ಬಂಟ್ವಾಳ:ಮಾಜಿ ಸಚಿವ ಬಿ. ರಮಾನಾಥ ರೈ ಅವರು ಓರ್ವ ಸಮಯ ಸಾಧಕ. ಈ ಹಿಂದೆ ಶರತ್ ಮಡಿವಾಳರವರ ಹತ್ಯೆ ನಡೆದಾಗ ಅವರು ಎಸ್ಡಿಪಿಐಯ ವಿರುದ್ಧ ನೇರ ಆರೋಪವನ್ನು ಮಾಡಿದ್ದರು. ಮಾತ್ರವಲ್ಲದೇ, ಎಸ್ಡಿಪಿಐಯೇ ಶರತ್ ಮಡಿವಾಳರನ್ನು ಹತ್ಯೆ ಮಾಡಿದೆ ಎಂದೂ ಹೇಳಿದ್ದರು. ಎಸ್ಡಿಪಿಐ ಒಂದು ಕೋಮುವಾದಿ ಪಕ್ಷ ಎಂದು ಹೇಳಿದ್ದ ರೈ ಅವರು ಬಂಟ್ವಾಳ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯ ವೇಳೆ ಎಸ್ಡಿಪಿಐಯವರೇ ತಮ್ಮ ಪಕ್ಷಕ್ಕೆ ಬೆಂಬಲ ಸೂಚಿಸುವಂತೆ ಮಾಡಿದ್ರು. ಇಂತಹ ನೌಟಂಕಿ ನಾಟಕವಾಡೋ ರಮಾನಾಥ ರೈ ಯಾವ ಕಾಲಕ್ಕೂ, ತಮ್ಮ ಜೀವಮಾನದಲ್ಲಿ ಯಾವ ಚುನಾವಣೆಯಲ್ಲೂ ಗೆಲ್ಲೋದಿಲ್ಲ ಎಂದು ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ರವರು ಇರ್ವತ್ತೂರಿನಲ್ಲಿ ನಡೆದ ಬಿಜೆಪಿಯ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಗುಡುಗಿದರು.
ಚೇಲಾಗಳನ್ನು ಚೀಲದಲ್ಲಿ ಕಟ್ಟುವ..:
ರಮಾನಾಥ ರೈರವರ ಚೇಲಾಗಳು ಬಂಟ್ವಾಳ ತಾಲೂಕಿನ ಬೇರೆ ಬೇರೆ ಇಲಾಖೆಗಳಲ್ಲಿದ್ದಾರೆ. ಇವರಿಂದ ತಾಲೂಕಿನ ಅಭಿವೃದ್ಧಿಗೆ ತೊಡಕಾಗುತ್ತಿದೆ ಹಾಗೂ ಜನಸಾಮಾನ್ಯರಿಗೆ ಅನ್ಯಾಯವಾಗುತ್ತಿದೆ. ಇಂತಹ ಚೇಲಾಗಳನ್ನು ಚೀಲದಲ್ಲಿ ಕಟ್ಟಿಹಾಕಬೇಕು. ಸೇವೆಯಿಂದ ಅಮಾನತು ಇಲ್ಲವೇ ವರ್ಗಾವಣೆ ಮಾಡಬೇಕು ಎಂದು ಅವರು ನುಡಿದರು.