Sunday, January 19, 2025
ಹೆಚ್ಚಿನ ಸುದ್ದಿ

BREAKING NEWS: ಬಾಲಿವುಡ್ ‘ನಟ ಆಸೀಫ್ ಬಾಸ್ರಾ’ ಆತ್ಮಹತ್ಯೆ – ಕಹಳೆ ನ್ಯೂಸ್

ಧರ್ಮಶಾಲಾ : ಬಾಲಿವುಡ್ ನಟ ಆಸೀಫ್ ಬಾಸ್ರಾ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಮೂಲಕ ಖ್ಯಾತ ನಟ ಆಸೀಫ್ ಬಾಸ್ರಾ ಇನ್ನಿಲ್ಲವಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಾಲಿವುಡ್ ನಟ ಆಸಿಫ್ ಬಾಸ್ರಾ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ. ವರದಿಗಳ ಪ್ರಕಾರ, ಧರ್ಮಶಾಲಾದ ಮೆಕ್ ಲೊಡ್ ಗಂಜ್ ನಲ್ಲಿ ಇಂದು ಬಸ್ರಾ ಎಫ್ ಸಿ ಗಿಬಾಡಾ ರಸ್ತೆಯಲ್ಲಿರುವ ಕೆಫೆಯ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಆತ್ಮಹತ್ಯೆಗೆ ಶರಣಾಗಲು ಕಾರಣ ಏನು ಎಂಬುದಾಗಿ ತಿಳಿದು ಬಂದಿಲ್ಲ. ಈ ಘಟನೆ ವರದಿಯಾಗುತ್ತಿದ್ದಂತೆಯೇ ಪೊಲೀಸರ ತಂಡವೂ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ, ತನಿಖೆ ಆರಂಭಿಸಿದ್ದಾರೆ. ಕಳೆದ 5 ವರ್ಷಗಳಿಂದ ನಟ ಆಸಿಫ್ ಬಸ್ರಾ ಅವರು ಮೆಕ್ ಲಿಯೋಡ್ ಗಂಜ್ ನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅವರ ಜೊತೆ ವಿದೇಶಿ ಗರ್ಲ್ ಫ್ರೆಂಡ್ ಕೂಡ ಇದ್ದಳು.

ಜಾಹೀರಾತು
ಜಾಹೀರಾತು
ಜಾಹೀರಾತು