‘ಇಡೀ ಗ್ರಾಮ’ಕ್ಕೆ ಹರಡಿದ ಕೊರೊನಾ ವೈರಸ್, ಇಲ್ಲಿ ಒಬ್ಬ ಬಿಟ್ಟು ಉಳಿದವರೆಲ್ಲಾ ಸೋಂಕಿತರೇ..! – ಕಹಳೆ ನ್ಯೂಸ್
ಹಿಮಾಚಲ ಪ್ರದೇಶ: ದೇಶದಲ್ಲಿ ಕೊರೋನಾ ವೈರಾಸ್ ಹಾವಳಿ ಕೊಂಚ ತಗ್ಗಿತ್ತು ಎನ್ನುವ ಸಂದರ್ಭದಲ್ಲಿಯೇ ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಗುಜರಾತ್ನ ಅಹಮದಾಬಾದ್ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.
ಅದರಲ್ಲಿಯೂ ಚಳಿಗಾಲದಲ್ಲಿ ಇನ್ನಷ್ಟು ಈ ಸೋಂಕು ಹೆಚ್ಚಾಗಲಿದೆ. ಇದಾದ ಬಳಿಕ ಎರಡನೇ ಮತ್ತು ಮೂರನೇ ಹಂತದ ಕೊರೋನಾ ಕೆಲವು ರಾಜ್ಯಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಮತ್ತೊಂದು ಕಡೆ ವಿಶ್ವದ ಅನೇಕ ದೇಶಗಳು ಕೋವಿಡ್ ವಿರುದ್ಧ ಹೋರಾಡಲು ಲಸಿಕೆ ತಯಾರಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾವೆ. ಈ ಮಧ್ಯೆ ಹಿಮಾಚಲ ಪ್ರದೇಶದ ಒಂದು ಗ್ರಾಮದಲ್ಲಿ ಇಡೀ ಗ್ರಾಮವೇ ಸೋಂಕಿಗೆ ತುತ್ತಾಗಿರುವ ಕುರಿತು ವರದಿಯಾಗಿದೆ. ಗ್ರಾಮದ ಪ್ರತಿಯೊಬ್ಬರಲ್ಲಿಯೂ ಈ ಸೋಂಕು ದೃಢಗೊಂಡಿದ್ದು, ಒಬ್ಬನೇ ಒಬ್ಬ ವ್ಯಕ್ತಿಯಲ್ಲಿ ಮಾತ್ರ ಈ ಸೋಂಕು ಪತ್ತೆಯಾಗಿಲ್ಲ.