Tuesday, January 21, 2025
ಜಿಲ್ಲೆ

ಹಾಸನಾಂಬೆ ದರ್ಶನೋತ್ಸವ : ಈ ಬಾರಿ ಹುಂಡಿಯಲ್ಲಿ ಸಂಗ್ರಹವಾದ ಹಣವೆಷ್ಟು ಗೊತ್ತಾ..?-ಕಹಳೆ ನ್ಯೂಸ್

ಹಾಸನ : ಹಾಸನಾಂಬೆ ದರ್ಶನೋತ್ಸವದಲ್ಲಿ ಈ ಬಾರಿ ದೇವಾಲಯಗಳ ಹುಂಡಿಯಲ್ಲಿ ಒಟ್ಟು 22,79,772 ರೂ ಹಣ ಸಂಗ್ರಹವಾಗಿದೆ.

ಕೊರೋನ ಸೋಂಕಿನ ಆತಂಕ ನಡುವೆ ನಡೆದ ಜಾತ್ರಾ ಮಹೋತ್ಸದಲ್ಲಿ ಹಾಸನಾಂಬ ದೇವಾಲಯದ ಹುಂಡಿಯಲ್ಲಿ 21,34,052 ಹಾಗೂ ಸಿದ್ದೇಶ್ವರಸ್ವಾಮಿ ದೇವಾಲಯದ ಹುಂಡಿಯಲ್ಲಿ 1,45,720 ರೂ ಸಂಗ್ರಹವಾಗಿದೆ ಎಂದು ದೇವಾಲಯದ ಆಡಳಿತಾಧಿಕಾರಿಯೂ ಆಗಿರುವ ಉಪ ವಿಭಾಗಾಧಿಕಾರಿ ಬಿ.ಎ. ಜಗದೀಶ್ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ವರ್ಷ ಹಾಸನಾಂಬೆ ಮತ್ತು ಸಿದ್ದೇಶ್ವರ ಸ್ವಾಮಿ ದೇವಾಲಯದ ಹುಂಡಿಗಳಲ್ಲಿ ಒಟ್ಟಾರೆ 1,43,42,753 ರೂ ಸಂಗ್ರಹವಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೋವಿದ್ 19 ಸೋಂಕು ಹರಡುವ ಸಾಧ್ಯತೆಗಳಿದ್ದ ಕಾರಣ ಈ ಬಾರಿ ಸಾರ್ವಜನಿಕರಿಗೆ ದೇವರ ದರ್ಶನದ ಅವಕಾಶ ಇರಲಿಲ್ಲ. ಕಡೆಯ ದಿನ ಮಾತ್ರ ಅರ್ಧಗಂಟೆ ದೇವರ ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶ ನೀಡಲಾಗಿತ್ತು .
ನಗರದ ವಿವಿದೆಡೆ ಬೃಹತ್ ಎಲ್.ಇ.ಡಿ ಪರದೆಗಳನ್ನು ಅಳವಡಿಸುವ ಮೂಲಕ ಹಾಗೂ ಯೂಟ್ಯೂಬ್, ಫೇಸ್ ಬುಕ್ ಮೂಲಕ ನೇರ ದೃಶ್ಯ ಪ್ರಸಾರ ಮಾಡಿ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.