Recent Posts

Monday, January 20, 2025
ಸುದ್ದಿ

ಡ್ರಗ್ಸ್ ಪ್ರಕರಣ : ನಾಪತ್ತೆಯಾದ ಐವರು ಆರೋಪಿಗಳ ಪತ್ತೆಗೆ ಸಿಸಿಬಿ ಲುಕ್ ಔಟ್ ನೋಟೀಸ್ – ಕಹಳೆ ನ್ಯೂಸ್

ಬೆಂಗಳೂರು : ಸ್ಯಾಂಡಲ್​ವುಡ್​ಗೆ ಡ್ರಗ್ ಜಾಲದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿರುವ ಎ1 ಆರೋಪಿ ಶಿವಪ್ರಕಾಶ್ ಅಲಿಯಾಸ್ ಚಿಪ್ಪಿ, ಎ5 ಆದಿತ್ಯ ಆಳ್ವಾ , ಎ10 ಆರೋಪಿ ಅಭೀಷೇಕ್ ಸೇರಿದಂತೆ ಶೇಖ್ ಫಾಜ್​, ಮನ್ಸೂರ್ ಅಲಿಯಾಸ್ ಮ್ಯಾಸ್ಸಿಗೆ ಸಿಸಿಬಿ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಲುಕ್ ಔಟ್ ನೋಟಿಸ್ ಜಾರಿ ಮಾಡಿದ ಕಾರಣ ಈ ಆರೋಪಿಗಳು, ಏರ್​ಪೋರ್ಟ್ ಮುಖಾಂತರ ವಿದೇಶಕ್ಕೆ ಹಾರಾಟ ಮಾಡಲು ಸಾಧ್ಯವಿಲ್ಲ. ಈ ಆರೋಪಿಗಳಿಗಾಗಿ ಅಧಿಕಾರಿಗಳು ತೀವ್ರ ಶೋಧ ನಡೆಸುತ್ತಿದ್ದಾರೆ. ಈ ಪ್ರಕರಣದ ವಿಚಾರಣೆ ವೇಳೆ ಅನೇಕರು ತಲೆಮರೆಸಿಕೊಂಡಿರುವ ಆರೋಪಿಗಳ ಬಗ್ಗೆ ಬಹಳಷ್ಟು ಮಾಹಿತಿ ಬಿಚ್ಚಿಟ್ಟಿದ್ದರು ಎನ್ನಲಾಗಿದೆ. ಇದೆ ತಿಂಗಳು ಸಿಸಿಬಿ ಅಧಿಕಾರಿಗಳು 90 ದಿನದ ತನಿಖೆಯ ಪ್ರಾಥಮಿಕ ಹಂತದ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಬೇಕಾಗಿದೆ. ಹೀಗಾಗಿ ಸದ್ಯ ಸಿಸಿಬಿ ಪೊಲೀಸರು ದಾಖಲೆ ಸಿದ್ದಪಡಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು