Sunday, January 19, 2025
ಪುತ್ತೂರು

ಪುತ್ತೂರು : ಉದ್ಯಮಿ ಯುನಿಟಿ ಹಸನ್ ಹಾಜಿ ನಿಧನ- ಕಹಳೆ ನ್ಯೂಸ್

ಪುತ್ತೂರಿನ ಹೆಸರಾಂತ ಉದ್ಯಮಿ, ಅಡಿಕೆ ವ್ಯಾಪಾರಿ, ಸಾಮಾಜಿಕ ಕಾರ್ಯಕರ್ತ ಪಿ.ಬಿ.ಹಸನ್ ಹಾಜಿ (72) ಅಲ್ಪಕಾಲದ ಅಸೌಖ್ಯದಿಂದ ರವಿವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಜಾಹೀರಾತು
ಜಾಹೀರಾತು
ಜಾಹೀರಾತು

‘ಯುನಿಟಿ’ ಎಂಬ ಅಡಿಕೆ ವ್ಯಾಪಾರ ಸಂಸ್ಥೆ ನಡೆಸುತ್ತಿದ್ದ ನಗರದ ಕೂರ್ನಡ್ಕ ನಿವಾಸಿಯಾಗಿದ್ದ ಹಸನ್ ಹಾಜಿಯವರು ‘ಯುನಿಟಿ ಹಸನ್ ಹಾಜಿ’ ಎಂದೇ ಹೆಸರುವಾಸಿಯಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ಸೀರತ್ ಕಮಿಟಿಯ ಅಧ್ಯಕ್ಷರಾಗಿದ್ದ ಅವರು ಪುತೂರು ಕೇಂದ್ರ ಜುಮಾ ಮಸೀದಿಗೊಳಪಟ್ಟ ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಮಾಜಿ ಅಧ್ಯಕ್ಷರಾಗಿ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಹಲವಾರು ಧಾರ್ಮಿಕ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಅವರು ಕೊಡುಗೈ ದಾನಿಯಾಗಿದ್ದರು.

ಬಡ ಹೆಣ್ಣು ಮಕ್ಕಳ ವಿವಾಹ, ಪ್ರತಿಬಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣ, ಅನಾರೋಗ್ಯ ಪೀಡಿತರಿಗೆ ಸ್ಪಂದನ ಮೊದಲಾದ ಸೇವಾ ಕಾರ್ಯವನ್ನು ಯಾವುದೇ ಪ್ರಚಾರವಿಲ್ಲದೆ ಮಾಡುತ್ತಿದ್ದರು.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ನಾಲ್ವರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.