Recent Posts

Sunday, January 19, 2025
ಹೆಚ್ಚಿನ ಸುದ್ದಿ

123456.. ನೀವು ಕೂಡ ಇದೇ ʼಪಾಸ್​ವರ್ಡ್ʼ​ ಇಟ್ಟಿದ್ದೀರಾ? ಹಾಗಾದ್ರೆ, ತಕ್ಷಣ ಚೇಂಜ್‌ ಮಾಡಿ – ಕಹಳೆ ನ್ಯೂಸ್

ನವದೆಹಲಿ: ನೀವು ಗೌಪ್ಯವಾಗಿಡುವ ಪಾಸ್​ವರ್ಡ್​ಗಳು ಅದೆಷ್ಟು ಸೇಫ್​ ಅನ್ನೋದು ನಿಮಗೆ ಗೊತ್ತಾ? ಯಾಕಂದ್ರೆ, ನಾವೇನು ನೆನಪಿನಲ್ಲಿ ಇಟ್ಟುಕೊಳ್ಳೊಕೆ ಸುಲಭವಾಗುತ್ತೆ ಅಂತಾ ಒಂದರಿಂದ ಒಂಬತ್ತರವೆರೆಗೆ ಅಂಕಿ ಒತ್ತಿ ಬಿಟ್ಟಿರ್ತೀವೆ. ಆದ್ರೆ, ನೆನಪಿರ್ಲಿ ಇದು ಅತ್ಯಂತ ಡೆಂಜರಸ್.

ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು, ಜಾಗತಿಕವಾಗಿ ಜನರು ಬಳಕೆ ಮಾಡುವ ಅತಿ ಕೆಟ್ಟ ಪಾಸ್​ವರ್ಡ್​ಗಳ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಈ ಪಟ್ಟಿಯ ಪ್ರಕಾರ 2020ರಲ್ಲಿ 123456 ಪಾಸ್​ವರ್ಡ್​ ಅತಿ ಹೆಚ್ಚು ಬಳಕೆಯಾಗಿದೆಯಂತೆ. ಹಾಗೆಯೇ ಇದು ಅತ್ಯಂತ ಕೆಟ್ಟ ಪಾಸ್​ವರ್ಡ್​ ಎನ್ನುವುದನ್ನೂ ಸಂಸ್ಥೆ ಹೇಳಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂದ್ಹಾಗೆ, 123456 ಪಾಸ್​ವರ್ಡ್​ನ್ನ 23 ಮಿಲಿಯನ್​ಗೂ ಹೆಚ್ಚು ಜನರು ಬಳಕೆ ಮಾಡುತ್ತಿದ್ದಾರೆ. ಹಾಗಾಗಿನೇ ಹ್ಯಾಕರ್​ಗಳಿಗೆ ಈ ಪಾಸ್​ವರ್ಡ್​ ಕಂಡುಹಿಡಿಯಲು ಒಂದು ಸೆಕೆಂಡಿಗಿಂತ ಕಡಿಮೆ ಸಮಯ ಸಾಕಾಗುತ್ತದಂತೆ. ಇನ್ನು ಕೆಟ್ಟ ಮತ್ತು ಅತಿ ಹೆಚ್ಚು ಬಳಕೆಯ ಪಾಸ್​ವರ್ಡ್​ಗಳ ಪಟ್ಟಿಯಲ್ಲಿ 123456789 ಎರಡನೇ ಸ್ಥಾನದಲ್ಲಿದೆ. ಇದಷ್ಟೇ ಅಲ್ಲದೇ ‘ಪಾಸ್​ವರ್ಡ್​’, ‘123123’, ‘12345’, ‘1234567890’ ಮುಂತಾದ ಪಾಸ್​ವರ್ಡ್​ಗಳು ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.