Tuesday, January 21, 2025
ಹೆಚ್ಚಿನ ಸುದ್ದಿ

ಕ್ರಿಸ್‌ಮಸ್‌ಗೂ ಮುನ್ನ ಬರಲಿದೆ ಫೈಜರ್ ಕೊರೊನಾ ವೈರಸ್ ಲಸಿಕೆ – ಕಹಳೆ ನ್ಯೂಸ್

ನ್ಯೂಯಾರ್ಕ್: ಅಮೆರಿಕದಲ್ಲಿ ಸಂಚಲನ ಮೂಡಿಸಿರುವ ಫೈಜರ್ ಲಸಿಕೆಯು ಶೇ 95ರಷ್ಟು ಪರಿಣಾಮಕಾರಿ ಎಂದು ಹೇಳಿಕೊಂಡಿದ್ದು, ಮುಂದಿನ ತಿಂಗಳು ಲಭ್ಯವಾಗುವ ಸಾಧ್ಯತೆ ಇದೆ. ಫೈಜರ್ ಇಂಕ್ ಪಿಎಫ್‌ಇ.ಎನ್ ಮತ್ತು ಬಯೋಎನ್‌ಟೆಕ್ 22 ಯುಎವೈ.ಡಿಇ ಜತೆಗೂಡಿ ಅಭಿವೃದ್ಧಿಪಡಿಸಿರುವ ಫೈಜರ್ ಕೊರೊನಾ ವೈರಸ್ ಲಸಿಕೆಯು ಅಮೆರಿಕ ಮತ್ತು ಯುರೋಪಿಯನ್ ದೇಶಗಳಿಂದ ತುರ್ತು ಅನುಮೋದನೆ ಪಡೆಯುವ ನಿರೀಕ್ಷೆಯಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಲಸಿಕೆಯ ಅಂತಿಮ ಹಂತದ ಪ್ರಯೋಗದಲ್ಲಿ ಶೇ 95ರಷ್ಟು ಫಲಿತಾಂಶ ದೊರಕಿದೆ ಎಂದು ಹೇಳಲಾಗಿದೆ. ಈ ಪ್ರಯೋಗಕ್ಕೆ ಒಳಪಟ್ಟ ಎಲ್ಲ ವಿಭಿನ್ನ ವಯಸ್ಸಿನ ಮತ್ತು ಸಮುದಾಯಗಳಲ್ಲಿಯೂ ಅದರ ಪರಿಣಾಮ ಸ್ಥಿರವಾಗಿರುವುದು ಕಂಡುಬಂದಿರುವುದು ಸಕಾರಾತ್ಮಕ ಸೂಚನೆಯಾಗಿದೆ. ಕೆಲವು ವಾರಗಳ ಹಿಂದೆ ಫೈಜರ್ ತನ್ನ ಲಸಿಕೆಯು ಶೇ 90ರಷ್ಟು ಪರಿಣಾಮಕಾರಿ ಎಂದು ತಿಳಿಸಿತ್ತು. ಹೀಗಾಗಿ ಕ್ರಿಸ್ ಮಸ್ ಹಬ್ಬಕ್ಕೂ ಮುನ್ನ ಡಿಸೆಂಬರ್ ಮಧ್ಯಭಾಗದಲ್ಲಿ, ಫೈಜರ್ ಲಸಿಕೆಯ ತುರ್ತು ಬಳಕೆಗೆ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಅನುಮತಿ ನೀಡುವ ಸಾಧ್ಯತೆ ಇದೆ ಎಂದು ಬಯೋಎನ್‌ಟೆಕ್ ಮುಖ್ಯ ಕಾರ್ಯನಿರ್ವಾಹಕ ಯುಗುರ್ ಸಾಹಿನ್ ತಿಳಿಸಿದ್ದಾರೆ. ಐರೋಪ್ಯ ಒಕ್ಕೂಟದಲ್ಲಿ ಡಿಸೆಂಬರ್ ದ್ವಿತೀಯಾರ್ಧದಲ್ಲಿ ಷರತ್ತುಬದ್ಧ ಅನುಮತಿ ನೀಡುವ ಸಾಧ್ಯತೆ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

‘ಎಲ್ಲವೂ ಚೆನ್ನಾಗಿ ನಡೆದರೆ ನಮಗೆ ಡಿಸೆಂಬರ್ ದ್ವಿತೀಯಾರ್ಧದಲ್ಲಿ ಅನುಮತಿ ಪಡೆಯಬಹುದು ಮತ್ತು ಕ್ರಿಸ್‌ಮಸ್‌ಗೂ ಮುನ್ನ ಪೂರೈಕೆಗಳನ್ನು ಆರಂಭಿಸಬಹುದು ಎಂದು ಕಲ್ಪಿಸಿಕೊಳ್ಳುತ್ತೇನೆ. ಆದರೆ ಎಲ್ಲವೂ ಸಕಾರಾತ್ಮಕವಾಗಿ ನಡೆದರೆ ಮಾತ್ರ ಇದು ಸಾಧ್ಯ’ ಎಂದು ಅವರು ಹೇಳಿದ್ದಾರೆ.
ಫೈಜರ್ ಇರುವರೆಗೂ 43,000ಕ್ಕೂ ಹೆಚ್ಚು ಮಂದಿ ಮೇಲೆ ಪ್ರಯೋಗ ನಡೆಸಿದ್ದು, ಅದರಲ್ಲಿ 170ಕ್ಕೂ ಹೆಚ್ಚು ಮಂದಿ ಕೋವಿಡ್ ಸೋಂಕಿತರು ಇದ್ದಾರೆ. 162 ಮಂದಿಗೆ ಲಸಿಕೆಯ ಬದಲು ಫೈಜರ್ ಗುಳಿಗೆಯನ್ನು ನೀಡಲಾಗಿದೆ. ಕೋವಿಡ್ 19 ತೀವ್ರವಾಗಿದ್ದ 10ರಲ್ಲಿ ಒಬ್ಬರಿಗೆ ಲಸಿಕೆ ನೀಡಲಾಗಿದೆ.