Sunday, January 19, 2025
ಕ್ರೈಮ್ದಕ್ಷಿಣ ಕನ್ನಡಪುತ್ತೂರುಸುದ್ದಿ

ಪೆರ್ನೆಯ ಅಡಿಕೆ ವ್ಯಾಪಾರಿಗೆ ಚೂರಿಯಿಂದ ಇರಿದು ಹಣ ದೋಚಿದ ಪ್ರಕರಣ ಬೇಧಿಸಿದ ಉಪ್ಪಿನಂಗಡಿ ಪೋಲಿಸರು ; ಕೃತ್ಯಕ್ಕೆ ಬಳಸಿದ ಸೊತ್ತುಗಳು ಹಾಗೂ ನಗದು ವಶಕ್ಕೆ, ಆರೋಪಿ ರಣಪೋಲಿ, ಕಂಡು ಅಪ್ರೀದ್ ಸಹಿತ ಮೂವರು ಆರೋಪಿಗಳು ಅಂದರ್..! – ಕಹಳೆ ನ್ಯೂಸ್

ಪುತ್ತೂರು : ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ಪೆರ್ನೆಯ ಅಡಿಕೆ ವ್ಯಾಪಾರಿ ದೀಪಕ್ ಶೆಟ್ಟಿ ಅವರಿಗೆ ಚೂರಿಯಿಂದ ಇರಿದು ಹಣ ದೋಚಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಹಾಗೂ ಪಾರಾರಿಯಾದ ಇನ್ನಿಬ್ಬರು ಆರೋಪಿಗಳ ಪತ್ತೆಗಾಗಿ ಪೊಲೀಸರು ವಿಶೇಷ ತಂಡ ರಚಿಸಿದ್ದು, ಹದ್ದಿಣ ಕಣ್ಣಿನಿಂದ ಕಾಯುತ್ತಿದ್ದಾರೆ.

ಆಗಿದ್ದೇನು…!? ಏನಿದು ಪ್ರಕರಣ..!?

ಜಾಹೀರಾತು
ಜಾಹೀರಾತು
ಜಾಹೀರಾತು

ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ಪೆರ್ನೆಯ ಆಶೀರ್ವಾದ ಕಟ್ಟಡದಲ್ಲಿ ಅಡಿಕೆ ಖರೀದಿ ಅಂಗಡಿಯನ್ನು ನಡೆಸುತ್ತಿದ್ದ ದೀಪಕ್ ಜಿ ಶೆಟ್ಟಿ ( 47 ) ವರ್ಷ ಎಂಬವರು ತನ್ನ ಮನೆಯ ಅಡಿಕೆ ಮಾರಾಟ ಮಾಡಿದ ರೂ. 3,50,000 ಹಣವನ್ನು ಸಂಜೆ 6:00 ಗಂಟೆಗೆ ಅಂಗಡಿಯನ್ನು ಬಂದ್ ಮಾಡಿ ತನ್ನ ಮೋಟಾರ್ ಸೈಕಲ್ ನಂಬ್ರ ಕೆಎ 70 ಹೆಚ್ 3289 ಯಲ್ಲಿ ಹಣವನ್ನು ಒಂದು ಕಪ್ಪು ಬ್ಯಾಗ್ ನಲ್ಲಿಟ್ಟುಕೊಂಡು ತನ್ನ ಪಾದೆಬರಿ ಮನೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದಂತೆ ಸಂಜೆ 6:30 ಗಂಟೆಗ ಸಮಯಕ್ಕೆ ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮ ಪಜೆಕೋಡಿ ಎಂಬಲ್ಲಿಗೆ ತಲುಪುತ್ತಿದ್ದಂತೆ ದ್ವಿ ಚಕ್ರ ವಾಹನದಲ್ಲಿ ಸುಮಾರು 21 ರಿಂದ 25 ವರ್ಷ ಪ್ರಾಯದ ಅಪರಿಚಿತರು ವಾಹನದಿಂದ ಇಳಿದು ದೀಪಕ್ ಶೆಟ್ಟಿಯವರನ್ನು ತಡೆದು ಮಲೆಯಾಳಿ ಭಾಷೆಯಲ್ಲಿ “ ಕುತ್ತುರಾ ಕುತ್ತುರಾ “ ಎಂದು ಹೇಳುತ್ತಾ ಬೈಕ್ ಸವಾರ ದೀಪಕ್ ಶೆಟ್ಟಿ ರವರ ಬಲ ಭಾಗದ ತಲೆಯ ಭಾಗಕ್ಕೆ ಹಾಗೂ ಹೊಟ್ಟೆಯ ಭಾಗಕ್ಕೆ ಚೂರಿಯಿಂದ ತಿವಿದು ಮೋಟಾರ್ ಸೈಕಲ್ ನ ಚೀಲದಲ್ಲಿದ್ದ ರೂ : 3,50,000 /- ಹಣದ ಬ್ಯಾಗ್ , ಮೊಬೈಲ್ ಸೆಟ್ ನ್ನು ದರೋಡೆ ಮಾಡಿ ಪರಾರಿಯಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪ್ರಕರಣದ ಪತ್ತೆಗೆ ದಕ ಜಿಲ್ಲಾ ಪೊಲೀಸ್ ಅಧೀಕ್ಷಕರರವರ ಅದೇಶ ಹಾಗೂ ಮಾನ್ಯ ಪೊಲೀಸ್ ಸಹಾಯಕ ಅಧೀಕ್ಷಕರು , ಪುತ್ತೂರು ಉಪ-ವಿಭಾಗ ರವರ ನಿರ್ದೇಶನದಂತೆ ರೋಹನ್ ಜಗದೀಶ್, ಐ.ಪಿ.ಎಸ್. ಪ್ರೋ ಎ.ಎಸ್.ಪಿ ಉಪ್ಪಿನಂಗಡಿ ಠಾಣೆ, ಉಮೇಶ್ ಉಪ್ಪಳಿಕೆ, ಸಿಪಿಐ ಗ್ರಾಮಾಂತರ ವೃತ್ತ ರವರ ನೇತ್ರತ್ವದ ವಿಶೇಷ ಅಪರಾಧ ಪತ್ತೆ ದಳವು ಪ್ರಮುಖ ಮೂವರು ಅರೋಪಿಗಳನ್ನು ಬಂಧಿಸಿದ್ದು, ಆರೋಪಿಗಳನ್ನು 1) ಅಪ್ರೀದ್ ಪ್ರಾಯ 22 ವರ್ಷ ತಂದೆ: ಮೊಹಮ್ಮದ್ ಅಶ್ರಪ್ ವಾಸ: ಮಿತ್ತ ಪದವು ಅಶ್ರಫ್ ಕೋಟೆಕನಿ ಅಂಚೆ, ಸಜಿಪಪಡು ಗ್ರಾಮ ಬಂಟ್ವಾಳ ತಾಲೂಕು 2) ಜುರೈಝ್ ಪ್ರಾಯ 20 ವರ್ಷ ತಂದೆ: ಅಬ್ದುಲ್ ವಾಸ: ಕಾಗಡಿಕಟ್ಟೆ ಮನೆ ದೊಡ್ಡಹನಕೊಡು ಗ್ರಾಮ ಸೋಮವಾರಪೇಟೆ ತಾಲೂಕು ಕೊಡಗು 3) ಮೊಹಮ್ಮದ್ ತಂಝಿಲ್ ಪ್ರಾಯ 22 ವರ್ಷ ತಂದೆ: ಅಬ್ದುಲ್ ಸತ್ತಾರ್ ವಾಸ: ಬಡಗಬೆಲ್ಲೂರು ಶಾಲೆ ಬಳಿ ಬಡಗಬೆಲ್ಲೂರು ಗ್ರಾಮ ಬಂಟ್ವಾಳ ಹಾಲಿ ವಾಸ: ದೊಡ್ಡಾಜೆ ಮನೆ ಕಡೆಶಿವಾಲಯ ಗ್ರಾಮ ಬಂಟ್ವಾಳ ತಾಲೂಕು ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ ಗ್ರೇ ಬಣ್ಣದ ಆಕ್ಟಿವಾ ನಂ. ಕೆಎ-70-ಇ-6423, ಕೃತ್ಯಕ್ಕೆ ಬಳಸಿದ ಚೂರಿ-1 , ಅರೋಪಿಗಳ ವಶದಲ್ಲಿದ್ದ 03 ಮೊಬೈಲ್ ಹಾಗೂ ಸುಲಿಗೆ ಮಾಡಿದ ನಗದನ್ನು ವಶಪಡಿಸಿಕೊಂಡಿದ್ದು ಇನ್ನಿಬ್ಬರ ಅರೋಪಿಗಳ ಪತ್ತೆ ಕಾರ್ಯ ಬಾಕಿ ಇದೆ ಎಂದು ಹೇಳಲಾಗಿದೆ.

ಈ ವಿಶೇಷ ಪತ್ತೆ ತಂಡದಲ್ಲಿ ಈರಯ್ಯ ಪಿ.ಎಸ್. ಐ, ಎ.ಎಸ್.ಐ ಗಳಾದ ಚೋಮ, ಜನಾರ್ಧನ, ಹೆಚ್.ಸಿ ಗಳಾದ ಹರಿಶ್ಚಂದ್ರ, ಶೇಖರ್, ಹರೀಶ, ಬಾಲಕೃಷ್ಣ, ಹಿತೇಷ್, ಕುಶಾಲಪ್ಪ ಪಿಸಿ, ಇರ್ಷಾದ್ ಪಡಂಗಡಿ, ಪ್ರತಾಪ್, ಚಂದ್ರಶೇಖರ , ವಿನಾಯಕ ಹಾಗೂ ಪುತ್ತೂರು ಗ್ರಾಮಾಂತರ ವೃತ್ತ ಕಛೇರಿಯ ದರ್ಣಪ್ಪ, ಅಬ್ದುಲ್ ಸಲೀಂ, ಶಿವರಾಮ ಪಿಸಿ ಜಗದೀಶ್ ಅತ್ತಾಜೆ , ಜಿಲ್ಲಾ ಗಣಕ ಯಂತ್ರ ವಿಭಾಗದ ದಿವಾಕರ, ಸಂಪತ್, ಬಂಟ್ವಾಳ ಸಂಚಾರ ಠಾಣಾ ಹೆಚ್.ಸಿ ದೇವದಾಸ್ ಹಾಗೂ ಇಲಾಖಾ ವಾಹನ ಚಾಲಕರಾದ ಬಂದೆನವಾಜ್ ಬುಡ್ಕಿ, ಕನಕರಾಜ್ , ರಂಜಿತ್ ರವರು ಈ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದು, ಪ್ರಕರಣ ಬೇಧಿಸಲು ಸಫಲರಾಗಿದ್ದಾರೆ.