ಲವ್ ಜಿಹಾದ್” ತಡೆಗಟ್ಟಲು ಕಠಿಣ ಕಾನೂನು ರೂಪಿಸುವಂತೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ವತಿಯಿಂದ ಮನವಿ-ಕಹಳೆ ನ್ಯೂಸ್
ದೇಶಾದ್ಯಂತ “ಲವ್ ಜಿಹಾದ್” ಪ್ರಕರಣಗಳು ಅಪಾಯಕಾರಿಯಾಗಿ.ವಿಪರೀತವಾಗಿ ಹೆಚ್ಚುತ್ತಿದ್ದು ಮುಗ್ಧ ಅಮಾಯಕ ಹಿಂದೂ ಯುವತಿಯರು ಈ ಷಡ್ಯಂತ್ರಕ್ಕೆ ಬಲಿಯಾಗುತ್ತಿರುವುದು ಇಡೀ ಹಿಂದೂ ಸಮಾಜಕ್ಕೆ ಆತಂಕವನ್ನುಂಟು ಮಾಡಿದೆ.
ಅದೇ ರೀತಿ ಕರ್ನಾಟಕದಲ್ಲಿಯೂ ಸಹ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಲವ್ ಜಿಹಾದಿನ ಪ್ರಕರಣಗಳು ವ್ಯವಸ್ಥಿತ ರೀತಿಯಲ್ಲಿ ಹೆಚ್ಚಾಗುತ್ತಿದ್ಧು.ಹಿಂದೂ ಸಮಾಜದ ಎಲ್ಲಾ ಜಾತಿ- ವರ್ಗಗಳ ಮುಗ್ಧ ಹೆಣ್ಣುಮಕ್ಕಳು ಈ ಸಂಚಿಗೆ ಬಲಿಯಾಗುತ್ತಿದ್ದಾರೆ.ಈ ಕಾರಣದಿಂದಲೇ ರಾಜ್ಯದಲ್ಲಿ ಕೋಮು- ಸಂಘರ್ಷ.ಆತ್ಮಹತ್ಯೆ ಹಾಗೂ ಹಲ್ಲೆ .ಕೂಲೆಗಳಂತಹ ಪ್ರಕರಣಗಳು ಹೆಚ್ಚುತ್ತಿವೆ.
ಸಂಪೂರ್ಣ ವಿಶ್ವಕ್ಕೆ ಸವಾಲಾಗಿರುವ ಹಾಗೂ ಭಾರತವನ್ನು ಸಂಪೂರ್ಣವಾಗಿ ಇಸ್ಲಾಮಿಕರಿಸುವ ಸಂಚಿನಿಂದ ಕೂಡಿದ ಮತಾಂದ ಇಸ್ಲಾಮಿಕ್ ಜಿಹಾದಿನ ಕರಾಳ ಹೆಜ್ಜೆಗಳಾದ ಭಯೋತ್ಪಾದನೆ.ಮತಾಂತರ.ಜನಸಂಖ್ಯೆ ಹೆಚ್ಚಳ.ಬಹುಪತ್ನಿತ್ವ.ಆಕ್ರಮ ಪ್ರವೇಶ.ಓಳನುಸುಳುವಿಕೆ.ಭೂಕಬಳಿಕೆ ಇತ್ಯಾದಿಗಳಂತೆಯೇ ಪ್ರೀತಿ ಪ್ರೇಮದ ಹೆಸರಿನಲ್ಲಿ ಯುವತಿಯನ್ನು ಇಸ್ಲಾಂಗೆ ಮತಾಂತರಿಸುವುದು ಸಹ ಜಿಹಾದಿನ ಪ್ರಮುಖ ಅಂಗವಾಗಿದೆ ಎಂಬುದು ಸಾಬಿತಾಗಿದೆ.ಕಾಲೇಜಿನ ಕ್ಯಾಂಪಸ್ ಗಳು.ಮಹಿಳಾ ಹಾಸ್ಟೆಲ್ ಗಳು.
ಹೋಟೆಲ್.ಸಿನಿಮಾಗಳು.ಬ್ಯೂಟಿಪಾರ್ಲರ್ಗಳು.ಮೊಬೈಲ್ ಸೆಂಟರ್ ಗಳು.ಮಹಿಳೆಯರು ಹೆಚ್ಚಾಗಿ ಬರುವ ವ್ಯಾಪಾರ ವ್ಯವಹಾರ ಕೇಂದ್ರಗಳು ಮುತಾಂದವುಗಳನ್ನು ಗುರಿಯಾಗಿಟ್ಟುಕೊಂಡು ಸಂಚು ರೂಪಿಸಿ . ಯುವತಿಯನ್ನು ಮೋಸದ ಪ್ರೇಮಪಾಶಕ್ಕೆ ಬಲಿಯಾಗುವಂತೆ ಮಾಡಲಾಗುತ್ತಿದೆ. ಪ್ರೀತಿ.ಪ್ರೇಮ.ಅತ್ಯಾಚಾರ.ವಿಹಾರ ಮೋಜು ಮಸ್ತಿ.ಹೋಟೆಲ್.ಸಿನಿಮಾ ಇತ್ಯಾದಿಗಳಿಂದ ಪ್ರಾರಂಭಗೊಂಡು ಕೊನೆಗೆ ಒತ್ತಡ.ಬೆದರಿಕೆ.ಬ್ಲಾಕ್ ಮೆಲ್.ಅಪಹರಣ ಇತ್ಯಾದಿ ಹಂತದವರೆಗೂ ತಲುಪಿ ಅಕ್ರಮ ಮದುವೆ.ಮತಾಂತರ ಕ್ರತ್ಯಗಳು ನಡೆಯುತ್ತಿದೆ.
ಈ ಕರಾಳ ಮುಖಗಳಿಂದ ಕೂಡಿದ ಮೇಲ್ನೋಟಕ್ಕೆ ಪ್ರೀತಿ ಪ್ರೇಮದ ಮುಖವಾಡ ಹೊಂದಿದ ಇಸ್ಲಾಮಿಕ್ ಜಿಹಾದಿನ ಭಾಗವಾಗಿರುವ ಲವ್ ಜಿಹಾದ್ ಅನ್ನು ತಡೆಗಟ್ಟಲು ಕಠಿಣ ಕಾನೂನು ರೂಪಿಸಿ ಮುಗ್ಧ ಅಮಾಯಕ ಹಿಂದೂ ಯುವತಿಯರನ್ನು .ಹಿಂದೂ ಕುಟುಂಬಗಳನ್ನು ಹಿಂದೂ ಸಂಸ್ಕೃತಿ ಸಮಾಜವನ್ನು ರಕ್ಷಿಸಬೇಕೆಂದು ತಕ್ಷಣಕ್ಕೆ ಜಾರಿಗೆ ಬರುವಂತೆ ರಾಜ್ಯ ಸರಕಾರ ಕೂಡಲೇ ಲವ್ ಜಿಹಾದ್ ತಡೆಗಟ್ಟಲು ಮತ್ತು ಮತಾಂತರ ನಿಷೇಧ ಕಾನೂನು ಜಾರಿಗೆ ತರುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಪುತ್ತೂರು ಸಹಾಯಕ ಕಮೀಷನರ್ ಮೂಲಕ ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಜರಂಗದಳ ಪುತ್ತೂರು ಜಿಲ್ಲಾ ಸಂಚಾಲಕ ಶ್ರೀಧರ್ ತೆಂಕಿಲ.ಬಜರಂಗದಳ ಪುತ್ತೂರು ಪ್ರಖಂಡ ಸಂಚಾಲಕ್ ಹರೀಶ್ ಕುಮಾರ್ ದೋಳ್ಪಾಡಿ.ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡ ಸಹ ಕಾರ್ಯದರ್ಶಿ ವಿಶಾಕ್ ಸಸಿಹಿತ್ಲು.ಬಜರಂಗದಳ ಪುತ್ತೂರು ನಗರ ಸಂಚಾಲಕ್ ಚೇತನ್ ಬೊಳ್ವಾರ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು