ಬೆಂಗಳೂರು: ದೇಶ-ವಿದೇಶಗಳ ವೆಬ್‌ಸೈಟ್ ಗಳನ್ನು ಹ್ಯಾಕ್ ಮಾಡುತ್ತಿದ್ದ ಅಂತಾರಾಷ್ಟ್ರೀಯ ಹ್ಯಾಕರ್ ಬಂಧನ – ಕಹಳೆ ನ್ಯೂಸ್
ರಾಜ್ಯ ಸರ್ಕಾರದ ಇ-ಪ್ರೊಕ್ಯುರ್‌ವೆುಂಟ್ ವೆಬ್ ಸೈಟ್ ಸೇರಿ ದೇಶ-ವಿದೇಶಗಳ ವೆಬ್‌ಸೈಟ್ ಹಾಗೂ ಪೋಕರ್ ಆಯಪ್, ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ ಅಕ್ರಮವಾಗಿ ಹಣ ಗಳಿಸುತ್ತಿದ್ದ ಬೆಂಗಳೂರು ಮೂಲದ ಅಂತಾ ರಾಷ್ಟ್ರೀಯ ಹ್ಯಾಕರ್‌ವೊಬ್ಬ ಬೆಂಗಳೂರು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ 14 ದಿನಗಳ ಕಾಲವಶಕ್ಕೆ ಪಡೆಯಲಾಗಿದೆ. ಜಯನಗರ ನಿವಾಸಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (26) ಬಂಧಿತ. ಬಹಳ ವರ್ಷಗಳಿಂದ ಹ್ಯಾಕಿಂಗ್ ಮಾಡು ವುದನ್ನೇ ವೃತ್ತಿಯನ್ನಾಗಿಸಿ ಕೊಂಡು ದಂಧೆ ನಡೆಸುತ್ತಿದ್ದಾನೆ.
ಅಂತಾರಾಷ್ಟ್ರೀಯ ಡ್ರಗ್ಸ್ ದಂಧೆಯಲ್ಲೂಆರೋಪಿ ತೊಡಗಿದ್ದಾನೆ . ಅಲ್ಲದೆ, ಕೆಲ ದಿನಗಳ ಹಿಂದೆ ದಕ್ಷಿಣ ವಿಭಾಗ ಮತ್ತು ಸಿಸಿಬಿ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಬಂಧನಕ್ಕೊಳಗಾದ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಲಮಾಣಿ ಮತ್ತು ಇತರೆ ಎಂಟು ಮಂದಿಯ ಆರೋಪಿಗಳ ಜತೆ ಶ್ರೀಕಿ ನಿಕಟ ಸಂಪರ್ಕ ಹೊಂದಿದ್ದಾನೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಡ್ರಗ್ಸ್ ವ್ಯಸನಿ ಕೂಡ: ಲ್ಯಾಪ್‌ಟಾಪ್ ಹಾಗೂ ಇಂಟರ್‌ನೆಟ್ ಬಳಸಿ, ಭಾರತಸೇರಿ ಅಂತಾರಾಷ್ಟ್ರೀಯ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ, ಅಕ್ರಮ ಮಾರ್ಗದಲ್ಲಿ ಹಣವನ್ನು ಸಂಪಾದನೆ ಮಾಡಿಕೊಳ್ಳುತ್ತಿದ್ದ. ಜತೆಗೆ ಡ್ರಗ್ಸ್ ವ್ಯಸನಿ ಕೂಡ ಆಗಿದ್ದಾನೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಜಯನಗರ ನಿವಾಸಿಯಾಗಿರುವ ಆರೋಪಿ, 2014- 2017ರವರೆಗೆ ನೆದರ್‌ಲ್ಯಾಂಡ್‌ನಲ್ಲಿ ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದು ಬೆಂಗಳೂರಿಗೆಬಂದಿದ್ದು,ಕಂಪ್ಯೂಟರ್,
ಇಂಟರ್‌ನೆಟ್ ಬಳಕೆ ಹಾಗೂ ಪ್ರೋಗ್ರಾಮಿಂಗ್‌ನಲ್ಲಿ ಅತ್ಯಂತ ನಿಪುಣನಾಗಿದ್ದಾನೆ. ಬೆಂಗಳೂರಿಗೆ ಬಂದ ಬಳಿಕ ಸಣ್ಣ ಪ್ರಮಾಣದ ಗೇಮ್ ಆಯಪ್‌ಗ್ಳನ್ನು ಹ್ಯಾಕ್ ಮಾಡುತ್ತಿದ್ದ. ಈ ಮಧ್ಯೆ “ರನ್‌ಸ್ಪೇಸ್’ ಎಂಬ ಆನ್‌ಲೈನ್ ಗೇಮ್ ಅನ್ನು ಹ್ಯಾಕ್ ಮಾಡಿದ್ದ. ನಂತರ “ಇಂಡಿಯನ್ ಪೋಕರ್ ವೆಬ್‌ಸೈಟ್, ಆನ್‌ಲೈನ್ ಬಿಟ್‌ಕಾಯಿನ್’ ಹಾಗೂ ಇತರೆ ವೆಬ್‌ಸೈಟ್‌ಗಳ ಹ್ಯಾಕ್ ಮಾಡುವುದನ್ನುಕರಗತ ಮಾಡಿಕೊಂಡಿದ್ದಾನೆ.
ಆನ್‌ಲೈನ್ ಪೋಕರ್ ಆಯಪ್, ವೆಬ್‌ಸೈಟ್ ಹ್ಯಾಕ್:
2019ರಲ್ಲಿ ಆನ್‌ಲೈನ್ ಪೋಕರ್ ಆಯಪ್ ಮತ್ತು ವೆಬ್‌ಸೈಟ್ ಗಳನ್ನು ಹ್ಯಾಕ್ ಮಾಡುತ್ತಿದ್ದ ಆರೋಪಿ, ಪೋಕರ್ ಆಯಪ್ ಮೂಲಕ ಆಡುತ್ತಿದ್ದ ಎದುರಾಳಿಯ ಕಾರ್ಡ್ ಯಾವುದು ಎಂಬುದನ್ನು ತಿಳಿದುಕೊಂಡು ಗೇಮ್ ಆಡಿ ಹಣ ಸಂಪಾದಿಸುತ್ತಿದ್ದ. ಆ ವೆಬ್‌ಸೈಟ್‌ಗಳ ಡೇಟಾಗಳನ್ನು ಹ್ಯಾಕ್ ಮೂಲಕ ಕದಿಯುವುದು, ಕೆಲವು ವೆಬ್‌ಸೈಟ್‌ಗಳ ಡೇಟಾ ವನ್ನು ಸ್ಥಗಿತಗೊಳಿಸಿ, ಬಳಿಕ ಅದರ ಮಾಲೀಕರನ್ನು ಸಂಪರ್ಕಿಸಿ ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ. ಅಲ್ಲದೆ, ಆನ್‌ಲೈನ್ ಮೂಲಕ ನಡೆಯುವ ಬಿಟ್‌ಕಾಯಿನ್‌ಗಳ ವರ್ಗಾವಣೆಯನ್ನು ಹ್ಯಾಕ್ ಮಾಡಿ ಬಿಟ್‌ಕಾಯಿನ್‌ಗಳನ್ನು ಸಂಪಾದಿಸುತ್ತಿದ್ದ. ಈ ಸಂಬಂಧ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣದಾಖಲಾಗಿದ್ದು, ಆರೋಪಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದ ಎಂದು ಹೇಳಿದರು.
ಪ್ರಕರಣದ ಹಿನ್ನೆಲೆ: ಚಾಮರಾಜಪೇಟೆಯ ವಿದೇಶಿ ಪೋಸ್ಟ್ ಆಫೀಸ್‌ಗೆ ಬಂದಿದ್ದ ಹೈಡ್ರೋ ಗಾಂಜಾ ಪಾರ್ಸೆಲ್
ಪಡೆದುಕೊಂಡಿದ್ದ ಸುಜಯ್ ಎಂಬಾತನ ಬಂಧನ ಬಳಿಕ ಕೆಲವೊಂದು ಸ್ಫೋಟಕ ಮಾಹಿತಿ ಸಿಕ್ಕಿತ್ತು. ಬಳಿಕಕೆಂಪೇಗೌಡ ನಗರ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಡ್ರಗ್ಸ್ ಪ್ರಕರಣ ಸಂಬಂಧ ಇತ್ತೀಚೆಗೆ ದಕ್ಷಿಣ ವಿಭಾಗ ಮತ್ತು ಸಿಸಿಬಿ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಗೋವಾದಲ್ಲಿ ಮಾಜಿ ಸಜಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಲಮಾಣಿ ಸೇರಿ ಎಂಟು ಮಂದಿಯನ್ನು ಬಂಧಿಸಲಾಗಿತ್ತು.
ಆರೋಪಿಗಳ ಪೈಕಿ ಸುನೀಷ್ ಹೆಗ್ಡೆ ಹಾಗೂ ಪ್ರಸಿದ್ ಶೆಟ್ಟಿಯ ಸೋದರ ಸಂಬಂಧಿಗಳಾಗಿದ್ದು, ಸುಜಯ್, ಹೇಮಂತ್ ಮುದ್ದಪ್ಪ ಡಾರ್ಕ್‌ವೆಬ್ ಮೂಲಕ ಹೈಡ್ರೋ ಗಾಂಜಾವನ್ನು ಬುಕ್ ಮಾಡಿ ಶ್ರೀಕೃಷ್ಣ ಮೂಲಕ ಬಿಟ್ ಕಾಯಿನ್ ಮೂಲಕ ಖರೀದಿಸುತ್ತಿರು.
ಸಂಜಯನಗರದ ಸುನೀಷ್ ಹೆಗ್ಡೆಗೆ ಸೇರಿದ ಫ್ಲ್ಯಾಟ್ ಹಾಗೂ ಇತರೆ ಕಡೆಗಳಲ್ಲಿ ಪಾರ್ಟಿ ಆಯೋಜಿಸಿ ತಾವು ಸೇವಿಸಿ ಬೇರೆಯವರಿಗೂ ಮಾರಾಟ ಮಾಡುತ್ತಿದ್ದರು. ಈ ವೇಳೆಯೇ ಶ್ರೀಕಿ ಮೂಲಕ ಇತರೆ ಆರೋಪಿಗಳು ದೇಶ-ವಿದೇಶದ ವಿವಿಧ ಆಯಪ್‌ಗ್ಳನ್ನು ಹ್ಯಾಕ್ ಮಾಡಿಸಿ, ಆರ್ಥಿಕ ಲಾಭ ಪಡೆದುಕೊಳ್ಳುತ್ತಿದ್ದರು.