Recent Posts

Monday, January 20, 2025
ಹೆಚ್ಚಿನ ಸುದ್ದಿ

ರಾಮಾಯಣ, ಮಹಾಭಾರತ ಕೇಳುತ್ತಾ ಬಾಲ್ಯ ಕಳೆದೆ- ಆತ್ಮಚರಿತ್ರೆಯಲ್ಲಿ ಅಮೆರಿಕಾದ ಮಾಜಿ ಅಧ್ಯಕ್ಷ ಒಬಾಮಾ! – ಕಹಳೆ ನ್ಯೂಸ್

ವಾಷಿಂಗ್ಟನ್: ಹಿಂದೂಗಳ ಪವಿತ್ರ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತವನ್ನು ಕೇಳುತ್ತಾ ಇಂಡೊನೇಷ್ಯಾದಲ್ಲಿ ತನ್ನ ಬಾಲ್ಯವನ್ನು ಕಳೆದರಿಂದ ಭಾರತಕ್ಕೆ ಯಾವಾಗಲೂ ವಿಶೇಷವಾದ ಸ್ಥಾನವಿರುವುದಾಗಿ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಶ್ವದ ಜನಸಂಖ್ಯೆಯ ಆರನೇ ಒಂದು ಭಾಗದಷ್ಟು ಗಾತ್ರವಿರುವ, ಅಂದಾಜು ಎರಡು ಸಾವಿರ ವಿಭಿನ್ನ ಜನಾಂಗೀಯ ಗುಂಪುಗಳು, ಏಳುನೂರಕ್ಕೂ ಹೆಚ್ಚು ಭಾಷೆಗಳನ್ನು ಮಾತನಾಡುವವರು ಭಾರತದಲ್ಲಿರುವುದಾಗಿ ‘ ಎ ಪ್ರಾಮಿಸ್ಡ್ ಲ್ಯಾಂಡ್ ‘ಆತ್ಮಚರಿತ್ರೆಯಲ್ಲಿ ಒಬಾಮಾ ಭಾರತದ ಬಗ್ಗೆಗಿನ ಮೋಹವನ್ನು ಬರೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

2010ರಲ್ಲಿ ತನ್ನ ಅಧ್ಯಕ್ಷೀಯ ಭೇಟಿಗೂ ಮುಂಚೆ ಭಾರತಕ್ಕೆ ಹೋಗಿರಲಿಲ್ಲ, ಆದರೆ, ಆದರೆ ದೇಶವು “ನನ್ನ ಕಲ್ಪನೆಯಲ್ಲಿ ಯಾವಾಗಲೂ ವಿಶೇಷ ಸ್ಥಾನವನ್ನು ಪಡೆದಿತ್ತು ಎಂದು ಒಬಾಮಾ ಹೇಳಿದ್ದಾರೆ. ಇಂಡೊನೇಷ್ಯಾದಲ್ಲಿ ರಾಮಾಯಣ, ಮಹಾಭಾರತ ಕೇಳುತ್ತಾ ಬಾಲ್ಯ ಕಳೆದಿದ್ದರಿಂದ ಅಥವಾ ಪೂರ್ವದ ಧರ್ಮದ ಬಗ್ಗೆ ತಮ್ಮಗಿದ್ದ ವಿಶೇಷ ಆಸಕ್ತಿ, ಪಾಕ್, ಭಾರತದ ಕಾಲೇಜ್ ಸ್ನೇಹಿತರು ಡಾಲ್ ಅಡುಗೆ, ಕೀಮಾ ತಯಾರಿಕೆ ಬಗ್ಗೆ ತರಬೇತಿ ಮತ್ತು ಬಾಲಿವುಡ್ ಸಿನಿಮಾಗಳ ಬಗ್ಗೆ ಮನಸನ್ನು ತಿರುಗಿಸಿದ್ದರಿಂದ ಭಾರತದ ಬಗ್ಗೆ ವಿಶೇಷವಾದ ಒಲವು ಇರುವುದಾಗಿ ಅವರು ನೂತನ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.

‘ಎ ಪ್ರಾಮಿಸ್ಡ್ ಲ್ಯಾಂಡ್’ ಪುಸ್ತಕದಲ್ಲಿ ಒಬಾಮಾ 2008 ರ ಚುನಾವಣಾ ಪ್ರಚಾರದಿಂದ ಪಾಕಿಸ್ತಾನದ ಅಬೋಟಾಬಾದ್ ನಲ್ಲಿ ದಾಳಿ ನಡೆಸಿ ಅಲ್-ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ನನ್ನು ಹತ್ಯೆ ಮಾಡಿದದ್ದು ಸೇರಿದಂತೆ ತನ್ನ ಮೊದಲ ಅವಧಿಯ ಅಂತ್ಯದವರೆಗಿನ ತನ್ನ ಪ್ರಯಾಣದ ವಿವರವನ್ನು ನೀಡಿದ್ದಾರೆ. “ಎ ಪ್ರಾಮಿಸ್ಡ್ ಲ್ಯಾಂಡ್” ಎರಡು ಯೋಜಿತ ಸಂಪುಟಗಳಲ್ಲಿ ಮೊದಲನೆಯದಾಗಿದ್ದು, ಮಂಗಳವಾರ ಜಾಗತಿಕ ಪುಸ್ತಕ ಮಳಿಗೆಗಳಿಗೆ ಲಗ್ಗೆ ಇಟ್ಟಿದೆ.