Recent Posts

Monday, January 20, 2025
ಹೆಚ್ಚಿನ ಸುದ್ದಿ

ಕೆಣಕಿ ಬಂದ ಪಾಕ್’ಗೆ ತಕ್ಕ ಪಾಠ ಕಲಿಸಿದ ಭಾರತೀಯ ಸೇನೆ – ಕಹಳೆ ನ್ಯೂಸ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಪದೇ ಪದೇ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಲಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕ ಪಾಠ ಕಲಿಸಿದೆ. ಪಾಕಿಸ್ತಾನದ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ದೊಡ್ಡಮಟ್ಟದಲ್ಲೇ ಪ್ರತ್ಯುತ್ತರ ನೀಡಿದ್ದು, ಪಾಕ್ ಬಂಕರ್ ಗಳ ಮೇಲೆ ಸಾಲು ಸಾಲು ದಾಳಿ ನಡೆಸುವ ಮೂಲಕ ಶತ್ರುರಾಷ್ಟ್ರದ ಸೇನಿಕರು ಲಾಂಚ್ ಪ್ಯಾಂಡ್ ಬಿಟ್ಟು ಓಡಿಹೋಗುವಂತೆ ಮಾಡಿದೆ ಎಂದು ವರದಿಗಳು ತಿಳಿಸಿವೆ.


ಮೂಲಗಳ ಪ್ರಕಾರ ಭಾರತ ನಡೆಸಿರುವ ಪ್ರತಿದಾಳಿಯಲ್ಲಿ ಕನಿಷ್ಟ 8 ಮಂದಿ ಪಾಕಿಸ್ತಾನದ ಯೋಧರು ಹತರಾಗಿದ್ದಾರೆಂದು ಹೇಳಲಾಗುತ್ತಿದೆ. ಇವರಲ್ಲಿ 2 ಅಥವಾ 3 ಪಾಕಿಸ್ತಾನಿ ಎಸ್’ಪಿಜಿ ಪಡೆಯ ಕಮಾಂಡೋಗಳೂ ಇದ್ದಾರೆಂದು ವರದಿಗಳು ತಿಳಿಸಿವೆ. ಉಗ್ರರ ಹಿಂಬದಿಯಲ್ಲಿ ನಿಂತು ಪಾಕಿಸ್ತಾನ ಸೇನಾ ಪಡೆಗಳು ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ಗಡಿಯಲ್ಲಿ ಗುಂಡಿನ ದಾಳಿ ನಡೆಸಿತ್ತು. ವಾಸ್ತವ ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿದ್ದಲ್ಲದೇ ಎರಡು ಪ್ರತ್ಯೇಕ ಕಡೆಗಳಲ್ಲಿ ಕದನ ವಿರಾಮ ಉಲ್ಲಂಘಿಸಲಾಗಿತ್ತು. ಪಾಕಿಸ್ತಾನ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ಐವರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು