Recent Posts

Sunday, January 19, 2025
ಸುದ್ದಿ

ನೀರುಮಾರ್ಗದಲ್ಲಿ ಆಟೋ ಪಾರ್ಕ್ ಮೇಲ್ಚಾವಣಿ ಉದ್ಘಾಟನಾ ಕಾರ್ಯಕ್ರಮ– ಕಹಳೆ ನ್ಯೂಸ್

ನೀರುಮಾರ್ಗ A ಮತ್ತು B ಆಟೋ ಪಾರ್ಕ್ ಮೇಲ್ಚಾವಣಿ ಉದ್ಘಾಟನಾ ಕಾರ್ಯಕ್ರಮವು 15-11-2020 ರಂದು ನೀರುಮಾರ್ಗದಲ್ಲಿ ನಡೆಯಿತು.ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರು ಡಾ | ವೈ ಭರತ್ ಶೆಟ್ಟಿ ಇವರು ತಮ್ಮ ಶಾಸಕರ ನಿಧಿಯಿಂದ ವಿಶೇಷ ಮುತುವರ್ಜಿ ವಹಿಸಿ ಆಟೋ ಪಾರ್ಕ್ ಮೇಲ್ಚಾವಣಿ ಅನುದಾನ ಒದಗಿಸಿಕೊಟ್ಟರು.

ಸಭೆಯ ಅಧ್ಯಕ್ಷತೆ ವಹಿಸಿದ ಶಾಸಕರು ರಿಕ್ಷಾ ಚಾಲಕರ ಬಗ್ಗೆ ಕಾಳಜಿಯ ನುಡಿಯನ್ನು ಆಡಿದರು. ಜಾತಿ ಮತ ಪಕ್ಷ ಭೇದವಿಲ್ಲದೆ ಸಮಾಜದ ಅಭಿವೃದ್ಧಿಗಾಗಿ ದುಡಿಯಲು ತಾನು ಸದಾ ಸಿದ್ಧನೆಂದು ಅವರು ನುಡಿದರು. ಮಂಗಳೂರು ನಗರದ ಬಿ.ಜೆ.ಪಿ ಉತ್ತರ ಮಂಡಲದ ಉಪಾಧ್ಯಕ್ಷರು ಶ್ರೀ ಲಕ್ಷ್ಮಣ್ ಶೆಟ್ಟಿಗಾರ್, ಬಿ.ಜೆ.ಪಿ ಉತ್ತರ ಮಂಡಲದ ಪ್ರಧಾನ ಕಾರ್ಯದರ್ಶಿ ಶ್ರೀ ಸಂದೀಪ್ ಪಚ್ಚನಾಡಿ, ಬಿ.ಜೆ.ಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿರುವ ಶ್ರೀ ಸಚಿನ್ ಹೆಗ್ಡೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಶ್ರೀ ಮೇಲ್ವಿನ್ ಡಿಸೋಜಾ , ನೀರುಮಾರ್ಗ ಗ್ರಾಮ ಪಂಚಾಯತ್ ನ ನಿಕಟಪೂರ್ವ ಅಧ್ಯಕ್ಷರು ಶ್ರೀಮತಿ ಕಸ್ತೂರಿ ಆನಂದ್ ಸಾಲಿಯಾನ್, ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷರಾಗಿರುವ ಶ್ರೀ ಪ್ರವೀಣ್ ನೊರೊನ್ಹಾ ಉಪಸ್ಥಿತರಿದ್ದರು. ಆಟೋ ಪಾರ್ಕ್ 'ಗೆ ಮೇಲ್ಛಾವಣಿ ಹಾಕಿಸುವಲ್ಲಿ ವಿಶೇಷ ಮುತುವರ್ಜಿ ವಹಿಸಿದ ನಿಕಟ ಪೂರ್ವ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸಮಾಜಮುಖಿ ಕೆಲಸ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು