Tuesday, January 21, 2025
ಪುತ್ತೂರು

ಟ್ರೈಬಲ್ ಅಡ್ವೆಂಚರ್ ಕೆಫೆ ಬೆಂಗಳೂರು ಆಫ್ರೋಡ್ ಫೆಸ್ಟ್ : ಸ್ಪರ್ಧೆಯಲ್ಲಿ ಸುಧಿನ್ ರೈ ಪೆಟ್ರೋಲ್ ಮತ್ತು ಡೀಸೆಲ್ ಕ್ಲಾಸ್‌ನಲ್ಲಿ ಪ್ರಥಮ-ಕಹಳೆ ನ್ಯೂಸ್

ಪುತ್ತೂರು: ಟ್ರೈಬಲ್ ಅಡ್ವೆಂಚರ್ ಕೆಫೆ ಬೆಂಗಳೂರು ವತಿಯಿಂದ ಬೆಂಗಳೂರಿನಲ್ಲಿ ನವೆಂಬರ್ 14 ರಿಂದ 15ರವರೆಗೆ ನಡೆದ ಬೀಟ್‍ದ ಕ್ರೀಕ್ ಆಫ್ ರೋಡ್ ಫೆಸ್ಟ್ ಜೀಪು ಸ್ಪರ್ಧೆಯಲ್ಲಿ ಕೋಯಿಲದ ಸುಧಿನ್ ರೈ ನೆಲ್ಯೊಟ್ಟು ರವರು ಪೆಟ್ರೋಲ್ ಮತ್ತು ಡೀಸೆಲ್ ಕ್ಲಾಸ್ ನಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಜೀಪು ಸ್ಪರ್ಧೆಯಲ್ಲಿ ಒಟ್ಟು 20 ವಾಹನಗಳು ಭಾಗವಹಿಸಿದ್ದು, ಇದರಲ್ಲಿ ಕೋಯಿಲ ಗ್ರಾಮದ ನೆಲ್ಯೊಟ್ಟು ದಿ.ಸುಧಾಕರ್ ರೈ ಹಾಗೂ ಭಾರತಿ ಎಸ್.ರೈ ದಂಪತಿಗಳ ಪತ್ರ ಸುಧಿನ್ ರೈ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಉಪ್ಪಿನಂಗಡಿ ಲಕ್ಷ್ಮೀ ಪ್ರಸಾದ್ ಮೋಟಾರ್ ವಕ್ರ್ಸ್ ಹಾಗೂ ಲಕ್ಷ್ಮೀ ಪ್ರಸಾದ್ ಅರ್ಥ್ ಮೂವರ್ಸ್‍ನ ಮಾಲಕರಾಗಿರುವ ಸುಧಿನ್ ರೈ ಇವರು 2017 ನಾಶಿಕ್, ಮಹಾರಾಷ್ಟ್ರದಲ್ಲಿ ನಡೆದ ಮಹೀಂದ್ರ ಆಫ್ ರೋಡಿಂಗ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಹಾಗೂ ಬೆಳ್ತಂಗಡಿ ನೇಚರ್ ರೈಡ್, ಹೊನ್ನುಗುಡಿ ಆಫ್ ಬೀಟ್, ಇಂಡಿಯನ್ ಏ.ಡಬ್ಲ್ಯೂ.ಡಿ ಬೆಂಗಳೂರು, ಇಂಡಿಯನ್ ಏ.ಡಬ್ಲ್ಯೂ.ಡಿ ಮೂಡಿಗಿರೆ, ಆನ್ ದ ರಾಕ್ಸ್ ಆಫ್ ದ ರೋಡ್ ಮಂಗಳೂರು, ಎಕ್ಸ್ಟ್ರೀಮ್ ಆಫ್ ರೋಡ್ ಕಣ್ಣೂರು, ಮಹೀಂದ್ರ ಗ್ರೇಟ್ ಎಸ್ಕೇಪ್ ಸಕಲೇಶಪುರ, ದಕ್ಷಿಣ ಭಾರತ ಮಟ್ಟದ ಆಫ್ ರೋಡ್ ಫೆಸ್ಟ್ ಒಂದೇ ಸ್ಪರ್ಧೆಯಲ್ಲಿ ಪೆಟ್ರೋಲ್, ಓಪನ್ ಕ್ಲಾಸ್ ನಲ್ಲಿ ಪ್ರಥಮ ಮತ್ತು ಡೀಸೆಲ್ ಕ್ಲಾಸ್‍ನಲ್ಲಿ ದ್ವೀತಿಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. 2019ರಲ್ಲಿ ಸಕಲೇಶಪುರದಲ್ಲಿ ನಡೆದ ಮಹೀಂದ್ರ ಗ್ರೇಟ್ ಎಸ್ಕೇಪ್ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದು ಮುಂದೆ ಮಹಾರಾಷ್ಟ್ರದಲ್ಲಿ ನಡೆಯುವ ಮಹೀಂದ್ರ ಅಡ್ವೆಂಚರ್ ಟ್ರೋಫಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇನ್ನು ಪುತ್ತೂರಿನ ಕೀರ್ತಿ ಪತಾಕೆಯನ್ನು ಮುಗಿಲೇತ್ತರಕ್ಕೆ ಹಾರಿಸಿದ ಸುಧಿನ್ ರೈ ಅವರು ಕೋಯಿಲ ಗ್ರಾಮದ ಜನರ ಮನ್ನಣೆಗೆ ಪಾತ್ರರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು