Friday, September 20, 2024
ಸುದ್ದಿ

BREAKING NEWS : ಕನ್ನಡ ಮಾಧ್ಯಮದ ಮಕ್ಕಳಿಂದ ಚರ್ಚ್ ರಸ್ತೆ ರಿಪೇರಿ ಮಾಡಿಸುತ್ತಿರುವ ಮುದರಂಗಡಿ ಸಂತ ಪ್ರಾನ್ಸಿಸ್ ಚರ್ಚ್ ನ ಧರ್ಮ ಗುರು – ಕಹಳೆ ನ್ಯೂಸ್

ಮುದರಂಗಡಿ : ಸಂತ ಪ್ರಾನ್ಸಿಸ್ ಚರ್ಚ್ ನ ಕನ್ನಡ ಮಾಧ್ಯಮ ಶಾಲಾ ಮಕ್ಕಲಳಿಂದ ಚರ್ಚ್ ಹೊರಾಂಗಣದ ರಸ್ಥೆ ಬದಿಯ ಕಲ್ಲು ಮಣ್ಣುಗಳನ್ನ ಹೊರಿಸಿ, ರಸ್ತೆ ರಿಪೇರಿ ಮಾಡಿಸುವ ಕೆಲಸವನ್ನು ಇಲ್ಲಿ ಧರ್ಮಗುರು ನಡೆಸುತ್ತಿದ್ದಾರೆ ಎಂಬ ಫೋಟೋಗಳು ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅದರಲ್ಲೂ ಹಿಂದೂ ಮಕ್ಕಳಿಂದ ಈ ಕಾರ್ಯ ನಡೆಸುತ್ತಿದ್ದಾರೆ. ಶಾಲೆಯಲ್ಲಿ ಹಿಂದೂ ಕ್ರಿಶ್ಚಿಯನ್ ಎಂಬ ಭೇದ ಭಾವ ಮಾಡುತ್ತಾ ಬಂದಿದ್ದು ಮಾತ್ರಲವಲ್ಲದೆ, ಹತ್ತಿರದ ಕಂಪನೀ ಆದ ಅದಾನಿ ಸಮೂಹ, ಕೊಡುಗೆಯಾಗಿ ನೀಡಿರುವ ಜಿಮ್ ಸಲಕರಣೆಗಳನ್ನು ಕೇವಲ ಕ್ರಿಶ್ಚಿಯನ್ ಮಕ್ಕಳಿಗೆ ಮಾತ್ರ ಬೇರೆಯವರಿಗೆ ಅವಕಾಶವಿಲ್ಲ ಎಂದು ಮಕ್ಕಳಲ್ಲಿ ಜಾತೀಯ ವಿಷಬೀಜ ಬಿತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಪ್ರಾರ್ಥನ ಮಂದಿರದ ಹೊರಾಂಗಣದ ರಸ್ಥೆ ಬದಿಯ ಕೆಲಸ ಹಿಂದೂ ಮಕ್ಕಳಿಂದ ಕೆಲಸ ಮಾಡಿಸಲು ಅಧಿಕಾರ ಕೊಟ್ಟವರು ಯಾರು? ಹಿಂದು ಕ್ರಿಶ್ಚಿಯನ್ ಅನ್ನೋ ಭೇದ ಭಾವ ಬಿಟ್ಟು ಹೇಳೋ ಹಾಗಿದ್ರೆ.ಎಳೆ ವಯಸ್ಸಿನ ವಿಧ್ಯಾರ್ಥಿಗಳಿಂದ ಇಂತಹ ಕೆಲಸ ಮಾಡಿಸೋಕ್ಕೆ ಆ ಧರ್ಮ ಗುರುಗೆ ಅಧಿಕಾರ ಯಾರು ಕೊಟ್ಟದ್ದು.? ಸಂಬಳ ಕೊಟ್ಟು ಆ ಕೆಲಸಗಳನ್ನ ಮಾಡಿಸೋದು ಬಿಟ್ಟು ಕಲಿಯೋ ಎಳೆ ಮನಸ್ಸಿನ ಮಕ್ಕಳನ್ನ ದುಡಿಸುವುದು ಸರಿಯೇ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ : ಕಹಳೆ ನ್ಯೂಸ್

( ಈ ವರದಿಗೆ ನಾವು ಜವಾಬ್ದಾರಿರಲ್ಲ, ಸಮಾಜಿಕ ಜಾಲತಾಣಗಳಲ್ಲಿ ಚರ್ಚಿತವಾಗುವ ವಿಷಯವನ್ನು ಸಮಾಜದ ಮುಂದಿಡುವ ಪ್ರಯತ್ನ ಮಾತ್ರ ನಮ್ಮದ್ದು )