Recent Posts

Sunday, January 19, 2025
ಹೆಚ್ಚಿನ ಸುದ್ದಿ

ವಿದೇಶದಿಂದ ದೇಣಿಗೆ: ಗೃಹ ಸಚಿವಾಲಯದ ಕಠಿಣ ನಿಯಮ – ಕಹಳೆ ನ್ಯೂಸ್

ನವದೆಹಲಿ : ವಿದೇಶದಿಂದ ದೇಣಿಗೆ ಸಂಗ್ರಹ ಮಾಡುವ ಸರ್ಕಾರೇತರ ಸಂಸ್ಥೆ(NGO)ಗಳ ಮೇಲೆ ಕೇಂದ್ರ ಸರ್ಕಾರ ಕಡಿವಾಣ ಹಾಕುತ್ತಿದೆ. NGOಗಳ ಮೇಲೆ ಗೃಹ ಸಚಿವಾಲಯದ ಕಠಿಣ ನಿಯಮಗಳನ್ನು ಹೇರುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿದೇಶದಿಂದ ದೇಣಿಗೆ ಪಡೆಯಲು ಎನ್ಜಿಒಗಳು ಕನಿಷ್ಠ ಮೂರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರಬೇಕಾಗುತ್ತದೆ. ಈ ಬಗ್ಗೆ ವಿದೇಶಿ ನಿಯಂತ್ರಣ ಕಾಯ್ದೆಯಡಿ(FCRA) ನೋಂದಣಿ ಅಗತ್ಯ. ಜೊತೆಗೆ ಈ ಹಿಂದಿನ ಮೂರು ಆರ್ಥಿಕ ವರ್ಷಗಳಲ್ಲಿ 15 ಲಕ್ಷ ರೂಪಾಯಿಗಳನ್ನು ಸಾಮಾಜಿಕ ಚಟುವಟಿಕೆಗೆ ಬಳಸಿರುವುದಕ್ಕೆ ದಾಖಲೆ ಹೊಂದಿರಬೇಕಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯಾವುದೇ ಕಾರಣಕ್ಕೂ ಎನ್ಜಿಒಗಳು ರಾಜಕೀಯ ಪಕ್ಷಗಳ ಜೊತೆ ಸಂಬಂಧ ಹಾಗೂ ರಾಜಕೀಯ ಉದ್ದೇಶಕ್ಕೆ ಹಣ ಬಳಕೆ ಮಾಡಿರಬಾರದು. ರಸ್ತೆ ತಡೆ, ಬಂದ್, ಚಳವಳಿಗಳಲ್ಲಿ ಭಾಗವಹಿಸಿರುವ ಎನ್ಜಿಒಗಳು ವಿದೇಶದಿಂದ ದೇಣಿಗೆ ಪಡೆಯಲು ಅನರ್ಹವಾಗಲಿವೆ.
ದೇಶದಲ್ಲಿ ಪ್ರಸ್ತುತ ಸುಮಾರು 22,400 ಎನ್‌ಜಿಒಗಳಿದ್ದು, ಎಫ್‌ಸಿಆರ್‌ಎ ಅಡಿಯಲ್ಲಿ ನೋಂದಾಯಿಸಲಾದ ಸರ್ಕಾರೇತರ ಸಂಸ್ಥೆಗಳು 58,000 ಕೋಟಿಗೂ ಹೆಚ್ಚು ವಿದೇಶಿ ಹಣವನ್ನು ಸ್ವೀಕರಿಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ವಿದೇಶಿ ದೇಣಿಗೆ ಕುರಿತಂತೆ ಇರುವ ಕಾನೂನಿನ ತಿದ್ದುಪಡಿ ವಿದೇಶಿ ನಿಯಂತ್ರಣ ಕಾಯ್ದೆಯಡಿ ನೋಂದಣಿ ವೆಚ್ಚ 3,000 ರು ನಿಂದ 5,000ರುಗಳಿಗೆ ಏರಿಕೆ ಮಾಡಲಾಗಿದೆ.