ನವದೆಹಲಿ: 2021ರ ಜನವರಿ 1 ರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಓಡಾಡುವ ವಾಹನಗಳಿಗೆ ಫಾಸ್ಟ್ ಟ್ಯಾಗ್ ಅನ್ನು ಕೇಂದ್ರ ಸಾರಿಗೆ ಸಚಿವಾಲಯ ಕಡ್ಡಾಯಗೊಳಿಸಿ ಅದೇಶ ಹೊರಡಿಸಿದೆ.
2021 ಜನವರಿ 1 ರಿಂದ 4 ಚಕ್ರ ಹಾಗೂ ಮೇಲ್ಪಟ್ಟ ಎಲ್ಲ ವಾಹನಗಳಿಗೂ ಫಾಸ್ಟ್ ಟ್ಯಾಗ್ ಅಳವಡಿಕೆ ಕಡ್ಡಾಯವಾಗಿದ್ದು, ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳಿಗೆ ಭಾರಿ ಪ್ರಮಾಣದ ದಂಡ ವಿಧಿಸುವ ಸಾಧ್ಯತೆ ಇದೆ
ಈ ಬಗ್ಗೆ ಕೇಂದ್ರದ ನೂತನ ಮೋಟಾರು ಕಾಯ್ದೆ ನಿಯಮ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇಷ್ಟು ದಿನ ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳಿಲ್ಲಿ ದುಪ್ಪಟ್ಟು ಶುಲ್ಕ ವಸೂಲಿ ಮಾಡುತ್ತಿದ್ದರು. ಆದರೆ ಇನ್ನೂ ಮುಂದೆ ದುಪ್ಪಟ್ಟು ಶುಲ್ಕದ ಜೊತೆಗೆ ದಂಡ ಕೂಡ ವಿಧಿಸುವ ಸಾಧ್ಯತೆ ಇದೆ.