Saturday, November 23, 2024
ಹೆಚ್ಚಿನ ಸುದ್ದಿ

ವಾಹನ ಮಾಲೀಕರೇ ಗಮನಿಸಿ : ಜನವರಿಯಿಂದ `ಫಾಸ್ಟ್ಯಾಗ್’ ಕಡ್ಡಾಯ-ಕಹಳೆ ನ್ಯೂಸ್

ಈಗಾಗಲೇ ಬಹುತೇಕ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್ ಅವಳವಡಿಸಲಾಗಿದೆ. ಇದರ ಜೊತೆಗೆ ಒಂದು ಕಡೆ ಮಾತ್ರ ನಗದು ಪಾವತಿಗೆ ಅವಕಾಶ ನೀಡಲಾಗಿದೆ.

ಆದರೆ ಇನ್ಮುಂದೆ ಹಾಗಾಗಲ್ಲ. ದೇಶದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್ ಕಡ್ಡಾಯ ಮಾಡಲಾಗುತ್ತಿದೆ.
ಹೌದು, ಜನವರಿಯಿಂದ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್ ಕಡ್ಡಾಯ ಮಾಡಲಾಗುತ್ತಿದ್ದು, ಈ ಮೂಲಕ ಸಂಪೂರ್ಣವಾಗಿ ಟೋಲ್‌ಗಳಲ್ಲಿ ನಗದು ಬಳಕೆಯನ್ನು ನಿಲ್ಲಿಸೋದಿಕ್ಕೆ ಸರ್ಕಾರ ಮುಂದಾಗಿದೆ. ಇಲ್ಲಿಯವರೆಗೂ ಪ್ರತಿಶತ 80 ರಷ್ಟು ಫಾಸ್ಟ್‌ಟ್ಯಾಗ್ ಮೂಲಕ ಹಣ ಸಂಗ್ರಹವಾಗುತ್ತಿತ್ತು. ನೀವೇನಾದರೂ ಇನ್ನೂ ಫಾಸ್ಟ್‌ಟ್ಯಾಗ್ ಮಾಡಿಸಿಲ್ಲ ಎಂದಾದರೆ ಕೂಡಲೇ ನಿಮ್ಮ ನಾಲ್ಕು ಚಕ್ರದ ವಾಹನಗಳಿಗೆ ಅಳವಡಿಸಿಕೊಳ್ಳಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಫಾಸ್ಟ್‌ಟ್ಯಾಗ್ ಅಳವಡಿಕೆ ಕಷ್ಟದ ಕೆಲಸವೇನಲ್ಲ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಲೆದಾಡಬೇಕಿಲ್ಲ. ನೀವು ಆನ್‌ಲೈನ್ ಮೂಲಕವೂ ಇದನ್ನು ಮಾಡಬಹುದು. ಅಥವಾ ಅಮೆಜಾನ್, ಪೇಟಿಎಂ, ಸ್ನ್ಯಾಪ್‌ಡೀಲ್‌ನಂತಹ ಆನ್‌ಲೈನ್ ಮಾರುಕಟ್ಟೆಯಲ್ಲಿಯೂ ಖರೀದಿಸಬಹುದು. ಇಷ್ಟೆ ಅಲ್ಲ ರಸ್ತೆ ಸಾರಿಗೆ ಪ್ರಾಧಿಕಾರದ ಕಚೇರಿಗಳಲ್ಲೂ ಇದನ್ನು ಖರೀದಿ ಮಾಡಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು