Monday, January 20, 2025
ಹೆಚ್ಚಿನ ಸುದ್ದಿ

ಗೂಗಲ್​ ಬಳಕೆದಾರರಿಗೆ ಶಾಕ್:‌ ಫೋಟೋಸ್‌ ಬ್ಯಾಕಪ್‌ ಗೆ ಪಾವತಿಸಬೇಕು ಹಣ – ಕಹಳೆ ನ್ಯೂಸ್

ಕ್ಯಾಲಿಫೋರ್ನಿಯಾ: ಹಲವರು ತಮ್ಮ ಫೋಟೋ, ವಿಡಿಯೋಗಳನ್ನು ಗೂಗಲ್​ಗೆ ಲಿಂಕ್​ ಮಾಡಿ ಇಟ್ಟುಕೊಳ್ಳುತ್ತಿದ್ದಾರೆ. ಅಂಥವರಿಗೆ ಇದೀಗ ಶಾಕ್​ ಆಗುವಂಥ ಸುದ್ದಿಯೊಂದನ್ನು ಗೂಗಲ್​ ನೀಡಿದೆ. ಅದೇನೆಂದರೆ ಇನ್ನುಮುಂದೆ ಹೆಚ್ಚುವರಿ ಸ್ಟೋರೇಜ್​ ಮಾಡಿಕೊಳ್ಳುವ ಆಸೆ ಇದ್ದರೆ ಅದಕ್ಕೆ ನೀವು ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗೂಗಲ್‌ 2015ರಲ್ಲಿ ಗೂಗಲ್‌ಫೋಟೋದಲ್ಲಿ ಅನಿಯಮಿತ ಫೋಟೋ, ವಿಡಿಯೋ ಅಪ್​ಲೋಡ್​ ಮಾಡಲು ಅವಕಾಶ ನೀಡಿತ್ತು. ಇದೀಗ ಶುಲ್ಕ ವಿಧಿಸಲು ಮುಂದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸದ್ಯ ಗೂಗಲ್‌ನಲ್ಲಿ ಉಚಿತವಾಗಿ ಅನ್‌ಲಿಮಿಟೆಡ್‌ ಫೋಟೋಗಳನ್ನು ಅಪ್​ಲೋಡ್​ ಮಾಡಲು ಅವಕಾಶವಿದೆ. ಆದರೆ 2021ರ ಜೂನ್‌ 1ರಿಂದ ಇದಕ್ಕೆ ಕಡಿವಾಣ ಬೀಳಲಿದೆ. ಅನ್‌ಲಿಮಿಟೆಡ್‌ ಸ್ಟೋರೇಜ್‌ ಸೌಲಭ್ಯವನ್ನು ನಿಲ್ಲಿಸುವುದಾಗಿ ಗೂಗಲ್‌ ಬುಧವಾರ ತನ್ನ ಬ್ಲಾಗ್‌ ಪೋಸ್ಟ್‌ನಲ್ಲಿ ತಿಳಿಸಿದೆ.
ನೀವು ಗರಿಷ್ಠ 15 ಜಿ.ಬಿಯಷ್ಟು ಫೋಟೋ ಮತ್ತು ವಿಡಿಯೋಗಳನ್ನು ಅಪ್​ಲೋಡ್​ ಮಾಡಿ ಇಟ್ಟುಕೊಳ್ಳಲು ಅವಕಾಶವಿದೆ. ಆದರೆ ಅದನ್ನು ಮೀರಿ ನಿಮಗೆ ಜಾಗ ಬೇಕಿದ್ದರೆ ನೀವು ಶುಲ್ಕವನ್ನು ಭರಿಸುವುದು ಅನಿವಾರ್ಯ.

ಪ್ರಸ್ತುತ 16 ಮೆಗಾ ಪಿಕ್ಸೆಲ್‌ ಫೋಟೋ ಮತ್ತು 1,080 ಎಚ್‌ಡಿ ಗುಣಮಟ್ಟದವರೆಗಿನ ವಿಡಿಯೋಗಳನ್ನು ಗೂಗಲ್‌ ಫೋಟೋದಲ್ಲಿ ಉಚಿತವಾಗಿ ಅಪ್​ಲೋಡ್​ ಮಾಡಬಹುದಾಗಿದೆ. ಇದಕ್ಕಿಂತ ಗುಣಮಟ್ಟದ ಫೋಟೋ, ವಿಡಿಯೋಗಳನ್ನು ಅಪ್ಲೋಡ್‌ ಮಾಡಬಹುದಾದರೂ ಅದಕ್ಕೆ ಗರಿಷ್ಠ 15 ಜಿಬಿ ಮಿತಿಯಿತ್ತು. ಇದೀಗ 15 ಜಿಬಿಗಿಂತ ಜಾಸ್ತಿ ಸ್ಟೋರೇಜ್‌ ಬಳಕೆಯಾದರೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಗೂಗಲ್​ ಹೇಳಿದೆ.

ಗೂಗಲ್‌ ಡ್ರೈವ್‌, ಗೂಗಲ್‌ ಫೋಟೋ, ಜಿ-ಮೇಲ್‌ ಸ್ಟೋರೇಜ್‌ ಮಿತಿ ಗರಿಷ್ಠ 15 ಜಿ.ಬಿ ದಾಟಿದ್ದರೆ ಅದಕ್ಕೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದು 2021ರ ಜೂನ್​ 1ರಿಂದ ಅನ್ವಯ ಆಗಲಿರುವ ಹಿನ್ನೆಲೆಯಲ್ಲಿ, ಅಲ್ಲಿಯವರೆಗೂ ನೀವು ಆರಾಮವಾಗಿ ಎಷ್ಟು ಬೇಕಾದರೂ ಅಪ್​ಲೋಡ್​ ಮಾಡಬಹುದಾಗಿದೆ.

ಶುಲ್ಕದ ವಿವರ ಹೀಗಿದೆ: ಗೂಗಲ್‌ ಡ್ರೈವ್‌ನಲ್ಲಿ 1 ತಿಂಗಳಿಗೆ 100 ಜಿ.ಬಿಗೆ 1.99 ಡಾಲರ್‌(ಸುಮಾರು 148 ರೂ.) ಇದ್ದರೆ 1 ಟೆರಾ ಬೈಟ್‌ಗೆ 9.999 ಡಾಲರ್‌ (ಸುಮಾರು 743 ರೂ). ಗೂಗಲ್‌ ತನ್ನ ಬಳಕೆದಾರರಿಗೆ 15 ಜಿಬಿ ಅನ್‌ಲಿಮಿಟೆಡ್‌ ಸ್ಟೋರೇಜ್‌ ನೀಡಿದರೆ ಆಯಪಲ್‌ ಕಂಪೆನಿ ತನ್ನ ಗ್ರಾಹಕರಿಗೆ 5 ಜಿಬಿ ಮಾತ್ರ ಉಚಿತ ಸ್ಟೋರೇಜ್‌ ನೀಡುತ್ತದೆ. ಬಳಿಕ 50 ಜಿಬಿಗೆ ಪ್ರತಿ ತಿಂಗಳಿಗೆ 0.99 ಡಾಲರ್‌ (ಸುಮಾರು 73 ರೂ) ಹಣವನ್ನು ಪಾವತಿಸಬೇಕಾಗುತ್ತದೆ. ಅಮೇಜಾನ್‌ ತನ್ನ ಪ್ರೈಂ ಸದಸ್ಯರಿಗೆ ವಿಶೇಷ ಸೇವೆ ನೀಡುತ್ತಿದ್ದು, ಇದರಲ್ಲಿ ಬಳಕೆದಾರರು ಅನ್‌ಲಿಮಿಟೆಡ್‌ ಫೋಟೋ, ವಿಡಿಯೋವನ್ನು ಉಚಿತವಾಗಿ ಅಪ್​ಲೋಡ್​ ಮಾಡಬಹುದು.