Recent Posts

Sunday, January 19, 2025
ದಕ್ಷಿಣ ಕನ್ನಡಪುತ್ತೂರುರಾಜಕೀಯಸುದ್ದಿ

ಬಿಜೆಪಿಯಿಂದ ದೀಪಾವಳಿ ಸಂಭ್ರಮ | ಹಿರಿಯ ಕಾರ್ಯಕರ್ತರ ಸಭೆ ; ಪ್ರತಾಪ್ ಸಿಂಹ ನಾಯಕ್ ಭಾಗಿ – ಕಹಳೆ ನ್ಯೂಸ್

ಪುತ್ತೂರು: ಬಿಜೆಪಿ ಪುತ್ತೂರು ಗ್ರಾಮಾಂತರ ಮತ್ತು ನಗರ ಮಂಡಲದಿಂದ ದೀಪಾವಳಿ ಹಬ್ಬದ ಪ್ರಯುಕ್ತತ ಹಿರಿಯ ಕಾರ್ಯಕರ್ತರ ಸಭೆಯು ನ.15ರಂದು ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಸಭಾಂಗಣದಲ್ಲಿ ನಡೆಯಿತು. ಬಿಜೆಪಿ ಹಿರಿಯ ಕಾರ್ಯಕರ್ತರೂ ಮತ್ತು ಮಂಡಲದ ಮಾಜಿ ಅಧ್ಯಕ್ಷ ಬಾಲಕೃಷ್ಣ ಮುಗರೋಡಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ಬಿಜೆಪಿಯ ಹಿರಿಯ ಕಾರ್ಯಕರ್ತರನ್ನು ಶಾಸಕ ಸಂಜೀವ ಮಠಂದೂರು ಮತ್ತು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರು ಹಿರಿಯ ಕಾರ್ಯಕರ್ತರು ಕುಳಿತ ಸ್ಥಳಕ್ಕೆ ಹೋಗಿ ಅವರಿಗೆ ಶಾಲು ಹೊದಿಸಿ ಗೌರಿವಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹಿರಿಯ ಶ್ರಮ ವ್ಯರ್ಥ ಆಗಬಾರದು –  ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್

ಜಾಹೀರಾತು
ಜಾಹೀರಾತು
ಜಾಹೀರಾತು

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರು ಮಾತನಾಡಿ ಹಿಂದೆ ಹಿರಿಯ ಕಾರ್ಯಕರ್ತರ ಶ್ರಮದ ಫಲ ಇವತ್ತು ನಾವು ಅನುಭವಿಸುತ್ತಿದ್ದೇವೆ. ಕಾಶ್ಮೀರದಿಂದ ಕನ್ಯಾಕುಮಾರಿ ತನಕ ನಮ್ಮ ಗೆಲುವು ನಿಶ್ಚಿತ ಮತ್ತು ವಿಶ್ವಾಸ ಎಂದು ಹಿರಿಯ ಕಾರ್ಯಕರ್ತರಿಗೆ ನಂಬಿಕೆ ಇತ್ತು. ಯಾಕೆಂದರೆ ನಾವು ನಮಗಾಗಿ ಅಲ್ಲ ಪಕ್ಷಕಾಗಿ ದುಡಿಯುತ್ತಿದ್ದೆವು ಮತ್ತು ಪಕ್ಷದ ಕುರಿತು ಏನೋ ಪ್ರಿತಿ ಅವರಲ್ಲಿ ಇತ್ತು. ಹಾಗಾಗಿ ಇವತ್ತು ಹಿರಿಯ ಪರಿಶ್ರಮ ವ್ಯರ್ಥ ಆಗಬಾರದು ಎಂದು ಅವರು ಹೇಳಿದರು.

ಹಿರಿಯರ ಯೋಗದಾನದಿಂದ ಸ್ಥಾನ ಮಾನ ಸಿಕ್ಕಿದೆ:
ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಬೂತ್ ಮಟ್ಟದಿಂದ ರಾಷ್ಟ್ರಮಟ್ಟದ ತನಕ ಬಿಜೆಪಿ ಪ್ರತಿನಿದಿಗಳಿದ್ದರೆ ಅದು ಹಿರಿಯರ ಶ್ರಮದಿಂದ ಅಗಿರುವುದು. ತಾಯಿ ಭಾರತಿಯನ್ನು ಪರಮವೈಭವಕ್ಕೆ ಕೊಂಡೊಯ್ಯುವುದೇ ನಮ್ಮೆಲ್ಲರ ಉದ್ದೇಶ ಆಗಿತ್ತು. ಹಿರಿಯರ ಯೋಗದಾನದಿಂದ ಇವತ್ತು ಸ್ಥಾನ ಮಾನ ಸಿಕ್ಕಿದೆ ಎಂದರು.

ಹಿರಿಯ ಕಾರ್ಯಕರ್ತರಾದ ಸುಧಾಕರ ಸುವರ್ಣ, ಬಾಲಕೃಷ್ಣ ಮುಗರೋಡಿ, ಸೇಡಿಯಾಪು ಜನಾರ್ದನ ಭಟ್, ಸದಾಶಿವ ಭಂಡಾರಿ, ಚೆನ್ನಪ್ಪ ರೈ ಕುರಿಕ್ಕಾರ ಅವರು ತಮ್ಮ ಅನುಭವ ಹಂಚಿಕೊಂಡರು. ಜಿಲ್ಲಾ ವಿಭಾಗ ಸಹ ಸಂಚಾಲಕ ಗೋಪಾಲಕೃಷ್ಣ ಹೇರಳೆ, ನಗರಸಭಾ ಅದ್ಯಕ್ಷ ಜೀವಂಧರ್ ಜೈನ್, ಕ್ಯಾಂಪ್ಕೊ ನಿರ್ದೇಶಕ ಚನಿಲ ತಿಮ್ಮಪ್ಪ ಶೆಟ್ಟಿ, ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಎಸ್.ಅಪ್ಪಯ್ಯ ಮಣಿಯಾಣಿ ಉಪಸ್ಥಿತರಿದ್ದರು, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಶಾಂತಿವನ ಕಾರ್ಯಕ್ರಮ ನಿರೂಪಿಸಿದರು. ಸಭೆಯ ಬಳಿಕ ಹಿರಿಯರ ಜೊತೆ ಸಹಭೋಜನ ನಡೆಯಿತು.