Sunday, January 19, 2025
ಹೆಚ್ಚಿನ ಸುದ್ದಿ

ಗಿನ್ನಿಸ್ ವಿಶ್ವ ದಾಖಲೆಗೆ ಸೇರಿಂದ ಪ್ರಪಂಚದ ಅತಿದೊಡ್ಡ ಕಾರಂಜಿ..! – ಕಹಳೆ ನ್ಯೂಸ್

ದುಬೈ- ಯುನೈಟೆಡ್ ಅರಬ್ ಎಮಿರೆಟ್ ಹೊಸ ಹೊಸ ಆಕರ್ಷಣೆಗಳಿಂದ ವಿಶ್ವವಿಖ್ಯಾತಿ ಪಡೆದಿದೆ. ಈಗ ಈ ಪಟ್ಟಿಗೆ ಮತ್ತೊಂದು ಸೇರ್ಪಡೆ ಎಂದರೆ ಪ್ರಪಂಚದ ಅತಿದೊಡ್ಡ ಕಾರಂಜಿ. ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಈ ಮ್ಯೂಸಿಕಲ್ ಫೌಂಟನ್ ದೇದೀಪ್ಯಮಾನವಾಗಿ ಕಂಗೋಳಿಸುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ನಯನ ಮನೋಹರ ವರ್ಣಮಯ ಬೆಳಕಿನ ದೃಶ್ಯ ವೈಭವ ರೋಮಾಂಚನಕಾರಿ. ದುಬೈನ ಜಗತ್‍ಪ್ರಸಿದ್ಧ ವಾಟರ್‍ಫ್ರಂಟ್ ಪಾಮ್ ಜುಮೈರಾ ಪ್ರದೇಶದ ದಿ ಪಾಯಿಂಟ್‍ನಲ್ಲಿರುವ ವರ್ಣರಂಜಿತ ಕಾರಂಜಿ ಪ್ರಪಂಚದ ಅತಿ ದೊಡ್ಡ ಫೌಂಟನ್ ಎಂಬ ಗಿನ್ನಿಸ್ ವಿಶ್ವ ದಾಖಲೆಗೆ ಪಾತ್ರವಾಗಿದೆ. ಬಹು ವರ್ಣಗಳ ದೀಪಗಳು ಮತ್ತು ಎತ್ತರಕ್ಕೆ ಚಿಮ್ಮುವ ನೀರಿನ ಸಿಂಚನಗಳು ಈಗ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿವೆ.
ಕತ್ತಲ ಆಗಸದಲ್ಲಿ ಈ ಕಾರಂಜಿ ನೋಡುಗರನ್ನು ದೇದೀಪ್ಯಮಾನ ಜಲ ಚಮತ್ಕಾರಗಳೊಂದಿಗೆ ಹೊಸ ಲೋಕಕ್ಕೆ ಕರೆದೊಯ್ಯುತ್ತದೆ. ಇದು ಸಂಯುಕ್ತ ಅರಬ್ ಗಣರಾಜ್ಯದ ನವ ಆಕರ್ಷಣೆಗಳಲ್ಲಿ ಒಂದಾಗಿದೆ. ಫಾಮ್ ಫೌಂಟನ್ ಅನಾವರಣದ ವರ್ಣರಂಜಿತ ಕಾರ್ಯಕ್ರಮವನ್ನು ವಿಶ್ವದಾದ್ಯಂತ ನೇರ ಪ್ರಸಾರ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಶ್ವದ ಅತಿ ದೊಡ್ಡದಾದ ಈ ಕಾರಂಜಿಯು ಸಮುದ್ರದ ನೀರಿನಲ್ಲಿ 14,000 ಚದರ ಅಡಿಗಳಷ್ಟು ವಿಸ್ತಾರವಾಗಿದೆ. ಈ ಮ್ಯೂಸಿಕಲ್ ಫೌಂಟನ್ 105 ಮೀಟರ್‍ಗಳಷ್ಟು ಎತ್ತರಕ್ಕೆ ಬಣ್ಣ ಬಣ್ಣದ ನೀರನ್ನು ಚಿಮ್ಮಿಸುತ್ತದೆ. ಇದಕ್ಕಾಗಿ 128 ಸೂಪರ್ ಶೂಟರ್‍ಗಳನ್ನು ಅಳವಡಿಸಲಾಗಿದೆ ಎಂದು ಈ ವಿಸ್ಮಯ ಕಾರಂಜಿಯ ನಿರ್ದೇಶಕರಾದ ಗೈಲ್ ಸ್ಯಾಂಗ್‍ಸ್ಟರ್ ವಿವರಿಸಿದ್ದಾರೆ.

ದಿ ಪಾಮ್ ಫೌಂಟನ್ ಜಗತ್ತಿನ ಅತ್ಯಂತ ಬೃಹತ್ ಕಾರಂಜಿ ಎಂಬ ಗಿನ್ನಿಸ್ ವಿಶ್ವ ದಾಖಲೆಗೆ ಪಾತ್ರವಾಗಿದೆ. ಈ ಮೂಲಕ ದಕ್ಷಿಣ ಕೊರಿಯಾದ 2,519 ಚದರ ಮೀಟರ್‍ಗಳಷ್ಟು ದೊಡ್ಡದಾದ ಬಾನ್ಪೋ ಮೂನ್‍ಲೈಟ್ ರೈನ್‍ಬೋ ಫೌಂಟನ್ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದೆ.

ಈ ಕಾರಂಜಿಗೆ 3,000ಕ್ಕೂ ಹೆಚ್ಚು ಎಲ್‍ಇಡಿ ದೀಪಗಳನ್ನು ಅಳವಡಿಸಲಾಗಿದೆ. ಇದು ದುಬೈನಲ್ಲಿರುವ ಏಕೈಕ ಮತ್ತು ಅತಿ ದೊಡ್ಡ ಬಣ್ಣಬಣ್ಣದ ಕಾರಂಜಿ. ಕಲರ್‍ಗಳು ಮತ್ತು ಲೈಟ್‍ಗಳನ್ನು ನಿಯಂತ್ರಿಸುವ ವಿಶೇಷ ವ್ಯವಸ್ಥೆಯೊಂದಿಗೆ ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದು ವರ್ಷದ ಎಲ್ಲ ದಿನಗಳು ಜನರ ವೀಕ್ಷಣೆಗೆ ಲಭ್ಯ.

ಈ ಮ್ಯೂಸಿಕ್ ಫೌಂಟನ್ ಮೂರು ನಿಮಿಷಗಳ ಕಾಲ ಸಂಗೀತಕ್ಕೆ ತಕ್ಕಂತೆ ನರ್ತಿಸುತ್ತದೆ. ಪ್ರತಿ 30 ನಿಮಿಷಗಳೊಮ್ಮೆ ಈ ವಿಸ್ಮಯ ಕಾರಂಜಿಯ ದೃಶ್ಯ ವೈಭವವನ್ನು ಪ್ರೇಕ್ಷಕರು ಕಣ್ತುಂಬಿಕೊಳ್ಳಬಹುದು.