ಅಯೋಧ್ಯೆ – ರಾಮಜನ್ಮಭೂಮಿ ವಿವಾದ ಇತ್ಯರ್ಥಗೊಂಡು, ಶ್ರೀರಾಮ ದೇವಾಲಯ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ ನಂತರ ಅಯೋಧ್ಯೆಯಲ್ಲಿ ಇದೀಗ ರಾಮ್‍ಲಲ್ಲಾನನ್ನು ದೀಪೋತ್ಸವದ ಮೂಲಕ ಸ್ವಾಗತಿಸಲು ಭರದ ಸಿದ್ದತೆಗಳು ನಡೆದಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಪಟ್ಟಾಭಿಷೇಕಕ್ಕಾಗಿ ದೀಪೋತ್ಸವವನ್ನು ಆಚರಿಸಲು ಸಿದ್ಧತೆಗಳು ಪೂರ್ಣಗೊಂಡಿದ್ದು, ದೀಪಾವಳಿ ಹಬ್ಬದ ಮುನ್ನಾ ದಿನದಂದು ಕೋವಿಡ್ ಮಾರ್ಗಸೂಚಿಗಳ ಪ್ರಕಾರ ದೀಪೋತ್ಸವ ಆಚರಿಸಲು ಸೂಚಿಸಲಾಗಿದೆ.
ಅಯೋಧ್ಯೆ ಎಲ್ಲಾ ದೇವಾಲಯಗಳು ಮತ್ತು ಕಟ್ಟಡಗಳಿಗೆ ಹೊಸ ಟಚ್ ನೀಡಲಿದ್ದು, ದೀಪೋತ್ಸವದ ಸಂದರ್ಶಕರು ಮತ್ತು ಅತಿಥಿಗಳಿಗೆ ಇದು ವಿಶೇಷ ಆಕರ್ಷಣೆಯ ಕೇಂದ್ರವಾಗಲಿದೆ. ಅಲ್ಲದೆ ಪೈಡಿಯ ಘಟ್ಟಗಳು ಮತ್ತು ಬುರ್ಜೋಸ್ ಸಹ ದುರಸ್ತಿ ಮಾಡಿಸಲಾಗಿದೆ. ರಾಮಾಯಣದ ಕಥಾವಸ್ತುವನ್ನು ಪ್ರತಿನಿಧಿಸುವ ಕೋಷ್ಟಕಗಳನ್ನು ನಿರ್ಮಿಸಲಾಗುತ್ತಿದ್ದು, ಭವ್ಯ ರಥಗಳನ್ನು ತಯಾರಿಸಲು ಕಳೆದ 10 ದಿನಗಳಿಂದ 25-30 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂದು ಕಲಾ ನಿರ್ದೇಶಕ ಮನೀಶ್ ದ್ವಿವೇದಿ ತಿಳಿಸಿದ್ದಾರೆ.
ಮೆರವಣಿಗೆಯಲ್ಲಿ ಸುಮಾರು 300 ಕಲಾವಿದರು ಪ್ರದರ್ಶನ ನೀಡಲಿದ್ದು, ಕೋವಿಡ್ -19 ಮಾರ್ಗಸೂಚಿಗಳಡಿಯೇ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಅತ್ಯಾಧುನಿಕ ತಂತ್ರಜ್ಞಾನವನ್ನು ಆಧರಿಸಿದ ಲೇಸರ್ ಪ್ರದರ್ಶನದ ಮೂಲಕ ಶ್ರೀರಾಮ ಅಯೋಧ್ಯೆಗೆ ಆಗಮಿಸುವುದನ್ನು ದೀಪೋತ್ಸವದಲ್ಲಿ ಚಿತ್ರಿಸಲಾಗುತ್ತಿದೆ. ಲಾರ್ಡ್ ಶ್ರೀರಾಮಚಂದ್ರನು ಅಯೋಧ್ಯೆಗೆ ಆಗಮಿಸಿದ ಮೇಲೆ ಪಟ್ಟಣವಾಸಿಗಳು ಬೆಳಗಿದ ದೀಪಗಳ ಮಿನುಗುವಿಕೆಯ ಚಿತ್ರಣವನ್ನು ಈ ಲೇಸರ್ ಪ್ರದರ್ಶನದಲ್ಲಿ ತೋರಿಸಲಾಗುತ್ತದೆ.
ದೀಪೋತ್ಸವಕ್ಕಾಗಿ ನಗರವನ್ನು ಸ್ವಚ್ಛತೆ ಮಾಡಿರುವುದು, ದೀಪಾಲಂಕಾರ ಹಾಗೂ ಡಿಜಿಟಲ್ ಅಲಂಕಾರವು ಈ ಸುಸಂದರ್ಭವನ್ನು ಇನ್ನಷ್ಟು ಸುಂದರಗೊಳಿಸಲಿದೆ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಆದರೂ ಜನಸಾಮಾನ್ಯರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶವಿಲ್ಲ.
ಧಾರ್ಮಿಕ ಕಾರ್ಯಕ್ರಮ ಹಾಗೂ ಶ್ರೀರಾಮನ ಆಗಮನದ ದೃಶ್ಯದ ವೇಳೆ ಘಂಟಾಘೋಷಗಳನ್ನು ಮೊಳಗಿಸಲಾಗುವುದ ಈ ಎಲ್ಲವನ್ನು ಅಯೋಧ್ಯೆಯ ಜನತೆಗೆ ಲೇಸರ್ ಸ್ಕ್ರೀನ್‍ನಲ್ಲೇ ನೋಡಲು ಅವಕಾಶ ಮಾಡಿಕೊಡಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಜ್ ಕುಮಾರ್ ಝಾ ತಿಳಿಸಿದ್ದಾರೆ.