Recent Posts

Sunday, January 19, 2025
ಕ್ರೀಡೆ

ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಇದರ ವತಿಯಿಂದ ಯಶಸ್ಸಾದ “ಸ್ವಸ್ತಿಕ್ ಟ್ರೋಫಿ” ಪಂದ್ಯಾಟ-ಕಹಳೆ ನ್ಯೂಸ್

ವಿಟ್ಲ: ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಇದರ ವತಿಯಿಂದ “ಸ್ವಸ್ತಿಕ್ ಟ್ರೋಫಿ” ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟವು ನಿನ್ನೆ ವಿಠಲ ಪದವಿ ಪೂರ್ವ ಕಾಲೇಜು ವಿಟ್ಲ ಇಲ್ಲಿ ನಡೆಯಿತು.


ಈ ಪಂದ್ಯಾಟದಲ್ಲಿ ಒಟ್ಟು 18 ತಂಡಗಳು ಪೈಪೋಟಿ ನಡೆಸಿವೆ. ಇದರಲ್ಲಿ ಪ್ರಥಮ ಸ್ಥಾನವನ್ನು ಜಯಕರ್ನಾಟಕ ಜನಪರ ವೇದಿಕೆ ವಿಟ್ಲ, ದ್ವಿತೀಯ ಸ್ಥಾನವನ್ನು ವಿಜಿಎಫ್ ವಿಟ್ಲ, ತೃತೀಯ ಸ್ಥಾನವನ್ನು ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಮತ್ತು ಚತುರ್ಥ ಸ್ಥಾನವನ್ನು ಫ್ರೆಂಡ್ಸ್ ಪಂಜಳ ತಂಡ ಪಡೆದುಕೊಂಡಿದೆ.
ವಿಜೇತ ತಂಡಗಳಿಗೆ ನಗದು ಬಹುಮಾನ ಹಾಗೂ ಟ್ರೋಫಿಯನ್ನು ನೀಡಿ ಗೌರವಿಸಲಾಯಿತು. ಈ ಪಂದ್ಯದಲ್ಲಿ ತೀರ್ಪುಗಾರರಾಗಿ ಹರೀಶ್ ವಿಟ್ಲ ಮತ್ತು ಶ್ರೀನಿವಾಸ್ ರವರು ಕಾರ್ಯ ನಿರ್ವಹಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಸಭಾ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ, ಕೊರೋನ ಸಮಯದಲ್ಲಿ ಜನರಿಗಾಗಿ ಆರೋಗ್ಯ ಸೇವೆ ನೀಡಿದ ವಿಟ್ಲದ ಖ್ಯಾತ ವೈದ್ಯರಾದ ವಿ.ಕೆ.ಹೆಗ್ಡೆ ಯವರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜಗನ್ನಾಥ ಕಾಸರಗೋಡು, ವಿಟ್ಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ಎಂ ವಿಟ್ಲ, ಮುಸ್ತಫಾ ಕಲ್ಲಡ್ಕ, ಅಬಕಾರಿ ಇಲಾಖೆ ನವೀನ್, ಡಾ.ಎಚ್ ಸುಬ್ರಹ್ಮಣ್ಯ, ನಾಗೇಶ ಬಸವನಗುಡಿ, ಪ್ರಕಾಶ್ ಪಂಚಮಿ, ವಿಶ್ವನಾಥ್ ಅಳಿಕೆ, ಸುದರ್ಶನ್, ಜೀವನ್, ತಾರಾನಾಥ್ ಮತ್ತು ಸ್ವಸ್ತಿಕ್ ಫ್ರೆಂಡ್ಸ್‍ನ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು