Recent Posts

Sunday, January 19, 2025
ದಕ್ಷಿಣ ಕನ್ನಡಪುತ್ತೂರುರಾಜಕೀಯಸುದ್ದಿ

ಕಾನೂನು ಉಲ್ಲಂಘಿಸಿ, ಗೋಕಳ್ಳರಿಗೆ ಸಾಥ್ ನೀಡಿ ಅಧರ್ಮದ ಕೆಲಸ ಮಾಡುತ್ತಿದ್ದ ಡಾ. ಧರ್ಮಪಾಲ್ ವರ್ಗಾವಣೆ ; ಗೋಪಾಲಕ ಶಾಸಕ ಸಂಜೀವ ಮಠಂದೂರು ಖಡಕ್ ನಿರ್ಧಾರಕ್ಕೆ ಹಿಂದೂ ಪರ ಸಂಘಟನೆಗಳು ದಿಲ್ ಖುಷ್ – ಕಹಳೆ ನ್ಯೂಸ್

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋ ಹತ್ಯೆ, ಗೋ ಅಕ್ರಮ ಸಾಗಾಟ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ನಿರಾಯಾಸವಾಗಿ ಸಾಗುತ್ತಿರುವುದು, ಹಿಂದೂ ಪರ ಸಂಘಟನೆಗಳ ಆಕ್ರೋಶ ಕಾರಣವಾಗಿದೆ.

ಆದರೆ, ಪುತ್ತೂರಿನ ಪರಿಸ್ಥಿತಿ ಕೊಂಚ ಭಿನ್ನ, ತಾಲೂಕಿನಿಂದ ನೇರ ಕೇರಳಾ ಸಂಪರ್ಕ ವಿರುವ ಕಾರಣ ನಿರಂತರವಾಗಿ ಗಡಿಭಾಗದಲ್ಲಿ ಅಕ್ರಮ ಗೋಸಾಗಾಟ ಘಟನೆಗಳು ನಡೆಯುತ್ತಿತ್ತು, ಆದರೆ, ಅದನ್ನು ತಡೆದ ಪೊಲೀಸರು ಹಾಗೂ ಹಿಂದೂ ಸಂಘಟನೆಗೆಗಳಿಗೆ ಒಂದು ತಲೆನೋವು ಕಾಡುತ್ತಿತ್ತು, ಎಸ್, ಅದೇನೆಂದ್ರೆ ಕಾನೂನು ಉಲ್ಲಂಘಿಸಿ ಅನೇಕ ಅಕ್ರಮ ಸಾಗಾಟಗಳಿಗೆ ವೈದ್ಯಕೀಯ ಪರವಾನಿಗೆ ದೊರಕುತ್ತಿದ್ದು, ಇದರ ಆಧಾರದಲ್ಲಿ ಒಂದು ಪಿಕ್ ಅಪ್ ವಾಹನದಲ್ಲಿ 2 ಗೋವುಗಳನ್ನು ತುಂಬಿಕೊಂಡು ಹೋಗುತ್ತಿದ್ದ ದೂರಿನ ಬಗ್ಗೆ ಮನವಿಯನ್ನು ಸ್ವೀಕರಿಸಿ, ಅದರ ಬಗ್ಗೆ ಕೂಲಂಕುಷವಾಗಿ ತನಿಖೆಯನ್ನು ನಡೆಸಿ, ತುರ್ತಾಗಿ ಸಮಸ್ಯೆಗೆ ಸ್ಪಂದಿಸಿ ಇದೀಗ ಪುತ್ತೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸಂಜೀವ ಮಠಂದೂರು ಪರಿಹಾರ ಒಂದನ್ನು ನೀಡಿದ್ದು, ಹಿಂದೂ ಸಂಘಟನೆಗಳು ಸಂಜೀವಣ್ಣನಿಗೆ ಜೈ ಎನ್ನುತ್ತಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು, ನಿರಂತರವಾಗಿ ಗೋಕಳ್ಳತನ ಕೇಸ್ ಇರುವಂತಹ ವ್ಯಕ್ತಿಗಳ 2 ವಾಹನಕ್ಕೆ ದಿನನಿತ್ಯ ಕೇರಳ ಭಾಗಕ್ಕೆ ಅಕ್ರಮವಾಗಿ ದನಸಾಗಿಸಲು ಅನುಮತಿ ಕೊಡುತ್ತಿದ್ದ ಡಾ. ಧರ್ಮಪಾಲ್ ಪುತ್ತೂರು ಆಸ್ಪತ್ರೆ ಇವರನ್ನು ಕೊಯಿಲ ಫಾರ್ಮ್ ಗೆ ವರ್ಗಾವಣೆ ಮಾಡಲಾಗಿದೆ ಎಂಬ ಸುದ್ದಿ ತಾಲೂಕಿನಲ್ಲಿ ಕೇಳುತ್ತಿದ್ದಂತೆ ತಾಲೂಕಿನ ಸಂಘ ಪರಿವಾರದ ಕಾರ್ಯಕರ್ತರಲ್ಲಿ ಸಂತಸ ಮನೆ ಮಾಡಿದೆ. ಗೋಕಳ್ಳರಿಗೆ ಸಾಥ್ ನೀಡುತ್ತಿದ್ದ ವೈದ್ಯನ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು, ಸ್ವತಃ ಗೋಪಾಕರಾದ ಶಾಸಕರ ನಡೆದೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು