Recent Posts

Sunday, January 19, 2025
ಹೆಚ್ಚಿನ ಸುದ್ದಿ

Breaking News : ಹಿರಿಯ ನಟ ಸೌಮಿತ್ರಾ ಚಟರ್ಜಿ 85 ನೇ ವಯಸ್ಸಿನಲ್ಲಿ ನಿಧನ – ಕಹಳೆ ನ್ಯೂಸ್

ಕೊಲ್ಕತ್ತಾ : ಕೊರೋನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಂತ ಹಿರಿಯ ನಟ ಸೌಮಿತ್ರ ಚಟರ್ಜಿ(85) ಅವರು, ಚಿಕಿತ್ಸೆ ಫಲಕಾರಿಯಾಗದೇ ಕೋಲ್ಕತ್ತಾದಲ್ಲಿ ನಿಧನರಾಗಿದ್ದಾರೆ. ಸುಮಾರು ಒಂದು ತಿಂಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಕೋಲ್ಕತ್ತದ ಬೆಲ್ಲಿವ್ ನರ್ಸಿಂಗ್ ಹೋಮ್ ನಲ್ಲಿ ಕೊನೆಯ ಉಸಿರೆಳೆದಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಕ್ಟೋಬರ್ 6ರಂದು ಸೌಮಿತ್ರ ಚಟರ್ಜಿ ಅವರು ಕೊರೊನಾ ವೈರಸ್ ನ ಸೋಂಕಿಗೆ ತುತ್ತಾಗಿದ್ದರು. ಕೊರೊನಾ ವೈರಸ್ ಪಾಸಿಟಿವ್ ಎಂಬುದಾಗಿ ದೃಢಪಟ್ಟ ನಂತ್ರ, ತೀವ್ರ ಉಸಿರಾಟದ ತೊಂದರೆಯಿಂದಾಗಿ ಟ್ರಾಮಾ ಯುನಿಟ್ ಗೆ (ITU) ವರ್ಗಾಯಿಸಲಾಯಿತು. ಅಂದಿನಿಂದ ಹಿರಿಯ ಬಂಗಾಳಿ ನಟ, ಅವರ ಆರೋಗ್ಯದ ಮೇಲೆ ನಿಗಾ ಇಡಲು ವಿಶೇಷ ತಂಡವೊಂದನ್ನು ರಚಿಸಿ, ತಜ್ಞ ವೈದ್ಯರ ಆರೈಕೆಯಲ್ಲಿ ದ್ದರು. ಅವರು ಕೊವಿಡ್-19 ಪರಿಣಾಮಗಳಿಂದ ದ್ವಿತೀಯ ಸೋಂಕುಗಳನ್ನು ಎದುರಿಸುತ್ತಿದ್ದರು.
ಕಳೆದ ಕೆಲವು ದಿನಗಳಿಂದ ಚಟರ್ಜಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಅವರು ವೆಂಟಿಲೇಟರ್ ನಲ್ಲಿದ್ದರು. ಇಂತಹ ಹಿರಿಯ ನಟ ಸೌಮಿತ್ರ ಚಟರ್ಜಿ(85) ಅವರು, ಚಿಕಿತ್ಸೆ ಫಲಕಾರಿಯಾಗದೇ ಕೋಲ್ಕತ್ತಾದಲ್ಲಿ ನಿಧನರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು