Recent Posts

Sunday, January 19, 2025
ಹೆಚ್ಚಿನ ಸುದ್ದಿ

ಇನ್ಮುಂದೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡೋಕೆ ಕನಿಷ್ಠ ʼ15 ವರ್ಷʼ ವಯಸ್ಸಾಗಿರ್ಲೇಬೇಕು – ಕಹಳೆ ನ್ಯೂಸ್

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕನಿಷ್ಠ ವಯಸ್ಸಿನ ನೀತಿಯನ್ನ ಜಾರಿಗೆ ತಂದಿದೆ. ಈ ನಿಯಮದ ಪ್ರಕಾರ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಆಡಬೇಕಾದರೆ ಆಟಗಾರನಿಗೆ ಕಡ್ಡಾಯವಾಗಿ 15 ವರ್ಷ ವಯಸ್ಸಾಗಿರಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ಐಸಿಸಿ ಈ ನಿಯಮವನ್ನ ಜಾರಿಗೊಳಿಸಿದ ಹೊರತಾಗಿಯೂ ದೇಶಗಳು ಇನ್ನೂ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಆಟಗಾರನನ್ನ ಕಣಕ್ಕಿಳಿಸುವ ಆಯ್ಕೆಯನ್ನ ಹೊಂದಿವೆ. ಆದ್ರೆ, ಅದು ಅಸಾಧಾರಣ ಸನ್ನಿವೇಶಗಳಲ್ಲಿ ಮಾತ್ರ. ಇನ್ನು ಇದಕ್ಕಾಗಿ ಐಸಿಸಿಗೆ ಆಯಾ ದೇಶಕ್ಕಾಗಿ ಆಡಲು ಅವಕಾಶ ನೀಡಲು ಮಂಡಳಿಗಳು ಅರ್ಜಿ ಸಲ್ಲಿಸಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ಐಸಿಸಿ ಪತ್ರಿಕಾ ಹೇಳಿಕೆಯಲ್ಲಿ, ಪುರುಷ ಅಥವಾ ಮಹಿಳೆಯರ ಕ್ರಿಕೆಟ್‌ನಲ್ಲಿ 19 ವಯೋಮಿತಿ ಹಾಗೂ ಯಾವುದೇ ಸ್ವರೂಪದ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಲು 15 ವರ್ಷ ವಯಸ್ಸನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದೆ.