ಬಂಟ್ವಾಳ: ಕರ್ನಾಟಕ ರಾಜ್ಯ ಕುಂಬಾರ/ ಕುಲಾಲರ ಯುವವೇದಿಕೆಗಳ ಹಾಗೂ ಮಹಿಳಾ ಸಂಘಟನೆಗಳ ಒಕ್ಕೂಟ (ರಿ.) ಮಂಗಳೂರು, ಬಂಟ್ವಾಳ ಯುವವೇದಿಕೆಯ ವತಿಯಿಂದ ಸ್ವಜಾತಿ ಬಾಂಧವರಿಗೆ ಜಿಲ್ಲಾ ಮಟ್ಟದ ’ಹಣತೆಯೊಂದಿಗೆ ನಮ್ಮ ಕುಟುಂಬ’ ಎಂಬ ಫೋಟೋ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಗೆ ನಿಮ್ಮ ಕುಟುಂಬದೊಂದಿಗೆ ದೀಪಾವಳಿ ಆಚರಣೆಯ ಒಂದು ಸುಂದರ ಛಾಯಾಚಿತ್ರ, ಹೆಸರು ಹಾಗೂ ವಿಳಾಸದೊಂದಿಗೆ ದಿನಾಂಕ 30-11-2020 ರೊಳಗೆ 7348973771 ವಾಟ್ಸಪ್ ನಂಬರ್‍ಗೆ ಕಳುಹಿಸಿ, ಆಕರ್ಷಕ ಬಹುಮಾನ ಗೆಲ್ಲಿ.
ವಿಶೇಷ ಸೂಚನೆ:
• ತುಳುನಾಡ ಸಂಸ್ಕøತಿಯ ಉಡುಗೆ ತೊಡುಗೆಯೊಂದಿಗೆ ಮಣ್ಣಿನ ಹಣತೆಯ ಜೊತೆ ಕುಟುಂಬದ ಛಾಯಾ ಚಿತ್ರಕ್ಕೆ ಆದ್ಯತೆ.
• ಕುಲಾಲ, ಕುಂಬಾರ ಕುಟುಂಬವಾಗಿರಬೇಕು.
• ನೀವು ಬಳಸುವ ದೀಪ ಮಣ್ಣಿನ ಹಣತೆಯಾಗಿರಬೇಕು
• ಒಬ್ಬರಿಗೆ ಕೇವಲ ಎರಡು ಭಾವ ಚಿತ್ರ ಕಳುಹಿಸಲು ಅವಕಾಶವಿದೆ
• ನೈಜತೆಯೊಂದಿಗೆ ಫೋಟೋ ಸ್ಪಷ್ಟವಾಗಿ, ಆಕರ್ಷಕವಾಗಿರಬೇಕು
• ಕತ್ತಲು ಬೆಳಕಿನ ಚಿತ್ರಕ್ಕೆ ವಿಶೇಷ ಆದ್ಯತೆ ನೀಡಲಾಗುವುದು
• ಚಿತ್ರ ದೀಪಾವಳಿ ಹಬ್ಬ ಸಂಭ್ರಮದ ಸಂಕೇತವಾಗಿರಬೇಕು
• ಪ್ರಥಮ ದ್ವಿತೀಯ ತೃತೀಯ ಬಹುಮಾನಗಳು ಹಾಗೂ ಪ್ರೋತ್ಸಾಹಕ ಬಹುಮಾನಗಳನ್ನು ನೀಡಲಾಗುವುದು
• ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9964280079, 9980251242, 9481750430