Recent Posts

Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ನೇತೃತ್ವದಲ್ಲಿ ಕೊಂಬೆಟ್ಟು ಅಟಲ್ ಉದ್ಯಾನದಲ್ಲಿ ಯೋಧರೊಂದಿಗೆ ದೀಪಾವಳಿ – ಕಹಳೆ ನ್ಯೂಸ್

ಪುತ್ತೂರು: ಕೊಂಬೆಟ್ಟು ಅಟಲ್ ಉದ್ಯಾನದಲ್ಲಿ ಯೋಧರೊಂದಿಗೆ ದೀಪಾವಾಳಿ ಆಚರಣೆಯು ಬಿಜೆಪಿ ನಗರ ಮಂಡಲ ಮತ್ತು ಮಹಿಳಾ ಮೋರ್ಚಾದ ನೇತ್ರತ್ವದಲ್ಲಿ ನ.15 ರಂದು ನಡೆಯಿತು.

ಬಿಜೆಪಿ ನಗರ ಮಂಡಲ ಮತ್ತು ಮಹಿಳಾ ಮೋರ್ಚಾದ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಟಲ್ ಉದ್ಯಾವನದ ಮತ್ತು ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಯ ಸುತ್ತು ಹಣತೆ ಬೆಳಗಿಸಿ, ಮಾಜಿ ಸೈನಿಕರಾದ ಯಶೋಧರ ಶೆಟ್ಟಿ ಮತ್ತು ಚಂದ್ರಶೇಖರ ಟಿ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕೆ ಲಲಿತಾ ಅವರನ್ನೂ ಗೌರವಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಪ್ರಧಾನ ಕಾರ್ಯದರ್ಶಿ ಜಯಶ್ರೀ ಎಸ್ ಶೆಟ್ಟಿ, ಜಿಲ್ಲಾ ಯುವ ಮೋರ್ಚಾದ ಕಿರಣ್‌ಶಂಕರ್ ಮಲ್ಯ, ಕೊಂಬೆಟ್ಟು ಬೂತ್ ಅಧ್ಯಕ್ಷ ಶ್ರೀಪತಿ ರಾವ್, ಕಾರ್ಯದರ್ಶಿ ನವೀನ್ ಪಡಿವಾಳ್, ಗಣೇಶ್ ಬಾಳಿಗ, ಸ್ಮಿತಾ ಬಾಳಿಗ, ಮಹಿಳಾ ಮೋರ್ಚಾದ ಪ್ರಧಾನಕಾರ್ಯದರ್ಶಿಗಳಾದ ಪ್ರಭಾವತಿ ಮತ್ತು ಜಯಶ್ರೀ ನಾಯಕ್, ಬೆಂಗಳೂರು ಆರ್ ಆರ್ ನಗರದ ಬಿಜೆಪಿ ಉಪಾಧ್ಯಕ್ಷ ಶ್ರೀಧರ್, ಚೇತನಾ ಹೆಗ್ಡೆ, ಸಂಧ್ಯಾ ಬಾಳಿಗ, ಶೋಭಾ ಅಚಾರ್ಯ, ಸನ್ನಿಧಿ ಶೆಣೈ, ಲಲಿತ ವೈ, ಪಾಂಡುರಂಗ ನಾಯಕ್, ವಿನೋದ್ ಕಾಮತ್, ಮನೋಜ್, ಸಂದೀಪ್, ಕೇಶವ ಮಲ್ಯ, ಸತೀಶ್ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು