Sunday, January 19, 2025
ಹೆಚ್ಚಿನ ಸುದ್ದಿ

ಕಾಪಿರೈಟ್ ಸಮಸ್ಯೆ : ಗೃಹ ಸಚಿವ ಅಮಿತ್ ಶಾ ಖಾತೆಯಿಂದ ಪ್ರೊಫೈಲ್‌ ಚಿತ್ರ ತೆಗೆದುಹಾಕಿದ ಟ್ವಿಟರ್ – ಕಹಳೆ ನ್ಯೂಸ್

ನವದೆಹಲಿ: ಕಾಪಿರೈಟ್‌ ವರದಿಯ ಹಿನ್ನೆಲೆಯಲ್ಲಿ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಹಾಕಿದ್ದ ಪ್ರೊಫೈಲ್‌ ಚಿತ್ರವನ್ನು ಟ್ವಿಟರ್‌ ತೆಗೆದುಹಾಕಿದೆ. ಕೆಲ ಸಮಯದ ಬಳಿಕ ಬೇರೊಂದು ಚಿತ್ರವನ್ನು ಹಾಕಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶಾ ಅವರ ಅಧಿಕೃತ ಖಾತೆಯಲ್ಲಿ ಪ್ರೊಫೈಲ್‌ ಚಿತ್ರದ ಮೇಲೆ ಕ್ಲಿಕ್‌ ಮಾಡಿದರೆ, ‘ಮೀಡಿಯಾ ಪ್ರದರ್ಶಿಸಲಾಗದು. ಕಾಪಿರೈಟ್‌ (ಕೃತಿಸ್ವಾಮ್ಯ) ಹೊಂದಿರುವವರ ವರದಿಗೆ ಪ್ರತಿಕ್ರಿಯೆಯಾಗಿ ಈ ಚಿತ್ರವನ್ನು ತೆಗೆದುಹಾಕಲಾಗಿದೆ’ ಎಂದು ಬಿತ್ತರವಾಗುತ್ತಿತ್ತು. ಸದ್ಯ ಚಿತ್ರ ಬದಲಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಇದೇ ರೀತಿಯ ಸಮಸ್ಯೆಯಿಂದಾಗಿ ಬಿಸಿಸಿಐ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ನ ಪ್ರೊಫೈಲ್‌ ಚಿತ್ರವನ್ನೂ ಇತ್ತೀಚೆಗೆ ತೆಗೆದುಹಾಕಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು