Tuesday, January 21, 2025
ಸುದ್ದಿ

ಮಂಡ್ಯ ಮೂಲದ ವಿವೇಕ್ ಮೂರ್ತಿಗೆ ಕಮಲಾ ಹ್ಯಾರಿಸ್ ಅವರ ಹೊಸ ಸರ್ಕಾರದ ಸಂಪುಟದಲ್ಲಿ ಸ್ಥಾನ ದೊರೆಯುವ ಸಾಧ್ಯತೆ – ಕಹಳೆ ನ್ಯೂಸ್

ಅಮೆರಿಕ: ಭಾರತ ಮೂಲದ ಅಮೆರಿಕನ್ ಮಾಜಿ ಸರ್ಜನ್ ಜನರಲ್ ವಿವೇಕ್ ಮೂರ್ತಿ ಮತ್ತು ಪ್ರೊಫೆಸರ್ ಅರುಣ್ ಮಜುಂದಾರ್ ಅವರು ಜೋ ಬೈಡನ್- ಕಮಲಾ ಹ್ಯಾರಿಸ್ ಅವರ ಹೊಸ ಸರ್ಕಾರದ ಸಂಪುಟದಲ್ಲಿ ಸ್ಥಾನ ದೊರೆಯುವ ಸಾಧ್ಯತೆ ಇದೆ.

ಪ್ರಸ್ತುತ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರ ಕೋವಿಡ್ 19 ಕಾರ್ಯಾಪಡೆಗೆ ಪ್ರಮುಖ ಸಲಹೆಗಾರರಾಗಿ ಡಾ. ವಿವೇಕ್ ಮೂರ್ತಿ ಮಂಡ್ಯ ಜಿಲ್ಲೆಯ ಹಲ್ಲಗೆರೆ ಮೂಲದವರಾಗಿದ್ದಾರೆ. ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅವರು ಬೈಡನ್ ಅವರ ಆಪ್ತ ಸಲಹೆಗಾರರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ರೀತಿ ಅರುಣ್ ಮಜುಂದಾರ್ ಅವರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪ್ರೊಫೆಸರ್ ಆಗಿದ್ದು, 2009ರಲ್ಲಿ ಬರಾಕ್ ಒಬಾಮ ಅಧ್ಯಕ್ಷರಾಗಿದ್ದಾಗ ಆಧುನಿಕ ಸಂಶೋಧನಾ ಯೋಜನೆಗಳ ಸಂಸ್ಥೆ- ಎನರ್ಜಿಯ ಮೊದಲ ನಿರ್ದೇಶಕರಾಗಿ ಮೂರು ವರ್ಷ ಸೇವೆ ಸಲ್ಲಿಸಿದ್ದರು. ಈಗ ಅವರು ಇಂಧನ ಸಂಬಂಧಿ ವಿಚಾರಗಳಿಗೆ ಬೈಡನ್ ಅವರ ಪ್ರಮುಖ ಸಲಹೆಗಾರರಾಗಿದ್ದಾರೆ.