Saturday, September 21, 2024
ಸುದ್ದಿ

ಮಂಗಳೂರು : ಪ್ಲಾಸ್ಟಿಕ್​ ತ್ಯಾಜ್ಯದಿಂದಲೇ ನಿರ್ಮಾಣ ಆಯ್ತು ಪ್ಲಾಸ್ಟಿಕ್ ಮನೆ – ಕಹಳೆ ನ್ಯೂಸ್

ಈ ಕಾಲದಲ್ಲಿ ಒಂದು ಸ್ವಂತ ಮನೆ ಮಾಡ್ಬೇಕು ಅನ್ನೋದು ಎಲ್ಲರ ಕನಸು.ಆದ್ರೆ ಆರ್ಥಿಕ ಸಂಕಷ್ಟದಿಂದ ಆ ಕನಸು ಕನಸಾಗಿಯೇ ಉಳಿದಿರುತ್ತೆ. ಕಲ್ಲು, ಸಿಮೆಂಟ್, ಕಬ್ಬಿಣ, ಮರಳು ಅಂತಾ ಲಕ್ಷಗಟ್ಟಲೆ ಹಣ ಹೊಂದಿಸುವುದೇ ದೊಡ್ಡ ಸಾಹಸ ಆಗಿಬಿಡುತ್ತೆ. ಆದರೆ ಇದ್ರಯಾವುದರ ಅಗತ್ಯ ಇಲ್ಲದೆ ಪ್ಲಾಸ್ಟಿಕ್ ನಲ್ಲೇ ಗಟ್ಟಿ ಮುಟ್ಟಾದ ಮನೆ ನಿರ್ಮಿಸಬಹುದು ಅಂದ್ರೆ ನೀವು ನಂಬ್ತೀರಾ..ನಂಬಲೇ ಬೇಕು..ಮಂಗಳೂರಿನಲ್ಲಿ ರಾಜ್ಯದಲ್ಲಿ ಮೊದಲ ಪ್ರಯೋಗದ ಪ್ಲಾಸ್ಟಿಕ್ ಮನೆ ನಿರ್ಮಾಣವಾಗಿದೆ. ವಿಶಾಲವಾದ ಕೋಣೆಗಳು, ಅತ್ಯಾಕರ್ಷಕ ಫಿನಿಶಿಂಗ್..ಕಂಪ್ಲೀಟ್ ಸೆಟ್ ಆಗಿ ನೊಡೋಕೆ ಸಖತ್ ಆಗಿ ಕಾಣ್ತೀರುವ ಈ ಮನೆ ಪಕ್ಕಾ ಪ್ಲಾಸ್ಟಿಕ್ ಮನೆ..ಮಂಗಳೂರಿನ ಪಚ್ಚನಾಡಿಯಲ್ಲಿ ನಿರ್ಮಾಣ ಆಗಿರುವ ಈ ಮನೆ ಈಗ ಹೊಸ ಯೋಚನೆಗೆ ಅಡಿಪಾಯ ಹಾಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರಿನ ಪ್ಲಾಸ್ಟಿಕ್ ಫಾರ್ ಚೇಂಜ್ ಇಂಡಿಯಾ ಫೌಂಡೇಶನ್ ಎಂಬ ಸಂಸ್ಥೆ ಈ ಪ್ಲಾಸ್ಟಿಕ್ ಮನೆಯನ್ನು ನಿರ್ಮಿಸಿದೆ. ನಾವು ಬಳಸಿ ಎಸೆಯುವ ಚಿಪ್ಸ್ ಪ್ಯಾಕೆಟ್, ಪಾನ್ ಪರಾಗ್ ಪ್ಯಾಕೆಟ್, ಚಾಕಲೇಟ್ ರ್ಯಾಪರ್ಸ್ ಸೇರಿದಂತೆ ಎಲ್ಲಾ ಪ್ಲಾಸ್ಟಿಕ್ ಗಳನ್ನು ಬಳಸಿ ಈ ಮನೆ ನಿರ್ಮಿಸಲಾಗಿದೆ. ಈ ಮನೆ ಕಟ್ಟೋಕೆ ಕಲ್ಲು, ಮರಳು,ಸಿಮೆಂಟ್, ಪೈಂಟ್ ಯಾವುದೂ ಆಗತ್ಯ ಇಲ್ಲ..ಚಿಂದಿ ಆಯುವವರೂ ಹೆಕ್ಕದ ಪ್ಲಾಸ್ಟಿಕ್ ಗಳೇ ಸಾಕು…ಎಲ್ಲಾ ಪ್ಲಾಸ್ಟಿಕ್ ವಸ್ತುಗಳನ್ನು ರಿಸೈಕಲ್ ಮಾಡಿ ಮನೆ ನಿರ್ಮಿಸಲಾಗಿದೆ. ನನಗೆ ವಾರ್ನ್ ಮಾಡೋಕೆ ಮಾಲೀಕಯ್ಯ ಯಾರು?; ತಾಕತ್ತಿದ್ದರೆ ಬಿಜೆಪಿಗೆ ವಾರ್ನ್ ಮಾಡಲಿ; ಪ್ರಿಯಾಂಕ್ ಖರ್ಗೆ ಕಿಡಿ

ಜಾಹೀರಾತು

ಹೈದರಾಬಾದ್ ನ ಸಂಸ್ಥೆಯ ಸಹಯೋಗದೊಂದಿಗೆ ಮಂಗಳೂರಿನಲ್ಲಿ ಪ್ಲಾಸ್ಟಿಕ್ ಮನೆ ನಿರ್ಮಿಸಲಾಗಿದೆ.. ಗುಜರಾತ್ ನಲ್ಲಿ ಈ ಪ್ಲಾಸ್ಟಿಕ್ ಗಳ ರಿಸೈಕಲ್ ಮಾಡಿ ಕರಗಿಸಿ ಪ್ಲಾಸ್ಟಿಕ್ ಪ್ಯಾನೆಲ್ ನಿರ್ಮಿಸಲಾಗಿದೆ .ವಾಸನೆ ಇಲ್ಲದಂತೆ ಮಾಡಲು ಕೆಮಿಕಲ್ ಕೂಡಾ ಬಳಸಲಾಗಿದೆ. ಪ್ಲಾಸ್ಟಿಕ್ ಪ್ಯಾನೆಲ್ ಗೆ ಎಲ್ಲಾ ರೀತಿಯ ವಾತವರಣ ಹೊಂದಿಕೊಳ್ಳುವಂತೆ, ಬೆಂಕಿಯಿಂದ ರಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಮಂಗಳೂರಿನ ಮನೆ ಸುಮಾರು 4.5 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಇಂತಹ ಮನೆ ನಿರ್ಮಾಣಕ್ಕೆ ಕೇವಲ 15 ದಿನ ಸಾಕಾಗುತ್ತದೆ.

ಪಚ್ಚನಾಡಿಯಲ್ಲಿ ಜೋಪಡಿಯಲ್ಲಿ ಒಂಟಿ ಮಹಿಳೆಗೆ ಮಂಗಳೂರಿನ ಪ್ಲಾಸ್ಟಿಕ್ ಫಾರ್ ಚೇಂಜ್ ಇಂಡಿಯಾ ಫೌಂಡೇಶನ್ ಪ್ಲಾಸ್ಟಿಕ್ ಮನೆ ನಿರ್ಮಿಸಿ ಕೊಟ್ಟಿದೆ. ಮನೆ ಇಲ್ಲದವರು, ಜೋಪಡಿಯಲ್ಲಿ ವಾಸಿಸುವವರಿಗೆ ಕಡಿಮೆ ವೆಚ್ಚದಲ್ಲಿ ಪ್ಲಾಸ್ಟಿಕ್ ಮನೆ ನಿರ್ಮಿಸಿ ಕೊಡುವ ಯೋಚನೆಯಲ್ಲಿ ಸಂಸ್ಥೆ ಇದೆ.

ಮಂಗಳೂರಿನ ಪ್ಲಾಸ್ಟಿಕ್ ಮನೆ ನಿರ್ಮಾಣ ಆದ ಬಳಿಕ ಸಂಸ್ಥೆಗೆ ಬೇಡಿಕೆ ಕೂಡಾ ಹೆಚ್ಚಾಗಿದೆ. ವಿವಿಧ ಸಂಘ ಸಂಸ್ಥೆಗಳು, ಬಸ್ ಸ್ಟ್ಯಾಂಡ್, ಶೌಚಾಲಯ,ಸಣ್ಣ ಕಾಟೇಜ್ ಗಳನ್ನು ಪ್ಲಾಸ್ಟಿಕ್ ನಿಂದ ನಿರ್ಮಿಸಿ ಕೊಡಿ ಅಂತಾ ಬೇಡಿಕೆ ಇಟ್ಟಿದೆ. ಟ್ರಾಫಿಕ್ ಪೊಲೀಸರಿಗೆ ನಿಲ್ಲುವ ಸ್ಟ್ಯಾಂಡ್ ನ್ನೂ ನಿರ್ಮಿಸಿ ಕೊಡುವಂತೆ ಸಂಸ್ಥೆಗೆ ಮನವಿ ಬಂದಿದೆ.
ಪ್ಲಾಸ್ಟಿಕ್ ನಿರ್ವಹಣೆಗೆ ಹೊಸ ಹೊಸ ಅವಿಷ್ಕಾರಗಳು ಬಂದ್ರೂ ಉಪಯೋಗ ಆಗದೇ ಇದ್ದಾಗ, ಕಸದಿಂದ ರಸ ತೆಗೆಯುವ ಯೋಜನೆಗೆ ಸಂಸ್ಥೆ ಇಳಿದಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸ್ವಂತ ಮನೆ ನಿರ್ಮಿಸಲು ಶಕ್ತರಲ್ಲದವರಿಗೆ ಅಚ್ಚುಕಟ್ಟಾಗಿ ನಿರ್ಮಾಣವಾಗುವ ಪ್ಲಾಸ್ಟಿಕ್ ಮನೆ ,ಹೊಸ ಮನೆಯ ಆಸೆಯನ್ನು ಜೀವಂತವಾಗಿರಿಸಿದೆ.