Tuesday, January 21, 2025
ಸುದ್ದಿ

ಮಂಗಳೂರು: ತಿಂಗಳಿಗೆ 800 ಹೆರಿಗೆಯ ದಾಖಲೆ ಸೃಷ್ಟಿಸಿದ ಲೇಡಿಗೋಷನ್ ಆಸ್ಪತ್ರೆ – ಕಹಳೆ ನ್ಯೂಸ್

 ಸರ್ಕಾರಿ ಆಸ್ಪತ್ರೆಗಳ ವ್ಯವಸ್ಥೆ ಕುರಿತು ಅನುಮಾನಿಸುವವರೇ ಬಹುಪಾಲು ಮಂದಿ. ಅದರಲ್ಲೂ ಹೆರಿಗೆಗೆಂದರೆ ಸರ್ಕಾರಿ ಆಸ್ಪತ್ರೆಗಳಿಗೆ ಹೋಗಲು ಹಿಂದೇಟು ಹಾಕುತ್ತಾರೆ. ಆದರೆ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆ ಮಾತ್ರ ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲ ಎಂಬಂತೆ ಕಾರ್ಯ ನಿರ್ವಹಿಸುತ್ತಿದೆ. ಇದಕ್ಕೆ ಉದಾಹರಣೆಯೆಂದರೆ, ಆಸ್ಪತ್ರೆಯಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ, ತಿಂಗಳಿಗೆ 800 ಶಿಶುಗಳು ಜನಿಸಿರುವುದು.

ಜಾಹೀರಾತು
ಜಾಹೀರಾತು
ಜಾಹೀರಾತು

167 ವರ್ಷ ಇತಿಹಾಸವಿರುವ ಈ ಸರ್ಕಾರಿ ಆಸ್ಪತ್ರೆಯಲ್ಲಿ ಅಕ್ಟೋಬರ್ ತಿಂಗಳಿನಲ್ಲಿ 800 ಶಿಶುಗಳು ಜನಿಸಿ ದಾಖಲೆ ಸೃಷ್ಟಿಯಾಗಿದೆ. 272 ಹಾಸಿಗೆ ಸಾಮರ್ಥ್ಯದ ಈ ಆಸ್ಪತ್ರೆಯಲ್ಲಿ ಸಾಮಾನ್ಯವಾಗಿ ತಿಂಗಳಿಗೆ 400ರಿಂದ 450 ಮಕ್ಕಳು ಜನಿಸುತ್ತಿದ್ದವು. ಸೆಪ್ಟೆಂಬರ್ ನಲ್ಲಿ 600 ಮಕ್ಕಳು ಜನಿಸಿದ್ದವು.
ಆದರೆ ಅಕ್ಟೋಬರ್ ತಿಂಗಳಲ್ಲಿ ಈ ಎಲ್ಲ ಸಂಖ್ಯೆಯನ್ನೂ ಮೀರಿ 800ರ ಗಡಿಯಲ್ಲಿ ಶಿಶುಗಳು ಜನಿಸಿವೆ. ಇದರಲ್ಲಿ 379 ಸಿಸೇರಿಯನ್ ಆಗಿದ್ದರೆ, ಇನ್ನುಳಿದವು ಸಹಜ ಹೆರಿಗೆಯಾಗಿವೆ. ತಿಂಗಳಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಶಿಶುಗಳು ಜನಿಸಿರುವುದು ಆಸ್ಪತ್ರೆಯ ಇತಿಹಾಸದಲ್ಲಿ ಮೊದಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೆಎಂಸಿ ಆಸ್ಪತ್ರೆಯ ಸಹಯೋಗದಲ್ಲಿ ಕೆಲಸ ಮಾಡುತ್ತಿರುವ ಈ ಆಸ್ಪತ್ರೆಯಲ್ಲಿ 32 ಸ್ತ್ರೀರೋಗ ತಜ್ಞರಿದ್ದಾರೆ. ಅತ್ಯುನ್ನತ ಸೇವೆಗೆ ಹೆಸರಾಗಿರುವ ಈ ಆಸ್ಪತ್ರೆಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಮಾತ್ರವಲ್ಲದೇ ಉಡುಪಿ, ದಾವಣಗೆರೆ, ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೇರಳದಿಂದಲೂ ಹೆರಿಗೆಗೆ ಗರ್ಭಿಣಿಯರು ದಾಖಲಾಗುತ್ತಾರೆ.
ಆಸ್ಪತ್ರೆಯಲ್ಲಿ ಗುಣಮಟ್ಟದ ಸೇವೆ, ರೋಗಿಗಳ ಸಮಸ್ಯೆಗೆ ಸೂಕ್ತ ಸ್ಪಂದನೆ ದೊರೆಯುತ್ತಿರುವುದು ಆಸ್ಪತ್ರೆಯ ಜನಪ್ರಿಯತೆಗೆ ಕಾರಣವಾಗಿದೆ. ಕೊರೊನಾ ಆರಂಭಿಕ ದಿನಗಳಲ್ಲಿಯೂ ಆಸ್ಪತ್ರೆಯಲ್ಲಿ ಉತ್ತಮ ಸೇವೆ ಲಭಿಸಿತ್ತು. 23 ಬೆಡ್ ಗಳನ್ನು ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಮೀಸಲಾಗಿರಿಸಲಾಗಿತ್ತು. ಈಚೆಗೆ ಕೊರೊನಾ ಸೋಂಕಿತ ಗರ್ಭಿಣಿಯರ ಸಂಖ್ಯೆ ಇಳಿಕೆಯಾಗಿದೆ. ಜೊತೆಗೆ ಅಕ್ಟೋಬರ್ ತಿಂಗಳಿನಲ್ಲಿ 800 ಶಿಶುಗಳು ಜನಿಸಿರುವುದು ಆಸ್ಪತ್ರೆಗೆ ಮತ್ತೊಂದು ಹಿರಿಮೆ ತಂದುಕೊಟ್ಟಿದೆ.