Monday, November 25, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ರೋಟರಿ ಕ್ಲಬ್ ಪುತ್ತೂರು ಯುವ ಹಾಗೂ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ದೀಪಾವಳಿ ಹಾಗೂ ಮಕ್ಕಳ ದಿನಾಚರಣೆ – ಕಹಳೆ ನ್ಯೂಸ್

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಹಾಗೂ ದೀಪಾವಳಿಯನ್ನು ರೋಟರಿ ಮನೀಷಾ ಸಭಾಂಗಣದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಾರಂಭದಲ್ಲಿ ಇನ್ನರ್ ವ್ಹೀಲ್ ಕ್ಲಬ್ ನ ಸದಸ್ಯೆ ಶ್ರೀಮತಿ ರಾಧಿಕಾ ಶೆಣೈ ಅವರ ಪತಿಯ ಅಕಾಲಿಕ ಮರಣದಿಂದ ದೀಪಾವಳಿಯ ಸಂಭ್ರಮವನ್ನು ರದ್ದುಗೊಳಿಸಿ ಅವರ ಆತ್ಮಕ್ಕೆ ಶಾಂತಿಯನ್ನು ಕೋರಲು ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ನಡೆಸಿ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಆರಂಭಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಪುತ್ತೂರು ಯುವ ಮತ್ತು ಜನ್ಮ ಪೌಂಡೇಷನ್ ಟ್ರಸ್ಟ್ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ನಡೆದ ತಾಲ್ಲೂಕು ‌ಮಟ್ಟದ ದೇಶಭಕ್ತಿ ಗೀತೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕಲರ್ಸ್ ಕನ್ನಡ ಗಾನ ಕೋಗಿಲೆ ಅಪೆಕ್ಷ ಪೈ ಹಾಗೂ ಸಬ್ ಇನ್ಸ್ಪೆಕ್ಟರ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 54ನೇ ರಾಂಕ್ ಪಡೆದ ಪುತ್ತೂರಿನ ಸ್ವೀಕೃತ್ ರೈ ಇವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿವೇಕಾನಂದ ಬಿ.ಎಡ್ ಕಾಲೇಜಿನ ಪ್ರಾಂಶುಪಾಲೆ ಡಾ. ಶೋಭಿತಾ ಸತೀಶ್ ಇವರು ದೀಪಾವಳಿಯ ಮಹತ್ವ ಹಾಗೂ ವಿಶೇಷತೆಯ ಬಗ್ಗೆ ಉಪನ್ಯಾಸ ನೀಡಿದರು. ಪುತ್ತೂರು ನಗರಸಭೆಯ ನೂತನ ಉಪಾಧ್ಯಕ್ಷರಾದ ಶ್ರೀಮತಿ ವಿದ್ಯಾ ಗೌರಿ ಆಗಮಿಸಿದ್ದರು.

ಇನ್ನರ್ ವ್ಹೀಲ್ ಕ್ಲಬ್ ನ ಅಧ್ಯಕ್ಷರಾದ ಶ್ರೀಮತಿ ಸೀಮಾ ನಾಗರಾಜ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ಶ್ರೀಮತಿ ಶಂಕರಿ ಎಂ.ಎಸ್ ಮತ್ತು ಶ್ರೀಮತಿ ಸೌಮ್ಯ ಎಂ.ಯು ಅತಿಥಿಗಳನ್ನು ಸಭೆಗೆ ಪರಿಚಯಿಸಿದರು ಹಾಗೂ ಕುಮಾರಿ ಜೀವಿಕ ಕಜೆ ಪ್ರಾರ್ಥನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಕುಮಾರಿ ಅಪೇಕ್ಷ ಪೈ ಹಾಗೂ ದೇಶಭಕ್ತಿ ಗೀತೆಯ ವಿಜೇತೆ ಕುಮಾರಿ ರಿತ್ವಿಕಾ ಇವರು ಸುಂದರ ಹಾಡಿನ ಮೂಲಕ ಎಲ್ಲರನ್ನೂ ಮನರಂಜಿಸಿದರು.

ರೋಟರಿ ಕ್ಲಬ್ ಪುತ್ತೂರು ಯುವ ಇದರ ಅಧ್ಯಕ್ಷರಾದ ಡಾ. ಹರ್ಷಕುಮಾರ ರೈ ಇವರು ಧನ್ಯವಾದ ಸಮರ್ಪಣೆ ಗೈದರು. ಇನ್ನರ್ ವ್ಹೀಲ್ ಕ್ಲಬ್ಬಿನ ಕಾರ್ಯದರ್ಶಿ ಅಶ್ವಿನಿ ಕೃಷ್ಣ ಮುಳಿಯ ಮತ್ತು ಯುವದ ಕಾರ್ಯದರ್ಶಿ ಉಮೇಶ್ ನಾಯಕ್ ಉಪಸ್ಥಿತರಿದ್ದರು.

ದೇಶಭಕ್ತಿ ಗೀತೆ ಸ್ಪರ್ಧೆಯ ಸಂಯೋಜಕಿ ಶ್ರೀಮತಿ ರಾಜೇಶ್ವರಿ ಆಚಾರ್ ದೇಶಭಕ್ತಿ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮವನ್ನು ನೆರವೇರಿಸಿದರು. ಇನ್ನರ್ ವ್ಹೀಲ್ ನ ಶ್ರೀಮತಿ ಕೃಷ್ಣವೇಣಿ ಮುಳಿಯ ಇವರು ಕಾರ್ಯಕ್ರಮ ನಿರೂಪಿಸಿದರು.

ಮಕ್ಕಳ‌ ದಿನಾಚರಣೆ ಪ್ರಯುಕ್ತ ಪುತ್ತೂರು ತಾಲೂಕಿನ ಸುಮಾರು 100 ಕ್ಕೂ ಅಧಿಕ ಸ್ಪರ್ಧಾಳುಗಳು‌ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಭಾಗಿಯಾಗಿರುತ್ತಾರೆ.

ಈ ಬಾರಿಯ ವಿಜೇತರ ಹೆಸರು

1 ಕುಮಾರಿ ರಿತ್ವಿಕಾ
( ಗಜಾನನ ಆಂಗ್ಲ ಮಾಧ್ಯಮ ಶಾಲೆ)

2 ಕುಮಾರಿ ಶ್ರೀ ವಿಭಾ ಕೆ ಎಸ್
( ಸುದಾನ ಶಾಲೆ ಪುತ್ತೂರು)

3 ಚಿನ್ಮಯ್ ಆರ್
( ಲಿಟಲ್ ಫ್ಲವರ್ ಶಾಲೆ ಪುತ್ತೂರು)

4 ಕುಮಾರಿ ಭಾನವಿ ಕೃಷ್ಣ
( ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ)

5 ಕುಮಾರಿ ಅನನ್ಯ ನಾವಡ
( ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ)

6 ಕುಮಾರಿ ಪ್ರಜ್ಞ ನಿಡ್ವಣ್ಣಾಯ
( ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ)

ಸಮಾಧಾನಕರ ಬಹುಮಾನ ಪಡೆದವರು

1. ಕುಮಾರಿ ಅವನಿ ಎಸ್ ವಿ
( ವಿವೇಕಾನಂದ ಶಾಲೆ)

2. ಕುಮಾರಿ ದೃತಿ ವಿ ಶೆಟ್ಟಿ
( ಸುದಾನ ಶಾಲೆ)

3. ಪೃಥ್ವಿರಾಜ್ ಪಿ ಜಿ
( ಪೆರ್ಲಂಪಾಡಿ ಶಾಲೆ)

4. ಕುಮಾರಿ ದಿಯಾ ಪ್ರಮೋದ್
( ಸುದಾನ ಶಾಲೆ)

ಪ್ರೋತ್ಸಾಹಕರ ಬಹುಮಾನ ಪಡೆದವರು

1. ಕುಮಾರಿ ಧನ್ವಿ
( ಅಂಬಿಕಾ ಬಾಲ ವಿದ್ಯಾಲಯ)

2. ಕುಮಾರಿ ಭಾರ್ಗವಿ ಸಿಂಹಾಚಲ
( ಸುದಾನ ಶಾಲೆ ಪುತ್ತೂರು)