Sunday, January 19, 2025
ಕ್ರೈಮ್ದಕ್ಷಿಣ ಕನ್ನಡಪುತ್ತೂರುಸುದ್ದಿ

ಬಿ.ಸಿ.ರೋಡ್‌ನಲ್ಲಿ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿದ ಪುತ್ತೂರಿನ ಬಲ್ನಾಡು ನಿವಾಸಿ ಸುಚೇತನ್ ಮೃತದೇಹ ಪತ್ತೆ – ಕಹಳೆ ನ್ಯೂಸ್

ಪುತ್ತೂರು: ಬಿ.ಸಿ.ರೋಡು ಸಮೀಪ ವ್ಯಕ್ತಿಯೋರ್ವರು ನೇತ್ರಾವತಿ ನದಿಗೆ ಹಾರಿದ ಘಟನೆ ನ.8ರಂದು ಬೆಳಿಗ್ಗೆ ನಡೆದಿದ್ದು ನದಿಗೆ ಹಾರಿದ ವ್ಯಕ್ತಿ ಪುತ್ತೂರು ಬಲ್ನಾಡು ನಿವಾಸಿ ಜಿನ್ನಪ್ಪ ಗೌಡರ ಪುತ್ರ ಸುಚೇತನ್ ಎಂದು ತಿಳಿದು ಬಂದಿದೆ. ಬಂಟ್ವಾಳ ಅಗ್ನಿಶಾಮಕ ದಳ, ಸ್ಥಳಿಯರು ನ.9ರಂದು ಮೃತದೇಹ ಪತ್ತೆ ಮಾಡಿದ್ದಾರೆ.

ಸೇತುವೆಯಲ್ಲಿ ಗುರುತಿನ ಚೀಟಿ, ಆಧಾರ್ ಕಾರ್ಡ್ ಮತ್ತಿತರ ವಸ್ತುಗಳನ್ನು ಒಳಗೊಂಡ ಬ್ಯಾಗ್ ಪತ್ತೆಯಾಗಿದ್ದು ಅದರಲ್ಲಿರುವ ವಿಳಾಸದ ಮೂಲಕ ವ್ಯಕ್ತಿಯ ಮಾಹಿತಿ ತಿಳಿದು ಬಂದಿದ್ದು ವಿಳಾಸವನ್ನು ಪೊಲೀಸರು ಸಂಪರ್ಕಿಸಿದ್ದಾರೆ ಎಂದು ವರದಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು