Tuesday, March 11, 2025
ಸುಬ್ರಹ್ಮಣ್ಯ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಸದಸ್ಯರಾಗಿ ಎ.ಬಿ. ಮನೋಹರ ರೈ ನೇಮಕ-ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿ ಸಮಿತಿ ಸದಸ್ಯರಾಗಿ ನೇಮಕಗೊಂಡಿದ್ದ ಕಡಬ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೃಷ್ಣ ಶೆಟ್ಟಿಯವರನ್ನು ಬದಲಾಯಿಸಿ ಬಿಜೆಪಿ ನಾಯಕರಾದ ಎ.ಬಿ.ಮನೋಹರ ರೈಯವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಈ ಹಿಂದೆ ಕಡಬ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬರವರು ಅಧ್ಯಕ್ಷರಾಗಿದ್ದು, ಇದೀಗ ರಾಜಕೀಯ ಪಕ್ಷದ ಪದಾಧಿಕಾರಿಗಳಾಗಿರುವವರು ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿರಬಾರದೆಂಬ ನಿಯಮದಿಂದ ಅವರನ್ನು ಬದಲಾಯಿಸಿ, ಎ.ಬಿ. ಮನೋಹರ ರೈ ಯವರನ್ನು ಇಂದು ಶಾಸಕರ ನೇತೃತ್ವದಲ್ಲಿ ಅಧಿಕಾರವನ್ನು ಸ್ವೀಕಾರಗೈದರು. ಕೃಷ್ಣ ಶೆಟ್ಟಿಯವರು ಪಕ್ಷದ ಪದಾಧಿಕಾರಿಯಾಗಿ ಮುಂದುವರಿಯಲು ಆಸಕ್ತಿ ತೋರಿದ ಹಿನ್ನಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು