ಬೆಂಗಳೂರು: ರಾಜ್ಯ ಸರ್ಕಾರವು ರಾಜ್ಯದದ ಹಲವು ದೇವಾಲಯಗಳು ಹಾಗೂ ಮಠಗಳು, ಧಾರ್ಮಿಕ ಸಂಸ್ಥೆಗಳಿಗೆ 88.75 ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ.
2019 -20 ಮತ್ತು 2020 – 21 ನೇ ಸಾಲಿನ ಬಜೆಟ್ ನಲ್ಲಿ ಮಠ-ಮಂದಿರ, ಧಾರ್ಮಿಕ ಸಂಸ್ಥೆಗಳಿಗೆ ಅನುದಾನ ಘೋಷಣೆ ಮಾಡಿದ್ದರೂ, ಕಾರಣಾಂತರದಿಂದ ಅನುದಾನ ಬಿಡುಗಡೆ ಮಾಡಿರಲಿಲ್ಲ. ಈಗ ಸಿಎಂ ಯಡಿಯೂರಪ್ಪ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಮುಜರಾಯಿ ಖಾತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಸರ್ಕಾರವು 2019-20 ರ ಬಜೆಟ್ ನಲ್ಲಿ ಘೋಷಿಸಿದ್ದರಂತೆ 39 ಮಠಗಳಿಗೆ ತಲಾ 1ಕೋಟಿ ರು. 143 ಮಠ, ಹಾಗೂ ದೇವಾಲಯಗಳ ಟ್ರಸ್ಟ್ ಗಳಿಗೆ 49.75 ಕೋಟಿ ಬಿಡುಗಡೆ ಮಾಡಲಾಗಿದೆ.
ಬುದ್ಧ ಬಸವ ಅಂಬೇಡ್ಕರ್ ಪ್ರತಿಷ್ಠಾನ, ಚಿತ್ರದುರ್ಗ, ಜಗದ್ಗುರು ಚಾಲುವಾಡಿ ಪೀಠ ಸಿರಾ, ತುಮಕೂರು, ಸಿದ್ದರಾಮೇಶ್ವರಸ್ವಾಮಿ ಟ್ರಸ್ಟ್, ಶಿವಮೊಗ್ಗ. ಮುರುಘಾ ಮಠ, ಧಾರವಾಡ; ಸಿದ್ದಗಂಗಾ ಮಠ, ತುಮಕೂರು. ಮತ್ತು ಪುಷ್ಪಗಿರಿ ಮಹಾಸಂಸ್ಥಾನ ಮಠ, ಬೆಂಗಳೂರು ಇವು ತಲಾ 1 ಕೋಟಿ ರು ಅನುದಾನ ಪಡೆದಿವೆ.
ಸರ್ಕಾರ ಹಣ ಬಿಡುಗಡೆ ಮಾಡಿರುವುದಕ್ಕೆ ಸಂತಸ ವ್ಯಕ್ತ ಪಡಿಸಿರುವ ಕೋಟಾ ಶ್ರೀನಿವಾಸ ಪೂಜಾರಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.