿ, ಹಿಡಿದುಕೊಂಡಿದ್ದ ಹಗ್ಗವನ್ನು ಎಳೆದಾಡಿದ್ದಾರೆ. ಪೊಲೀಸರು ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದಕ್ಕೆ ಹಿಂದೇಟು ಹಾಕಿದ್ದಾರೆ.

ಮಂಗಳವಾರ ರಾತ್ರಿ ಉಳ್ಳಾಲದಲ್ಲಿ ರಸ್ತೆ ಮಧ್ಯೆ ತಳ್ಳಾಟ ನಡೆಸಿದ ಕಾರ್ಯಕರ್ತರಿಗೆ ಲಾಠಿಚಾರ್ಜ್ ಮಾಡಿದರೆಂಬ ಕಾರಣಕ್ಕೆ ಪೊಲೀಸ್ ಪೇದೆಯನ್ನು ತಕ್ಷಣವೇ ಸಸ್ಪೆಂಡ್ ಮಾಡಲಾಗಿದೆ. ಹಾಗಾದ್ರೆ ಪುಂಡಾಟಿಕೆ ಮೆರೆದಿರುವ ವಿಡಿಯೋ ಸಾಕ್ಷ್ಯ ಇದ್ದರೂ ಅವರ ಮೇಲೇಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಇಲ್ಲ ಎನ್ನುವ ಪ್ರಶ್ನೆ ಕೇಳಿಬಂದಿದೆ.

  • ಕಹಳೆ ನ್ಯೂಸ್