Sunday, January 19, 2025
ಸಿನಿಮಾ

ಮೋಹಕ ನಟಿ ರಮ್ಯಾ ಮದ್ವೆ ಆಗ್ತಾರಾ? ರಹಸ್ಯ ಬಿಚ್ಚಿಟ್ರು ತಾಯಿ ರಂಜಿತಾ

Ramya Divya Spandana
Ramya Divya Spandana

ಬೆಂಗಳೂರು: ಸ್ಯಾಂಡಲ್‍ವುಡ್ ಕ್ವೀನ್, ಲಕ್ಕಿ ಸ್ಟಾರ್ ರಮ್ಯಾ ಯಾವಾಗ ಮದುವೆ ಆಗ್ತಾರೆ ಎಂಬ ಕೂತುಹೂಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಆದ್ರೆ ಚಿತ್ರರಂಗದಿಂದ ದೂರ ಉಳಿದು ಸಕ್ರೀಯ ರಾಜಕಾರಣದಲ್ಲಿ ತೊಡಗಿಕೊಂಡಿರುವ ರಮ್ಯಾ ಮದುವೆ ಬಗ್ಗೆ ಸಿಹಿ ಸುದ್ದಿಯನ್ನು ಅಭಿಮಾನಿಗಳಿಗೆ ನೀಡ್ತಿಲ್ಲ. ರಮ್ಯಾ ತಾಯಿ ರಂಜಿತಾ ಅವರು ಮಗಳ ಮದುವೆ ಬಗ್ಗೆ ಮಾತನಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತು  ಮಾತನಾಡಿದ ರಮ್ಯಾ ತಾಯಿ, ರಮ್ಯಾ ಮದುವೆ ವಿಷಯಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಹಲವು ಬಾರಿ ಜಗಳ ಆಗಿದೆ. ರಾಜಕೀಯದಲ್ಲಿ ಒಂಟಿಯಾಗಿ ಇರೋದು ಕಷ್ಟವಾಗುತ್ತದೆ. ಹಾಗಾಗಿ ಆದಷ್ಟು ಬೇಗ ಮದುವೆಯಾಗು ಅಂತಾ ಸಲಹೆಯನ್ನು ಸಹ ನೀಡಿದ್ದೇನೆ. ಆದ್ರೆ ರಮ್ಯಾ ರಾಜಕೀಯ ಜೀವನದಲ್ಲಿ ಏನಾದ್ರೂ ಸಾಧನೆ ಮಾಡಬೇಕೆಂಬ ಗುರಿಯನ್ನು ಹೊಂದಿದ್ದಾರೆ. ನನ್ನ ಜೀವನದಲ್ಲಿ ಮದುವೆ ಎರಡನೇ ಸ್ಥಾನದಲ್ಲಿ, ಮೊದಲ ಗುರಿ ಸಾಧನೆ. ಹೀಗಾಗಿ ಸಾಧಿಸಿದ ಬಳಿಕ ಆಗುತ್ತೇನೆ ಅಂತಾ ಹೇಳಿರುವುದಾಗಿ ಅವರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಮ್ಯಾ 2003ರಲ್ಲಿ ‘ಅಭಿ’ ಚಿತ್ರದ ಮೂಲಕ ಸ್ಯಾಂಡಲ್‍ವುಡ್ ಗೆ ಪಾದಾರ್ಪಣೆ ಮಾಡಿದ್ದರು. ತಮ್ಮ ಮೋಹಕ ನಟನೆಯ ಮೂಲಕ ರಮ್ಯಾ ಸ್ಯಾಂಡಲ್‍ವುಡ್ ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸದ್ಯ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾಗಿರುವ ರಮ್ಯಾ ಆಕ್ರಮಣಕಾರಿ ಟ್ವೀಟ್ ಗಳ ಮೂಲಕ ರಾಜಕೀಯದಲ್ಲಿಯೂ ಗುರುತಿಸಿಕೊಂಡಿದ್ದಾರೆ.