Recent Posts

Monday, January 20, 2025
ಹೆಚ್ಚಿನ ಸುದ್ದಿ

ಸೋನಿಯಾ ಗಾಂಧಿ ದೆಹಲಿ ತೊರೆಯಬೇಕು, ಚೆನ್ನೈನಲ್ಲಿ ಕೆಲಕಾಲ ವಾಸ? ವೈದ್ಯರ ಸಲಹೆ – ಕಹಳೆ ನ್ಯೂಸ್

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ದೀರ್ಘಕಾಲದ ಎದೆಯ ಸೋಂಕಿನಿಂದ ಬಳಲುತ್ತಿದ್ದಾರೆ. ಇನ್ನು ಇತ್ತಾ ದೆಹಲಿಯ ವಾತಾವರಣವೋ ದಿನ ದಿನಕ್ಕೂ ಹದಗೆಡುತ್ತಿದ್ದು, ವಾಯು ಮಾಲಿನ್ಯ ಹೆಚ್ಚುತ್ತಿದೆ. ಹಾಗಾಗಿ ವೈದ್ಯರು ಸೋನಿಯ ಗಾಂಧಿಯವರಿಗೆ ದೆಹಲಿ ತೊರೆಯುವಂತೆ ಸಲಹೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವೈದ್ಯರ ಸಲಹೆ ಮೇರೆಗೆ ಸೋನಿಯಾರನ್ನ ಕೆಲವು ದಿನಗಳ ಕಾಲ ಗೋವಾಕ್ಕೆ ಕರೆದೊಯ್ಯಲಾಗಿದೆ. ಅದ್ರಂತೆ, ಅವರು ಇಂದು (ಶುಕ್ರವಾರ) ಮಧ್ಯಾಹ್ನ ದೆಹಲಿಯಿಂದ ಪುತ್ರ ರಾಹುಲ್‌ ಗಾಂಧಿ ಅವರೊಂದಿಗೆ ಗೋವಾದ ಪಣಜಿಗೆ ಬಂದಿಳಿದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

‘ಕಳೆದ ಆಗಸ್ಟ್‌ನಲ್ಲಿ ಸೋನಿಯಾ ಗಾಂಧಿಯವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ ಸೋನಿಯಾ, ನಿಯಮಿತವಾಗಿ ಔಷಧಗಳನ್ನು ಸೇವಿಸುತ್ತಿದ್ದರು. ಈಗ ದೆಹಲಿಯಲ್ಲಿ ಮಾಲಿನ್ಯ ಹೆಚ್ಚಾದ ಕಾರಣ ಅವರ ಎದೆಯ ಸೋಂಕು ಸ್ಥಿರವಾಗಿತ್ತು. ಈ ಬಗ್ಗೆ ವೈದ್ಯರು ಕಳವಳ ವ್ಯಕ್ತಪಡಿಸಿದ್ದರು’ ಎಂದು ಮೂಲಗಳು ತಿಳಿಸಿವೆ.